Sunday, April 21, 2013

Pralaya Bheeti


ಪ್ರಳಯ – ಯಾಕ್ ಆಗ್ಲಿಲ್ಲಾ?


ಪ್ರಳಯ ಅಂತೂ ಆಗ್ಲಿಲ್ಲ ಬಟ್ ಈ ಮಾಧ್ಯಮಗಳು ಜನರ ಮನಸಿನಲ್ಲಿ ಬಹಳ ಪ್ರಳಯ ಸೃಷ್ಟಿಸಿದರು. ಇವರುಗಳು ಸೃಷ್ಟಿಸಿರುವ ಭೀತಿಯಿಂದ ಅದೆಸ್ಟು ಜನ, BP ಏರಿಸಿಕೊಂಡ್ರೋ? ಅದೆಸ್ಟು ಜನ ಬೇಗನೆ ಸತ್ತಹೋದರೋ ? ಅದೆಸ್ಟು ಜನಗಳು ಕೆಲಸ ಬಿಟ್ಟು, ಪ್ರಳಯಕ್ಕಾಗಿ ಕಾಯಿತಾ ಇದ್ರೊ ? ಈ ಮಾಧ್ಯಮದದವರು ಸೃಷ್ಟಿ ಮಾಡಿದ ಪ್ರಳಯಕ್ಕೆ, ನಾವೆಲ್ಲಾ ಮರುಳಾದ್ವಿ. ನಮಗೇನೂ ಬರಲಿಲ್ಲ ಬಟ್ ಅವರುಗಳು ಚೆನ್ನಾಗಿ ದುಡ್ಡು ಮಾಡಿಕೊಂಡರು, TRP ರೇಟಿಂಗ್ ಬೆಳಸಿಕೊಳ್ಳಲು ಈ ಪ್ರಪಂಚ ಕೊನೆಯಾಗುತ್ತದೆ ಎಂದು ನಾಂದಿ ಹಾಡಿಯೇಬಿಟ್ಟರು. ಪಾಪ! ನೀವು ಗಳು ಮತ್ತು ನಾವು ಗಳು ಮಾಡಿದ್ದು ಇಸ್ಟೇ, ಟೈಮ್ ವೆಸ್ಟ್. ಗಂಟೆಗಟ್ಟಲೆ, ಈ ಮಾದ್ಯಮದವರು ಪ್ರಸಾರ ಮಾಡಿದ ಕಾರ್ಯಕ್ರಮಗಳನ್ನು ನೋಡಿದೆವು.
 


ಮಾಯನ್ ಕ್ಯಾಲಂದರ್ ಪ್ರಕಾರ 2012 ಡಿಸೆಂಬರ್ ತಿಂಗಳಲ್ಲಿ, ಪ್ರಳಯ ಆಗಬೇಕಿತ್ತು ಬಟ್ ಏನು ಆಗ್ಲಿಲ್ಲ, ಒಂದು ಭೂಕಂಪವೂ ಸಂಭವಿಸಲಿಲ್ಲ. ಅದೆಸ್ಟು NGO ಗಳು, ಸಂಘ ಸಂಸ್ಥೆಗಳು ಜನರಿಂದ ದುಡ್ಡು ವಸೂಲಿ ಮಾಡುದ್ರೋ, ಪ್ರಳಯದ ಭೀತಿಯಿಂದ ಅದೆಸ್ಟು ಶ್ರೀಮಂತರು ದಾನ, ಧರ್ಮಾದಿಗಳನ್ನು ಮಾಡಿಬಿಟ್ರು. ಸೃಷ್ಟಿ ಒಂದು ದಿನ ಅಂತ್ಯ ವಾಗಿ ಮತ್ತೆ ಚಲನೆಯಲ್ಲಿ ಬರಲೇ ಬೇಕು ನಿಜ ಬಟ್ ಅದನ್ನು ಈ ಸೃಷ್ಟಿಯೇ ತೀರ್ಮಾನಿಸುತ್ತೆ, ಈ ಜಗತ್ತಿನ ನಿಯಮ ಕರ್ತನಾದ, ಆ ದೇವನೇ ಇದನ್ನು ನಿರ್ಣಯಿಸುತ್ತಾನೆ.

ಇನ್ಮೇಲಾದ್ರು , ಈ ಭಯವನ್ನು ಹುಟ್ಟಿಸೂ ಈ ಮಾಧ್ಯಮಗಳನ್ನು ಪ್ರಶ್ನೆ ಮಾಡಿ, ಕೇಳಿ ಅವರುಗಳ ಹತ್ರ ಏನು ಸಾಕ್ಷಿ ಇದೆ ಅಂತ. ಸುಮ್ನೆ ಮನೆಯಲ್ಲಿ ಕೂತಿರೋ ಹೆಂಗಸರ, ಮಕ್ಕಳ, ತಲೆ ಕೆಡಿಸುವ ಅಧಿಕಾರ ಇವರಿಗಿಲ್ಲ. ಇಲ್ಲಾ ಸರ್ಕಾರ ಇದರ ಕಡೆ ಗಮನ ಕೊಟ್ಟು, ಒಳ್ಳೆ ಕಾನೂನನ್ನು ತರ ಬೇಕು. ಈ ಮಾದ್ಯಮಗಳ ಕಿವಿ ಹಿಂಡ ಬೇಕು.

No comments:

Post a Comment