Friday, April 12, 2013

Cricket - Gangnam Style


ಕ್ರಿಕೆಟ್ - ಗಂಗ್ನಂ ಸ್ಟೈಲ್





ಇವರು ಕ್ರಿಕೆಟ್ ಆಟಗಾರರೋ, ಇಲ್ಲ ಡ್ಯಾನ್ಸಿಂಗ್ ಹೀರೋಗಳೋ? ನನಗಂತೂ ಒಂದೂ ಅರ್ಥವಾಗುತ್ತಿಲ್ಲ. ಕ್ರಿಕೆಟ್ ಆಡೋದು ಬಿಟ್ಟು ಸಿನಿಮಾ ಹಿರೋಗಳ ಹಾಗೆ ಡಾನ್ಸ್ ಮಾಡ್ತಾರೆ, ನಟಿಸುತ್ತಾರೆ, ಫ್ರೆಂಚ್ ಬಿಯರ್ಡ್ ಬಿಡುತ್ತಾರೆ, ತಲೆಯ ಕುದುಲಿಂದ ಸ್ಪೈಕ್ಸ್ ಬಿಡ್ತಾರೆ. ಸ್ಟೈಲ್ ಜಾಸ್ತಿ, ಕ್ರಿಕೆಟ್ ಕಡಿಮಿ. ಇವರುಗಳ ಉದ್ದೇಶ, ಕ್ರಿಕೆಟ್ ಆಡೋದಲ್ಲ ಬಟ್ ದುಡ್ಡು ಗಳಿಸೋದು. ಕ್ರಿಸ್ ಗೈಲ್, ಇವನು ವೆಸ್ಟ್-ಇಂಡೀಸ್ ಆಟಗಾರ. ಒಂದು ಕ್ಯಾಚ್ ಹಿಡದ್ರೆ ಸಾಕು, ಹುಚ್ಚೆದ್ದು ಗಂಗ್ನಂ ಡಾನ್ಸ್ ಕ್ರಿಕೆಟ್ ಮೈದಾನದ ಮೇಲೆ ಕುಣಿಯುತ್ತಾನೆ. ಎಷ್ಟು ಸಾದ್ಯವಾಗುತ್ತೋ, ಅಸ್ಟು ನಾಟಕ ಮಾಡ್ತಾರೆ. ಏನಕ್ಕೆ? ಜಾಹಿರಾತುಗಾಗಿ, ಬ್ರಾಂಡ್ ಇಮೇಜಗಾಗಿ. ನಮ್ಮ ವೀಕ್ಷಕರಿಗೆ, ಅದೇನೋ ಗೊತ್ತಿಲ್ಲ, ವಿಪರೀತ ಹುಚ್ಚು ಕ್ರಿಕೆಟ್ ಅಂದ್ರೆ. ಹಾಗೆ ದುಡ್ಡು ಸುರಿಯುತ್ತಾರೆ, ಈ ಐಪಿಎಲ್ ಮ್ಯಾಚ್ಗಳಿಗೆ. ಒಂದೊಂದು ಟಿಕೆಟ್ಗೆ, ೧೦೦೦-೧೦೦೦೦ ವರೆಗೂ ಕೊಟ್ಟು, ಈ ಮೂರು ತಾಸಿನ ಹುಚ್ಚಿಗೆ ಶರಣಾಗಿ ಬರುತ್ತಾರೆ. ಮತ್ತೆ ಎಸ್ಟೋ ದಿನಗಳು, ಇದರ ಬಗ್ಗೆ ಚರ್ಚಿಸುತ್ತಾರೆ. ಒಬ್ಬ ವೀರ ಯೋಧ, ನಮ್ಮ ದೇಶದ ಗಡಿಯಲ್ಲಿ ವೀರಮರಣ ಹೊಂದಿದರೆ, ಅದರ ಬಗ್ಗೆ ಒಂದು ನಿಮಿಷ ಚರ್ಚಿಸುವುದಿಲ್ಲ. ಸರಿ ಅವರ ಮನೆಯವರಿಗೆ ಒಂದು ನೂರು ರೂಪಾಯಿ ಕಳಿಸುವುದಿಲ್ಲ. ಸರಿ ಐಪಿಎಲ್(IPL) ಹೋಗ್ಲಿ, ಅದೇನೋ ಸಿಸಿಎಲ್(CCL) ಅಂತೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್. ಎಲ್ಲಾ ಟಿವಿ ಆರ್ಟಿಸ್ಟ್, ಸಿನಿಮಾ ಆರ್ಟಿಸ್ಟ್ ಗಳು ಸೇರಿ, ಬೇರೆ ರಾಜ್ಯಗಳ ಜೊತೆ ಕ್ರಿಕೆಟ್ ಆಡೋದು. ನಮ್ಮ ಸಿನಿಮಾ ಹೀರೋಗಳು ಯಾವಾಗ ಕ್ರಿಕೆಟ ಆಟಗಾರರಾದರೋ ಗೊತ್ತಿಲ್ಲ, ಅದನ್ನು ನೋಡಲು ನಮ್ಮವೀಕ್ಷಕರು ಹೋಗ್ತಾರೆ.


      “ ಜನ ಮರುಳೋ, ಜಾತ್ರೆ ಮರುಳೋ” ಗೊತ್ತಿಲ್ಲ.




ನಮ್ಮ ರಿಯಲ್ ಹೀರೋಗಳು ಇವರಲ್ಲವೇ?  ದಿ ಇಂಡಿಯನ್ ಆರ್ಮಿ.


ಇವರೆಲ್ಲ ರಿಯಲ್ ಹೀರೋಗಳು ಬಟ್ ಕ್ರಿಕೆಟಿಗರು, ಸಿನಿಮಾ ಸ್ಟಾರ್ಸ್ ಇವರುಗಳು ರೀಲ್ ಹೀರೋಗಳು, ಅಸ್ಟೆ. 

2 comments: