Tuesday, April 16, 2013

bottle gourd - Sorekaayi


ಸೋರೆಕಾಯಿ

ಸೋರೆಕಾಯಿ, ಆಂಗ್ಲದಲ್ಲಿ ಇದನ್ನು “ಬಾಟಲ್ ಗಾರ್ಡ್” ಎಂದು ಕರೆಯುತ್ತಾರೆ. ಹಿಂದಿ ಯಲ್ಲಿ ಇದನ್ನು ಲವ್ಕಿ(lauki) ಎಂದು ಕರೆಯುತ್ತಾರೆ. ನಾನು ಇದರ ಬಗ್ಗೆ ಏನಕ್ಕೆ ಬರಿತ್ತಿದ್ದಿನಿಯೆಂದರೆ, ಇದರ ಉಪಯೋಗ ನನಗು ಆಗಿದೆ. ನನಗೆ ಅಸಿಡಿಟಿ ಮತ್ತು ಎದೆ ಉರಿ ೨-೩ ವರ್ಷದಿಂದ ಅನುಭವಿಸುತ್ತಿದ್ದೆ, ಯಾರೋ ಮಹನೀಯರು ತಮ್ಮ ಭಾಷಣದಲ್ಲಿ ಸೋರೆಕಾಯಿ ತಿಂದರೆ, ಅಸಿಡಿಟಿ(ACIDITY) ಮತ್ತು ಎದೆ ಉರಿ(HEART BURN) ಮಾಯವಾಗುತ್ತೆ ಎಂದು ಹೇಳಿದರು.

 


ಅದನ್ನೇ ನಾನು ಪ್ರಯೋಗ ಮಾಡಿದೆ, ವಾರಕ್ಕೆ ೩-೪ ದಿನ ಸೋರೆಕಾಯಿ ತಿನ್ನಲು ಪ್ರಾರಂಭ ಮಾಡಿದೆ. 80% ಚೇತರಿಕೆ ಕಾಣಿಸಿಕೊಂಡಿತು, ಹಾಗೆ ಇದನ್ನು ವಿಧವಿಧವಾಗಿ ತಿನ್ನಲು ಪ್ರಾರಂಭಿಸಿದೆ, ಒಂದು ದಿನ ಸೋರೆಕಾಯಿ ಪಲ್ಯ, ಸೋರೆಕಾಯಿ ಸಾಂಬಾರ್, ಸೋರೆಕಾಯಿ ಜ್ಯೂಸು. ಹೀಗೆ ಇದನ್ನು ನಾನು ಸೇವಿಸುತ್ತ 3-4 ತಿಂಗಳುಗಳಾದವು, ನಾನು ಇವಾಗ ಹೇಳ ಬಲ್ಲೆ ನನಗೆ ಅಸಿಡಿಟಿ ಪೂರ್ತಿ ಕಂಟ್ರೋಲ್ ಆಗಿದೆ, ಹೊಟ್ಟೆ ತಣ್ಣಗೆ ಇದೆ.

 



ಸೋರೆಕಾಯಿ ಒಂದು ಕ್ಷಾರೀಯ ಪದಾರ್ಥ, ಹೊಟ್ಟೆ ಒಳಗೆ ಊಟದ ನಂತರ ತಯಾರಿಯಾಗುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಹೀಗೆ ಜಾಸ್ತಿ ಆಮ್ಲ ನಮ್ಮ ರಕ್ತವನ್ನು ಸೇರದೆ ತಡೆಯುತ್ತದೆ, ಹಾಗು ರಕ್ತದಲ್ಲಿ ಆಮ್ಲತೆಯನ್ನು ಕಡೆಮೆ ಮಾಡಿ ಎದೆ ಉರಿಯನ್ನು ಹತೋಟಿಯಲ್ಲಿ ಇಡುತ್ತದೆ. ಇದು ದೇಹಭಾರ ಇಳಿಸಲು ಬಹಳ ಒಳ್ಳೆ ಔಷಧ. ವಾರಕ್ಕೆ 4-5 ದಿನಗಳು ಇದರ ಜ್ಯೂಸು ಮಾಡಿ, 2-3 ತಿಂಗಳು ಕುಡಿದರೆ ನಿಮ್ಮ ದೇಹತೂಕ ಕಡಿಮೆಯಾಗುತ್ತದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ potassium ಇರುವುದರಿಂದ hypertension(ಆಧಿಕ ಒತ್ತಡ) ಕಡಿಮೆಯಗಿತ್ತದೆ. ಮಲಬದ್ಧತೆ, ಗ್ಯಾಸ್ ಪ್ರಾಬ್ಲಮ್, ಮೂಲವ್ಯಾಧಿ ಮುಂತಾದವುಗಳಿಗೆ ಒಳ್ಳೆ ಔಷಧಿ. ಅತಿಸಾರ ಅಥವಾ ಜುಲಾಬು(diarrhea) , ಮೂತ್ರದ ಉರಿ ಇರುವರಿಗೆ, ಇದರ ಜ್ಯೂಸು ಕುಡಿದರೆ ವಾಸಿಯಾಗುತ್ತದೆ. ತಲೆ ಕುದುಲು ಉದುರುವಿಕೆ ಇದ್ದರೆ, ಇದನ್ನು ಅವಾಗವಾಗ ತಿನ್ತಾಯಿರಿ. ಇದು ಕಾಂತಿಯುತವಾದ ಚರ್ಮ ಬೆಳೆಯಲು ಸಹಾಯ ಮಾಡುತ್ತದೆ.
ಸಾಂಬಾರ್ ಮಾಡುವಾಗ ದೊಡ್ದಕಾಯಿ ಯನ್ನು ಹೆಚ್ಚಿ, ಅದನ್ನು ಸ್ವಲ್ಪ ನೆ ಕುದಿಸಬೇಕು. ಜಾಸ್ತಿ ಫ್ರೈ ಅಥವಾ ಕುದಿಸಬೇಡಿ(dont boil too much), ಕಾಯಿ ಅಥವ ಹೋಳು ಸ್ವಲ್ಪ ಗಟ್ಟಿಯಾಗೇ ಇರಬೇಕು, ಹಾಗೆ ಮಾಡಿಕೊಂಡು ತಿನ್ನಿ.



Food value of bottle gourd per 100 gms edible portion:


Moisture
96.1%
Protein           
0.2%
Fat
0.1%
Minerals
0.5%
Fibre
0.6%
Carbohydrates
2.5%
Calcium
20mg
Phosphorous
10mg
Iron
0.7mg
Potassium
0-100mg
Calorific Value
12
Small amount of vitamin B Complex.



ರೆಡ್ – ಅಲರ್ಟ್ :

ಸೋರೆಕಾಯಿ ಕಹಿಯಾಗಿದ್ದರೆ ತಿನ್ನ ಬೇಡಿ, ಯೆಸದುಬಿಡಿ. ತಿಂದರೆ ಬಹಳ ಕೆಟ್ಟ ಪರಿಣಾಮ ಮಾಡುತ್ತದೆ. ಇದು ಎಷ್ಟು ಒಳ್ಳೆ ತಿನುಸೂ ಅಸ್ಟೆ ಕಹಿ ಯಾದಲ್ಲಿ ಕೆಟ್ಟದ್ದು, ವಿಷಕಾರಿ. ಕಹಿಯಾಗಿದ್ದರೆ ಬಳಸಲೇಬೇಡಿ.



3 comments:

  1. olle vishaya tilisidiri. thanks

    ReplyDelete
  2. the skin of bottle gourd can be used to reduce weight, peel the skin and make juice. take it in empty stomach in morning for 3 months. 20-30% weight reduction can be achieved

    ReplyDelete
  3. ನಮಸ್ಕಾರ ಸುಧಿ...ತರಕಾರಿ ಸೊರೆಕಾಯಿ ಬಳಕೆಯಿಂದ ನಮಗೆ ಸಿಗುವ ಪ್ರಯೋಜನಗಳ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ನಾನು ಬ್ಲಾಗು ಬರೆಯುವ ಉದ್ದೇಶವೂ ಅದೇ ಆಗಿದ್ದು ಜನರಿಗೆ ಉಪಯೋಗವಾದಲ್ಲಿ ತುಂಬಾ ಸಂತೋಷ.
    ಧನ್ಯವಾದಗಳು
    ನಳಿನಿ ಸೋಮಯಾಜಿ

    ReplyDelete