Showing posts with label Arogya(Health). Show all posts
Showing posts with label Arogya(Health). Show all posts

Thursday, October 24, 2013

Temple Body Rolling Excercise

The benefits of temple body rolling excercise is immense. i have given this excercise the name "Temple Body Rolling" excercise, because this is generally done in indian temples. The physical benefits of this excercise are :

1. Good blood circulation in the entire body.
2. Huge amount of fresh blood is pumped to brain and other parts of the head.Thus curing many head and brain related ailments.
3. During this excercise we inhale lots of oxygen, and this is good to rejenuvate body cells. And if this excercise if done in open space like Temples, Mountains you get fresh oxygen to inhale.
4. Due to rolling excercise your entire body gets good physiotherapy massage. Thus giving you a good relaxation to muscles.People who have insomnia or sleeplessness can try this, you can get a sound sleep for hours.
5. All Tridoshas of the body will be balanced by this excercise. Bile,Mucus & Air.
6. All the gases which are struck in intestine,stomach in the body come out of the body and you feel very light and relaxed.
7. If you do this excercise regularly you excretary system gets good blood curculation and its functionality is improved.
8. Immense sweating takes place while doing this excercise, especially your head region and mid body sweats a lot. Sweat removes all the waste and dead cells from the body.
9. Do this excercise atleast once a week for 3 to 5 minutes.
10. Our ancestors did this as a belief, but i can say this has tremendous health benefits and magical cures to many ailments.



Tuesday, April 16, 2013

bottle gourd - Sorekaayi


ಸೋರೆಕಾಯಿ

ಸೋರೆಕಾಯಿ, ಆಂಗ್ಲದಲ್ಲಿ ಇದನ್ನು “ಬಾಟಲ್ ಗಾರ್ಡ್” ಎಂದು ಕರೆಯುತ್ತಾರೆ. ಹಿಂದಿ ಯಲ್ಲಿ ಇದನ್ನು ಲವ್ಕಿ(lauki) ಎಂದು ಕರೆಯುತ್ತಾರೆ. ನಾನು ಇದರ ಬಗ್ಗೆ ಏನಕ್ಕೆ ಬರಿತ್ತಿದ್ದಿನಿಯೆಂದರೆ, ಇದರ ಉಪಯೋಗ ನನಗು ಆಗಿದೆ. ನನಗೆ ಅಸಿಡಿಟಿ ಮತ್ತು ಎದೆ ಉರಿ ೨-೩ ವರ್ಷದಿಂದ ಅನುಭವಿಸುತ್ತಿದ್ದೆ, ಯಾರೋ ಮಹನೀಯರು ತಮ್ಮ ಭಾಷಣದಲ್ಲಿ ಸೋರೆಕಾಯಿ ತಿಂದರೆ, ಅಸಿಡಿಟಿ(ACIDITY) ಮತ್ತು ಎದೆ ಉರಿ(HEART BURN) ಮಾಯವಾಗುತ್ತೆ ಎಂದು ಹೇಳಿದರು.

 


ಅದನ್ನೇ ನಾನು ಪ್ರಯೋಗ ಮಾಡಿದೆ, ವಾರಕ್ಕೆ ೩-೪ ದಿನ ಸೋರೆಕಾಯಿ ತಿನ್ನಲು ಪ್ರಾರಂಭ ಮಾಡಿದೆ. 80% ಚೇತರಿಕೆ ಕಾಣಿಸಿಕೊಂಡಿತು, ಹಾಗೆ ಇದನ್ನು ವಿಧವಿಧವಾಗಿ ತಿನ್ನಲು ಪ್ರಾರಂಭಿಸಿದೆ, ಒಂದು ದಿನ ಸೋರೆಕಾಯಿ ಪಲ್ಯ, ಸೋರೆಕಾಯಿ ಸಾಂಬಾರ್, ಸೋರೆಕಾಯಿ ಜ್ಯೂಸು. ಹೀಗೆ ಇದನ್ನು ನಾನು ಸೇವಿಸುತ್ತ 3-4 ತಿಂಗಳುಗಳಾದವು, ನಾನು ಇವಾಗ ಹೇಳ ಬಲ್ಲೆ ನನಗೆ ಅಸಿಡಿಟಿ ಪೂರ್ತಿ ಕಂಟ್ರೋಲ್ ಆಗಿದೆ, ಹೊಟ್ಟೆ ತಣ್ಣಗೆ ಇದೆ.

 



ಸೋರೆಕಾಯಿ ಒಂದು ಕ್ಷಾರೀಯ ಪದಾರ್ಥ, ಹೊಟ್ಟೆ ಒಳಗೆ ಊಟದ ನಂತರ ತಯಾರಿಯಾಗುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಹೀಗೆ ಜಾಸ್ತಿ ಆಮ್ಲ ನಮ್ಮ ರಕ್ತವನ್ನು ಸೇರದೆ ತಡೆಯುತ್ತದೆ, ಹಾಗು ರಕ್ತದಲ್ಲಿ ಆಮ್ಲತೆಯನ್ನು ಕಡೆಮೆ ಮಾಡಿ ಎದೆ ಉರಿಯನ್ನು ಹತೋಟಿಯಲ್ಲಿ ಇಡುತ್ತದೆ. ಇದು ದೇಹಭಾರ ಇಳಿಸಲು ಬಹಳ ಒಳ್ಳೆ ಔಷಧ. ವಾರಕ್ಕೆ 4-5 ದಿನಗಳು ಇದರ ಜ್ಯೂಸು ಮಾಡಿ, 2-3 ತಿಂಗಳು ಕುಡಿದರೆ ನಿಮ್ಮ ದೇಹತೂಕ ಕಡಿಮೆಯಾಗುತ್ತದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ potassium ಇರುವುದರಿಂದ hypertension(ಆಧಿಕ ಒತ್ತಡ) ಕಡಿಮೆಯಗಿತ್ತದೆ. ಮಲಬದ್ಧತೆ, ಗ್ಯಾಸ್ ಪ್ರಾಬ್ಲಮ್, ಮೂಲವ್ಯಾಧಿ ಮುಂತಾದವುಗಳಿಗೆ ಒಳ್ಳೆ ಔಷಧಿ. ಅತಿಸಾರ ಅಥವಾ ಜುಲಾಬು(diarrhea) , ಮೂತ್ರದ ಉರಿ ಇರುವರಿಗೆ, ಇದರ ಜ್ಯೂಸು ಕುಡಿದರೆ ವಾಸಿಯಾಗುತ್ತದೆ. ತಲೆ ಕುದುಲು ಉದುರುವಿಕೆ ಇದ್ದರೆ, ಇದನ್ನು ಅವಾಗವಾಗ ತಿನ್ತಾಯಿರಿ. ಇದು ಕಾಂತಿಯುತವಾದ ಚರ್ಮ ಬೆಳೆಯಲು ಸಹಾಯ ಮಾಡುತ್ತದೆ.
ಸಾಂಬಾರ್ ಮಾಡುವಾಗ ದೊಡ್ದಕಾಯಿ ಯನ್ನು ಹೆಚ್ಚಿ, ಅದನ್ನು ಸ್ವಲ್ಪ ನೆ ಕುದಿಸಬೇಕು. ಜಾಸ್ತಿ ಫ್ರೈ ಅಥವಾ ಕುದಿಸಬೇಡಿ(dont boil too much), ಕಾಯಿ ಅಥವ ಹೋಳು ಸ್ವಲ್ಪ ಗಟ್ಟಿಯಾಗೇ ಇರಬೇಕು, ಹಾಗೆ ಮಾಡಿಕೊಂಡು ತಿನ್ನಿ.



Food value of bottle gourd per 100 gms edible portion:


Moisture
96.1%
Protein           
0.2%
Fat
0.1%
Minerals
0.5%
Fibre
0.6%
Carbohydrates
2.5%
Calcium
20mg
Phosphorous
10mg
Iron
0.7mg
Potassium
0-100mg
Calorific Value
12
Small amount of vitamin B Complex.



ರೆಡ್ – ಅಲರ್ಟ್ :

ಸೋರೆಕಾಯಿ ಕಹಿಯಾಗಿದ್ದರೆ ತಿನ್ನ ಬೇಡಿ, ಯೆಸದುಬಿಡಿ. ತಿಂದರೆ ಬಹಳ ಕೆಟ್ಟ ಪರಿಣಾಮ ಮಾಡುತ್ತದೆ. ಇದು ಎಷ್ಟು ಒಳ್ಳೆ ತಿನುಸೂ ಅಸ್ಟೆ ಕಹಿ ಯಾದಲ್ಲಿ ಕೆಟ್ಟದ್ದು, ವಿಷಕಾರಿ. ಕಹಿಯಾಗಿದ್ದರೆ ಬಳಸಲೇಬೇಡಿ.



Saturday, February 2, 2013

Jersey Haalu - Namage idu beda!


ಜೆರ್ಸಿ ಹಾಲು – ಇದು ನಮಗೆ ಬೇಡ!

ಹಸು(ಆಕಳು) ಹಾಲು ವಾತ್ಸಲ್ಯ ಭರಿತ, ಪ್ರಾಣ ಶಕ್ತಿಯುಳ್ಳ ಹಾಲು. ಎಲ್ಲಾ ಹಾಲುಗಳಲ್ಲಿ ಶ್ರೇಷ್ಟವಾದ ಹಾಲು ಆಕಳು ಹಾಲು. ದೇವಲೋಕದಲ್ಲಿ ದೇವತೆಗಳು ಅಮೃತ ಕುಡಿದು ಹೇಗೆ ಮೃತ್ಯುವನ್ನು ಜೈಸಿದರೋ, ಹಾಗೆ ಭೂಲೋಕದಲ್ಲಿ ಮನುಷ್ಯರು ಅಮೃತ ರೂಪದಲ್ಲಿ ಇರುವ ಆಕಳು(ಹಸು) ಹಾಲನ್ನು ಕುಡಿದು ಸಕಲ ರೋಗಗಳನ್ನು ಜೈಸಬಹುದು, ಪೂರ್ಣಾಯು ಜೀವಿಸಬಹುದು. ಆಕಳು ಹಾಲಿನ ಉತ್ಪನ್ನಗಳಾದ ಬೆಣ್ಣೆ,ತುಪ್ಪ ಅಮೃತದ ಇನ್ನೊಂದು ರೂಪಗಳು, ಮನುಷ್ಯನ ದೇಹದ ವಾತ, ಪಿತ್ತ ದೋಷಗಳನ್ನು ಸರಿ ಮಾಡುವ ಶಕ್ತಿ, ಈ ತುಪ್ಪಕ್ಕೆ ಇದೆ. ತುಪ್ಪವನ್ನು ಬಿಸಿಯಾಗಿ ಕಾಯಿಸಿ ತಿಂದರೆ ಬಹಳ ಲಾಭಕಾರಿ. ಆಕಳು ತುಪ್ಪ ನೋಡುವುದಕ್ಕೆ ಬೆಳ್ಳಗೆ ಇರಬಾರದು, ಅದು ಬಂಗಾರದ ಬಣ್ಣ ಆಗಿರಬೇಕು. ಹಾಗೆ ಇದ್ದರೆ ಅದು ನಿಜವಾದ ಆಕಳು ತುಪ್ಪ, ಇಲ್ಲವಾದರೆ ಅದು ಎಮ್ಮೆ ತುಪ್ಪವೋ ಅಥವಾ ಕಲಬೇರೆಕೆಯ ವಸ್ತು ಆಗಿರುತ್ತದೆ. ಅದಕ್ಕೆ ತುಪ್ಪ ಕೊಳ್ಳುವಾಗ ಹುಷಾರ್! ಯಾವುದಾದರು ಗೋಶಾಲಕ್ಕೆ ಹೋಗಿ ಕೊಳ್ಳುವುದು ಒಳ್ಳೆಯದು. ಹಳೆಯ ಕಾಲದಲ್ಲಿ ಒಬ್ಬ ಮನುಷ್ಯ ತಿಂಗಳಿಗೆ ಕನಿಸ್ಟ್ ೫ ಲೀಟರ್ ತುಪ್ಪ ತಿನ್ನುತ್ತಿದ್ದ, ಇವತ್ತಿನ ಪೀಳಿಗೆ ೫ ಸ್ಪೂನ್ ತಿಂದರೆ ದೊಡ್ಡದು. ಎಲ್ಲಾ ಈ ಡಾಕ್ಟರ್ಸ್ ಗಳ ಮಹಿಮೆ, ಎಲ್ಲಾ ರೋಗಿಗಳನ್ನು ಹೆದರಿಸಿ ಬಿಡುತ್ತಾರೆ. ತುಪ್ಪತಿಂದರೆ ಕೊಲೆಸ್ಟ್ರೋಲ್(cholestrol) ಅಂತ. ತುಪ್ಪ ತಿಂದರೆ ಕೊಲೆಸ್ಟ್ರೋಲ್ ಬರುವುದಿಲ್ಲ ಬಟ್ ಕೆಟ್ಟ ಕೊಲೆಸ್ಟ್ರೋಲನ್ನು ನಾಶ ಮಾಡುತ್ತದೆ ಹಾಗು ಒಳ್ಳೆ ಕೊಲೆಸ್ಟ್ರೋಲನ್ನು ಬೆಳೆಸುತ್ತದೆ. ನೀವು LDL ಹಾಗು HDL ಬಗ್ಗೆ ಅಂತು ಕೇಳಿರಬಹುದು. ತುಪ್ಪದಿಂದ HDL(good cholestrol) ಜಾಸ್ತಿಯಾಗಿ ಕೆಟ್ಟ ಕೊಲೆಸ್ಟ್ರೋಲನ್ನು ಹೊರಗೆ ಹಾಕುತ್ತದೆ. ಸೊ ತುಪ್ಪವನ್ನು ಕಣ್ಣು ಮುಚ್ಚಿಕೊಂಡು ತಿನ್ನಿ, ಏನೂ ಭಯವಿಲ್ಲ. ರಾತ್ರಿ ಮಲಗುವಾಗ ಬಿಸಿ-ಬಿಸಿ ಆಕಳು ಹಾಲಿನಲ್ಲಿ, ಎರಡು-ಮೂರು ಡ್ರಾಪ್ ತುಪ್ಪ ಹಾಕಿಕೊಂಡು ೧೦-೧೫ ಬರಿ ಚೆನ್ನಾಗಿ ಕಲಿಸಿ ಕುಡಿಯಿರಿ, ಯಾವ ಮೈ-ಕೈ ನೋವು ಬರುವುದಿಲ್ಲ ಹಾಗು ಯಾವ ಸಂಧಿ, ಸೊಂಟ ನೋವು ಬರುವುದಿಲ್ಲ.






“ಎನ್ ಆಪಲ್ ಎ ಡೇ, ಕೀಪ್ಸ್ ಡಾಕ್ಟರ ಅವೇ” ಇವತ್ತು ಹೇಳ್ತಾರೆ ಬಟ್ ಅದು ಸುಳ್ಳು. ಆಪಲ್ ತಿಂದರೆ ಒಳ್ಳೆಯದೇ ಬಟ್ ನಮ್ಮಪುರಾಣದಲ್ಲಿ ಹೇಳಿದ್ದಾರೆ “ಯಾವ ಮನಯೇ ಮುಂದೆ ತುಳಸಿ ಹಾಗು ಮನೆಯ ಹಿತ್ಲಲ್ಲಿ ಆಕಳು(ಹಸು) ಇರತ್ತೂ, ಆ ಮನೆಗೆ ವೈದ್ಯನು ಬರುವ ಅವಶ್ಯಕತೆ ಇಲ್ಲ”( ja ghar tulsi aur gaya ta ghar vaidya kabhi na aye). ಇದು ನಮ್ಮ ವಿಜ್ಞಾನ ಸರ್! ಅದು ಬಿಟ್ಟು ಬ್ರೆಡ್(bread), ಬಟರ್(butter), ಜಾಮ್(jam) ಎಂದು ಆ ಪಾಸ್ಚ್ಯತರನ್ನು(westerners) ಫಾಲೋ ಮಾಡುತ್ತಿದ್ದೇವೆ. ಪಾಸ್ಚ್ಯತರ(westerners) ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ. ದಿನಕ್ಕೆ ೨-೩ ಬಾರಿ ಮಾಂಸ ತಿಂದು, ಆಲ್ಕೋಹಾಲ್ ಕುಡಿದೆ ಜೀವನ ಮಾಡುವವರನ್ನು ಯಾಕೆ ಫಾಲೋ ಮಾಡ್ತಾರೂ ಗೊತ್ತಿಲ್ಲ, ನಮ್ಮ ಈ ಮಾಡ್ರನ್ ಭಾರತೀಯರು.
ಭಾರತೀಯ ಆಕಳುಗಳ ಹಾಲು “A2 type”, ಜೆರ್ಸಿ(jersey) ಆಕಳು ಹಾಲು “A1 type”. A2 ಹಾಲು ಬಹಳ ಒಳ್ಳೆಯದು, ಅದಕ್ಕೆ ರೋಗ ನಿರೋದಕ ಗುಣಗಳಿವೆ, ಅದರಲ್ಲಿ ಪ್ರಾಣ ಶಕ್ತಿ ಹೆಚ್ಚು. ಜೆರ್ಸಿ ಆಕಳು ಹಾಲು ಪೂತನಿಯ ಹಾಲು, ಅದು ಹಾಲೆ ಅಲ್ಲ ಬಟ್ ಹಾಲಾಹಲ(ವಿಷ). ಇಂದಿನ ಪೀಳಿಗೆಗೆ ಡಯಾಬಿಟಿಸ್, ಹೃದಯ ರೋಗಗಳಿಗೆ ಕಾರಣವೇ ಈ ಕ್ರಾಸ್ ಬ್ರೀಡ್ ಜೆರ್ಸಿ ಹಾಲು. ಇದರಿಂದ ಮ್ಯಾಡ್-ಕೌ ಡಿಸಿಸ್(mad cow disease) ಬರುತ್ತೆ, ಮಕ್ಕಳ ಬುದ್ದಿ ಬೆಳವಣಿಗೆ ಕಡಿಮೆಯಾಗುತ್ತೆ ಗೊತ್ತಾ? ಇದು ನಿಮಗೆ ಗೊತ್ತಿಲ್ಲ. ಹಾಲು ಉತ್ಪಾದನ ಕಂಪನಿಗಳು ಇದನ್ನು ಮುಚ್ಚುತ್ತಿದ್ದಾರೆ. ಎಮ್ಮೆ ಹಾಲು ಕೂಡ ಒಳ್ಳೆಯದಲ್ಲ. ಆಕಳ ಹಾಲೇ ಸರ್ವ ಶ್ರೇಷ್ಠ. ಅದರಲ್ಲೂ ಭಾರತದ “ತಳಿ”ಯ ಆಕಳು ಜಗತ್ತಿನ ಎಲ್ಲಾ ಆಕಳಿಗಿಂತ ಶ್ರೇಷ್ಠ, ಹಾಗು ಅದರ ಹಾಲು ಅಮೃತ.


ನಮ್ಮ ಜಾತಿಯ ಹಸುಗಳನ್ನು ನಾವು ರಕ್ಷಿಸ ಬೇಕು. ಪಾಸ್ಚ್ಯತರು ಹಾಗು ನಮ್ಮ ಮೂರ್ಖ ತಜ್ಞರು ನಮ್ಮ ತಳಿಯ ಹಸುಗಳನ್ನು ನಾಶಮಡುತ್ತಿದ್ದಾರೆ. ಅಲ್ಲಿಯ ಉರುಸ್ ಎಂಬ  ಗೂಳಿಯ(bull) ವೀರ್ಯವನ್ನು ನಮ್ಮ ಆಕಳಿಗೆ ನೀಡಿ ಮಿಶ್ರ ತಳಿಯನ್ನು ಸೃಷ್ಟಿಸಿ ನಮ್ಮ ತಳಿಗಳನ್ನು ಹಾಳುಮಾಡುತ್ತಿದ್ದಾರೆ. ಈ ಜೆರ್ಸಿ ಹಸು ಅದೇ ಪ್ರಯೋಗದಿಂದ ಬಂದ ತಳಿ. ಇದು ಆಕಳು ಅಲ್ಲ, ಇದು ಪೂತನಿ. ಇದರ ಹಾಲಿನಿಂದ ಯಾವ ಪ್ರಯೋಜನವೂ ಇಲ್ಲಾ, ಬರಿ ಕ್ಯಾಲ್ಸಿಯಂ ಪ್ರಮಾಣ ಬಿಟ್ಟರೆ. ಆದರೆ ಇದರಿಂದ ಬಹಳ ಮಾಂಸ ದೊರೆಯುತ್ತದೆ, ಅದಕ್ಕೆ ಪಾಸ್ಚ್ಯತರು ಈ ಕುತಂತ್ರ ವೆಸಗಿದ್ದಾರೆ.









ಅದಕ್ಕೆ ಕೃಷ್ಣನು ಭೂಮಿಯ ಮೇಲೆ, ಯಾದವನಾಗಿ ಈ ಪಶುವನ್ನೇ ಕಾಯೆದ. ಗೋಕುಲದಲ್ಲಿ ಇದ್ದವರೆಲ್ಲಾ ಇದರ ಹಾಲು, ಬೆಣ್ಣೆ ತಿಂದು ಸಾತ್ವಿಕ ಬುದ್ದಿ ಹೊಂದಿದವರಾಗಿದ್ದರು, ಎಂದು ಕೃಷ್ಣನ್ ಕೈ ಬಿಡಲಿಲ್ಲ. ನಾವೆಲ್ಲಾ ಇದರ ರಕ್ಷಣೆಗೆ ಮುಂದಾಗಬೇಕು, ಮತ್ತೆ ನಮ್ಮ ಭಾರತವನ್ನು ಸಂಪತ್ಭರಿತವಾದ ದೇಶವನ್ನಾಗಿ ಮಾಡಬೇಕು. ಜೆರ್ಸಿ, ಎಮ್ಮೆ ಹಾಲನ್ನು ಮಕ್ಕಳಿಗೆ ಕುಡಿಸಬೇಡಿ, ಆಕಳು ಹಾಲನ್ನೇ ಕುಡಿಸಿ.ಮನೆಯಲ್ಲಿ ನಾಯಿ ಸಾಕುವ ಬದಲು, ಆಕಳನ್ನು ಸಾಕಿ. ನಾಯಿ ಬೇಕಾದರೆ ಹೊರಗಡೆ, ಮನೆಯ ಮುಂದೆ ಸಾಕಿಕೊಳ್ಳಿ. ಹಿಂದೆ ನಮ್ಮ ಭರತಖಂಡ ಸಮೃಧವಾಗಿರಲು ಕಾರಣ ಈ ಆಕಳು. ಟ್ರ್ಯಾಕ್ಟರ್ ನಿಂದ ಹೊಲ-ಗದ್ದೆ ಹೂಳುವಬದಲು, ಬಸವನನ್ನು, ಆಕಳನ್ನು ಉಪಯೋಗಿಸಿ. ಇವೆ ನಮ್ಮ ರೈತರ ಬೆನ್ನೆಲಬ್ಬಾಗಿತ್ತು, ಮುಂದೆನೂ ಇವುಗಳನೆ ಕೃಷಿಗೆ ಬಳಸಬೇಕು.ಹುಳುವ ಯೋಗಿಯ ಜೊತೆ ಈ ದೈವಿ ಪ್ರಾಣಿ ಕೂಡಿದರೆ ಮತ್ತೆ ನಮ್ಮ ಭೂಮಿಯಲ್ಲಿ ಅಮೃತವನ್ನು ತೆಗೆಯಬಹುದು, ಮತ್ತೆ ನಮ್ಮ ಖಂಡವನ್ನು ಸಕಲ ರೋಗ ಮುಕ್ತ, ಅನ್ನ ಭರಿತ, ಸಾತ್ವಿಕರನ್ನು ಹೊಂದಬಹುದು.
                                                         

Monday, October 22, 2012

Naavu Putana Makkala ?




ನಾವು ಪುತನಾ(ಪೂತನಿ) ಮಕ್ಕಳಾ?





ನಾವು ನಮ್ಮ ನಾಗರಿಕತೆಯನ್ನು ಆಳವಾಗಿ ಅಧ್ಯಯನ ಮಾಡಿದರೆ, ನಮಗೆ ತಿಳಿಯುವ ಸತ್ಯವೇನೆಂದರೆ, ನಾವು ನಮ್ಮ ಅನುಭವದಿಂದ ಜೀವನೋಪಾಯಗಳನ್ನು ಕಲಿತುಕೊಂಡು, ಅವುಗಳನ್ನು ಅನುಸರಿಸುತ್ತಾ ಬಂದೆವು.  ನಾವು ಪಟ್ಟಿರುವ ಅನುಭವಗಳಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ಇತ್ತು. ನಾವು ಇದು ಒಳ್ಳೆಯ “ಅನುಭವ”  ಎಂಬ ನಿರ್ಧಾರಕ್ಕೆ ಬರಲು ಬಹಳ ವರ್ಷಗಳ ಸಂಶೋಧನೆ, ಎಲ್ಲರ ಅಭಿಪ್ರಾಯಗಳು, ತರ್ಕವಾದಿಗಳ ಜೊತೆ ಚರ್ಚಿಸಿ, ಈ ಒಳ್ಳೆಯ ಅನುಭವಗಳನ್ನು ಸಿದ್ಧಾಂತ, ಶಾಸ್ತ್ರ, ಗಣಿತ, ವೇದಗಳೆಂದು ಹೆಸರಿಟ್ಟು, ಅವುಗಳನ್ನು ನಮ್ಮ ನಾಗರಿಕತೆಗೆ ಅಥವಾ ಪೀಳಿಗೆಗೆ ಹಸ್ತಾಂತರ ಮಾಡುತ್ತಾ ಬಂದೆವು. ನಾವು ಕಲೆಹಾಕಿರುವ ವೇದಗಳು, ಶಾಸ್ತ್ರಗಳು ನಮ್ಮ ಹವಮಾನಕ್ಕೆ ಅನುಗುಣವಾಗಿ, ನಮ್ಮ ಮಣ್ಣು, ನೀರು, ಸೂರ್ಯ, ಗಾಳಿ, ಇವುಗಳಿಗೆ ತಕ್ಕಂತೆ ಅವುಗಳನ್ನು ರೂಪಿಸಲಾಗಿದೆ.  ಇವುಗಳನ್ನು ಅನುಸರಿಸುತ್ತಾ ನಮ್ಮ ಪೂರ್ವಜರು ಒಳ್ಳೆಯ ಜೀವನ ನಡೆಸಿದರು.  ಗೆಳೆಯರೇ, ಇಲ್ಲಿ ಒಳ್ಳೆಯ ಜೀವನವೆಂದರೆ ಅಧ್ಯಾತ್ಮಿಕವಾಗಿ, ಸಂಪ್ರದಾಯಕವಾಗಿ, ಆರೋಗ್ಯವಾಗಿ ಎಂಬರ್ಥ. ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ವಿಜ್ಞಾನಕ್ಕೆ ಏನೂ ಕೊರತೆ ಇರಲ್ಲಿಲ್ಲ, ಅದರಲ್ಲೂ ಚಿಕಿತ್ಸೆ, ಔಷಧಿಗಳಲ್ಲಂತೂ ಬಹಳ ಮೇಲುಗೈಯಿತ್ತು.  ಅದನ್ನೇ ನಾವು ಇವಾಗ ಅರ್ಯುವೇದ, ಹೋಮಿಯೋಪತಿ, ಯುನಾನಿ ಎಂದು ಕರೆಯುತ್ತೇವೆ.
ಸಾವಿರಾರು ವರ್ಷಗಳಿಂದಲೂ, ನಮ್ಮ ಕೃಷಿಗಾಗಿ ಬಳಸುತ್ತಿದ್ದ, ವಿಜ್ಞಾನ ಹಾಗೂ ತಂತ್ರಜ್ಞಾನ ಬಹಳ ಉಪಯೋಗಕಾರಿ ಹಾಗೂ ಫಲಪ್ರದವಾಗಿತ್ತು.  “ಕೃಷಿ ಪರಶರ” ಎಂಬ ಪುರಾತನ ಸಂಸ್ಕøತ ಸಂಗ್ರಹದಲ್ಲಿ ಕೃಷಿಯ ಬಗ್ಗೆ ಅಗಿನಿಂದಲೂ ಅನುಸರಿಸುತ್ತಿದ್ದ ವಿಧಾನಗಳನ್ನು ವಿವರಿಸಲಾಗಿದೆ.  ರೈತರು ನಮ್ಮ ಸನಾತನ ವಿಜ್ಞಾನವನ್ನು ಬಳಸಿಕೊಂಡು, ಒಳ್ಳೆಯ ಬೆಳೆಯನ್ನು ತೆಗೆಯುತ್ತೀದ್ದರು.  ಅದಕ್ಕೆ ದೊಡ್ಡ ಸಾಕ್ಷಿ ಏನೆಂದು ಕೇಳಿದರೆ, ನಮ್ಮ ಇತಿಹಾಸವೇ ಅದಕ್ಕೆ ದೊಡ್ಡ ಪ್ರಮಾಣ.  ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶ.  ಯಾವಾಗಲೂ ಸಸ್ಯ ಶಾಮಲವಾದ, ದವಸ-ಧಾನ್ಯಗಳಲ್ಲಿ ಸಮೃದ್ದವಾಗಿದ್ದಂತಾ ದೇಶ. ಒಳ್ಳೆಯ ಫಸಲು ಬೆಳೆದು ನಮ್ಮ ಮಾರುಕಟ್ಟೆಗಳಲ್ಲಿ ಮಾರುವುದಲ್ಲದೇ, ಯೋರೋಪ್, ಆಫ್ರಿಕಾ ಖಂಡಗಳಲ್ಲಿ ನಾವು ಪದಾರ್ಥಗಳ ವಿನಿಮಯ ಮಾಡುತ್ತೀದ್ದೆವು.  ನಾವು ಇಷ್ಟು ಸಂಪತ್ತಭರಿತವಾಗಿರಲು ನಾವು ಅನುಸರಿಸುತ್ತಿದ್ದ ಸನಾತನ ಕೃಷಿ ವಿಧಾನಗಳೇ ಕಾರಣ.  ಆ ಕೃಷಿ ಪದ್ಧತಿಗಳನ್ನು ನಾವಿಂದು ಸಾವಯವ ಕೃಷಿ (organic farming) ಎಂದು ಕರೆಯುತ್ತೇವೆ. ಈ ಸಾವಯವ ಕೃಷಿಯನ್ನು ನಾವು ಪಾಚೀನ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ, ಹೆಸರು ಮಾತ್ರ ಬೇರೆ ಇಟ್ಟುಕೊಂಡಿದ್ದೇವೆ ಅಷ್ಟೆ. 
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 5-10 ವರ್ಷಗಳ ನಂತರ, ಕೆಲವು ರಾಜ್ಯಗಳಲ್ಲಿ ಬರ ಹಾಗೂ ನದಿ ಪ್ರವಾಹಗಳಿಂದ ಕೃಷಿ ಬೆಳೆ ನಾಶವಾಗಿ, ಹೊರ ದೇಶದಿಂದ ಆಹಾರ, ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಯಿತು.  ಹಾಗೂ ಮುಂದಿನ ದಶಕಗಳಲ್ಲಿ ಆಹಾರ ಕೊರತೆಗಳನ್ನು ನಿಗಿಸಲು, ಅಗಿನ ಸರ್ಕಾರಗಳು ಅಜೈವಿಕ ಕೃಷಿಯನ್ನು ನಮ್ಮ ಭಾರತಕ್ಕೆ ಪರಿಚಯಿಸಿದರು.  ಇದರಿಂದ ಭಾರತ ದೇಶ ಐದಾರು ವರ್ಷಗಳಲ್ಲಿ, ತನ್ನ ಆಹಾರ ಕೊರತೆಯನ್ನು  ನಿಗಿಸಿದಲ್ಲದೇ, ಹೆಚ್ಚಿನದನ್ನು ಹೊರದೇಶಗಳಿಗೆ ಮಾರಿದರು.  ಇಲ್ಲಿಗೆ ಅಜೈವಿಕ ಕೃಷಿಯನ್ನು ನಾವು ನಿಲ್ಲಿಸಿ, ಮತ್ತೆ ಸಾವಯವ ಕೃಷಿಗೆ ಮರಳಬೇಕಾಗಿತ್ತು, ಅದರೆ ಅದು ಅಗಲಿಲ್ಲ.  ಅಜೈವಿಕ (inorganic) ಪದ್ಧತಿಗಳಿಂದ ಹೆಚ್ಚು ಬೆಳೆ ಬಂದಿದ್ದರಿಂದ ರೈತರು ಹಾಗೂ ಸರ್ಕಾರಗಳ ಆಸೆ ಹೆಚ್ಚಾಯಿತು.  ಅತಿ ಹೆಚ್ಚಾಗಿ ಉತ್ಪಾದಿಸಿ, ಹಣ ಗಳಿಸಲಿಕ್ಕೆ ನಿಂತರು.  ಇದಲ್ಲದೇ ಆಂಗ್ಲರು, ಇನ್ನು ಶಕ್ತಿಶಾಲಿ ರಾಸಾಯನಿಕ ಗೊಬ್ಬರಗಳನ್ನು, ಕ್ರಿಮಿನಾಶಕಗಳನ್ನು ತಯಾರಿಸಿ, ಅದರ ದುಷ್ಪರಿಣಾಮಗಳನ್ನು ಮರೆಮಾಚಿ, ನಮ್ಮ ದೇಶದಲ್ಲಿ ಮಾರತೊಡಗಿದರು, ಇಲ್ಲೇ ಕಾರ್ಖಾನೆಗಳನ್ನು ಸ್ಥಾಪಿಸಿದರು.  ನಾವು ಸಾವಯವ ಕೃಷಿಯಲ್ಲಿ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಬೆರಣಿ (cow dung), ಗೋಮುತ್ರ (cow urine) ಹಾಗೂ ಸಸ್ಯ ತ್ಯಾಜಗಳಿಂದ(plant waste) ತಯಾರಿಸಿ ಬಳಸುತ್ತೇವೆ.  ಮೊದಲು ನಮ್ಮ ಪೂರ್ವಜರು ಇದೇ ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಇದರಿಂದ ನಮಗೆ ಉತ್ತಮ ಹಾಗೂ ಆರೋಗ್ಯಕರ ಬೆಳೆಗಳು ಬರುತ್ತಿದ್ದವು.  ಅದರೆ ಇವತ್ತು ಅಜೈವಿಕ ಕೃಷಿಯಿಂದ ನಮ್ಮ ಭೂಮಿ, ತನ್ನ ಫಲವತ್ತತೆಯನ್ನು ಕಳೆದುಕೊಂಡು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುವಂತಾಗಿದೆ.  ಇದರಿಂದ ಮಣ್ಣಿನಲ್ಲಿ  ಹೆಚ್ಚು ರಾಸಾಯನಿಕ ಸೇರಿಕೊಂಡು ಮಣ್ಣನ್ನು ವಿಷವನ್ನಾಗಿ ಮಾಡುತ್ತಿದೆ.  ಹೆಚ್ಚು ರಾಸಾಯನÀದಿಂದ, ಮಣ್ಣು ಸುಟ್ಟು ಹೋಗುತ್ತಿರುವ ಲಕ್ಷಣಗಳು ಕಾಣಿಸಿಕೊಂಡಾಗ,  ರೈತರು ಇನ್ನೂ ಹೆಚ್ಚು ನೀರನ್ನು ತಮ್ಮ ಕೃಷಿ ಭೂಮಿಗೆ ಉಣಿಸಬೇಕಾಯಿತು. ಮಣ್ಣಿನಲ್ಲಿ ಹೆಚ್ಚಾಗಿರುವ ರಾಸಾಯನಿಕ ಪದಾರ್ಥಗಳು ತರಕಾರಿಗಳಲ್ಲಿ, ಹಣ್ಣುಗಳಲ್ಲಿ, ಧಾನ್ಯಗಳಲ್ಲಿ ಸೇರಿಕೊಂಡವು, ಅಮೇಲೆ ಅವು ನಮ್ಮ ಶರೀರವನ್ನು ಸೇರಿದವು.  ಮಣ್ಣಿಗೆ ಹಾಗೂ ಫಸಲುನಲ್ಲಿ ಸಿಂಪಡಿಸಲಾದ ರಾಸಾಯನಿಕ ಕ್ರಿಮಿನಾಶಕಗಳು, ನಾವು ತಿನ್ನುವ ಪದಾರ್ಥಗಳಲ್ಲಿ ಸೇರಿಕೊಂಡವು.  ಹಾಗಾಗಿ ನಾವು ತಿನ್ನುವ ಪ್ರತಿಯೊಂದು ಪದಾರ್ಥ ವಿಷಮಯವೇ.  ಅಮೃತವನ್ನು ಉಣ್ಣಿಸುವ ನಮ್ಮ ಭೂಮಿ ತಾಯಿ, ಇವಾಗ ವಿಷವನ್ನು ಉಣಿಸುತ್ತಿದ್ದಾಳೆ.  ಅದಕ್ಕೆ ಕಾರಣ ನಾವು ಅವಳಿಗೆ ಬಡಿಸುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ಅನುಸರಿಸುತ್ತಿರುವ ಅಜೈವಿಕ ಪದ್ಧತಿಗಳೇ ಕಾರಣ.
ಅಜೈವಿಕ ಕೃಷಿಯಿಂದಾಗುವ ದುಷ್ಪರಿಣಾಮಗಳನ್ನು ನಾನ್ನಿಲ್ಲಿ ಪಟ್ಟಿ ಮಾಡಲು ಇಚ್ಚಿಸುತ್ತೇನೆ.  ಮೊದಲನೆಯದಾಗಿ ಹೇಳಬೇಕೆಂದರೆ ನಮ್ಮ ಕೃಷಿ ಭೂಮಿಯಲ್ಲಿ ದೊಡ್ಡ ಪ್ರಮಾಣದಲ್ಲಿರುವ ಏರೆಹುಳು (ಮಳೆ ಹುಳು), ಅವುಗಳನ್ನು ನಾವು ಕೊಲ್ಲುತ್ತಿದ್ದೇವೆ.  ಅಜೈವಿಕ ಕೃಷಿಯಲ್ಲಿ  ಬಳಸಲಾಗುವ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳೇ,  ಅವುಗಳನ್ನು ಸಾಯಿಸುತ್ತಿವೆ.  ಅದ್ದರಿಂದ ರೈತರ ಸ್ನೇಹ ಜೀವಿಗಳೆಂದು ಕರೆಯಲಾಗುವ ಏರೆಹುಳುಗಳು ಇವತ್ತಿನ ಪರಿಸ್ಥಿತಿಯಲ್ಲಿ ಭೂಮಿಯಲ್ಲಿ ಸಿಗುವುದಿಲ್ಲ, ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತವೆ.  ಏರೆಹುಳುಗಳ ಲಾಭ ಏನೆಂದರೆ ಎಲ್ಲಾ ರೈತರಿಗೆ ಹಾಗೂ ಸಾಮಾನ್ಯ ಜನರಿಗೂ ಗೊತ್ತು.  ಅತೀ ಹೆಚ್ಚು ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮಣ್ಣು ಸುಟ್ಟು ಹೋಗುತ್ತಿದೆ, ಅದರಿಂದಾಗಿ ಭೂಮಿಯು ತನ್ನ ಫಲವಂತಿಕೆ (fertility) ಕಳೆದುಕೊಳ್ಳುತ್ತಿದೆ.  ಭೂಮಿಯ ಫಲವಂತಿಕೆಯನ್ನು ಮತ್ತೆ ನೈಜ ರೂಪಕ್ಕೆ ತರಲು, ಬಹಳ ಸಮಯ ಹಾಗೂ ಪರಿಶ್ರಮ ಬೇಕಾಗುತ್ತದೆ.  ಮಣ್ಣಿನ ತೇವಾಂಶ ಕಡಿಮೆಯಾಗಿ ಭೂಮಿಗೆ ಹೆಚ್ಚು ನೀರುಣಿಸಬೇಕಾಗುತ್ತಿದೆ.  ಇದರಿಂದ ರೈರಿಗೆ ಹೆಚ್ಚಿನ ಖರ್ಚು ಹಾಗೂ ಅಂತರ್ಜಲವನ್ನು  ಹೆಚ್ಚಿನ ಪ್ರಮಾಣದಲ್ಲಿ ಹೊರಗೆಡಬೇಕಾಗುತ್ತಿದೆ.  ನಿಮಗೆಲ್ಲಾ ಗೊತ್ತು ಭಾರತದ ಬಹುತೇಕ ನಗರಗಳಲ್ಲಿ ಅಂತರ್ಜಲದ ಸಮಸ್ಯೆ ಉಲ್ಬಣವಾಗುತ್ತಿದೆ.  ಅದಲ್ಲದೇ ಇನ್ನೊಂದು ಗಮನಿಸುವ ವಿಷಯವೆಂದರೆ, ನಾವು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ, ನಮ್ಮ ಅಂತರ್ಜಲವನ್ನು ಸೇರುತ್ತಿದೆ.  ಅದನ್ನೆ ನಾವು ಕುಡಿಯುವ ನೀರು ಹಾಗೂ ದಿನನಿತ್ಯ ಕಾರ್ಯಗಳಿಗೆ ಬಳಸುತ್ತಿದ್ದೇವೆ.  ನೀರಿನ ರುಚಿಯಂತು ಕೇಳಬೇಡಿ. ಇನ್ನೂ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು, ನಮ್ಮ ಶರೀರ ಸೇರಿ, ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತಿವೆ.  ಹೀಗಿರುವಾಗ ತಾಯಿಯ ಹಾಲಿನಲ್ಲೂ ಇದು ಸೇರಿ, ತಾಯಿಯ ಹಾಲು ಕುಡಿಯುವ ಕಂದಮ್ಮಗಳಿಗೆ, ಸೋಡಿಯಂ ಅಧಿಕ ಪ್ರಮಾಣದಲ್ಲಿ ಸೇರಿ ಸೋಡಿಯಂಅಧಿಕ್ಯತೆ(hypernatremia) ಗೆ ತುತ್ತಾಗುತ್ತಿದ್ದಾರೆ.  ಇದರಿಂದ ಕಂದಮ್ಮಗಳು (ಹಸುಗೂಸು) ಅತಿಯಾಗಿ ಡೀಹೈಡ್ರೇಷನ್ (dehydration) ಗೆ ಒಳಗಾಗುತ್ತಿದ್ದಾರೆ.  ಇದಲ್ಲದೆ ಇವತ್ತಿನ ಸಣ್ಣ ಮಕ್ಕಳು ಎಷ್ಟೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.  ಇವತ್ತಿನ ವೈದ್ಯರು ಹೇಳುವುದನ್ನು ನೀವು ಕೇಳಿರಬಹುದು, ಅದೆನೇಂದರೆ “ ಇವತ್ತಿನ ಮಕ್ಕಳು ಬಹಳ ನಾಜೂಕು, ಸೂಕ್ಷ್ಮ.  ಬೇಗೆನೆ ಅವಕ್ಕೆ ಕಾಯಿಲೆಗಳು ಅಂಟಿಕೊಳ್ಳುತ್ತೆ, ಅವುಗಳು ಹವಮಾ£ದ ಏರುಪೇರುಗಳಿಗೆ ಬಹಳ ಬೇಗ ತುತ್ತಾಗುತ್ತಾರೆ, ಹೀಗೆಲ್ಲಾ ಹೇಳುತ್ತಾರೆ.”  ಇದಕ್ಕೆಲ್ಲಾ ಏನು ಸ್ವಾಮಿ ಕಾರಣಗಳು?  ನಮ್ಮ ತಾಯಿ ನಮಗೆ ಉಣಿಸುತ್ತಿರುವ ಹಾಲು ಹಾಗೂ ಪದಾರ್ಥಗಳೇ ಇದಕ್ಕೆ ಕಾರಣ. ಈಗಿನ ಎಷ್ಟೂ ತಾಯಂದಿರು ತಮ್ಮ ಎದೆ ಹಾಲನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆ,  ಅದರಲ್ಲಿ ಇರೋ ಸೋಡಿಯಂ, ಯುರಿಯಾಗಳ ಪ್ರಮಾಣವನ್ನು ತಿಳಿದುಕೊಂಡು, ತಮ್ಮ ಮಕ್ಕಳಿಗೆ ಎದೆಹಾಲು ಕೊಡುವುದೊ ಅಥವಾ ಬೇಡವೂ ಎಂದು ನಿರ್ಧರಿಸುತ್ತಿದ್ದಾರೆ.  ನಮ್ಮನ್ನು ಜನ್ಮ ಕೊಟ್ಟ  ತಾಯಂದಿರೆ “ಪುತನಾ” ಗಳಾದರೆ ಹೇಗೆ?  ನಮಗೆ ಅಕ್ಕಿ, ಜೋಳ, ಗೋದಿ, ರಾಗಿ ಹಾಗೂ ಹಣ್ಣುಗಳು, ತರಕಾರಿಗಳನ್ನು ನೀಡುವ ನಮ್ಮ ಭೂಮಿತಾಯಿ “ಪುತನಾ”ವಾದಳೇ?


ನೀವು ಪುತನಾ ಕಥೆ ಕೇಳಿರಬಹುದು, ದ್ವಾಪರ ಯುಗದಲ್ಲಿ ಕೃಷ್ಣನು ಇನ್ನೂ ಕಂದಮ್ಮವಾಗಿದ್ದಾಗ, ಕೃಷ್ಣನನ್ನು ತನ್ನ ಸ್ತನದ ಹಾಲನ್ನು (ಎದೆಹಾಲು) ವಿಷವಾಗಿ ನೀಡಿ, ಕೊಲ್ಲಲು ಯತ್ನಿಸಿದಳು.  ಆದರೆ ಕೃಷ್ಣನು, ಅದನ್ನು ಮೊದಲೆ ಅರಿತು ಅವಳ ಪ್ರಾಣವನ್ನು ತೆಗೆಯುತ್ತಾನೆ.  ಅದರೆ ನಾವು ಕೃಷ್ಣನಂತೆ ದೈವಿ ಮಗು ಅಲ್ಲ, ಕೃಷ್ಣನಂತೆ ಸಶಕ್ತರೂ ಅಲ್ಲ. ನಮ್ಮ ತಾಯಂದಿರು ವಿಷಪೂರಿತ ಧಾನ್ಯಗಳು, ತರಕಾರಿಗಳು, ಹಣ್ಣು, ನೀರು, ಗಾಳಿಯನ್ನು ಸೇವಿಸಿ ಪುತನಾ ಗಳಾಗಿದ್ದಾರೆ. ಇದನ್ನೆಲ್ಲಾ ಪೂರೈಸುವ ಭೂಮಿತಾಯಿಯೂ ಕೂಡ ಪುತನಾ ವಾಗಿದ್ದಾಳೆ.  ಇದಕ್ಕೆಲ್ಲ ಕಾರಣ ನಾವು ಅನುಸರಿಸಿದ, ಅತೀಯಾದ ಅಜೈವಿಕ ಕೃಷಿ ಹಾಗೂ ಅಸ್ವಾಭಾವಿಕ ಪದ್ಧತಿಗಳೇ ಕಾರಣ.  ನಾನು ಅಂತಿಮವಾಗಿ ಏನು ಹೇಳಬಯಸುತ್ತೇನೆಂದರೆ ಮುಂದೆ ನೀವು ಏನು ಮಾಡಬೇಕೆಂಬುದು ನಿಮ್ಮ ಬುದ್ದಿಗೆ ಹಾಗೂ ಮನಸ್ಸಿಗೆ ಬಿಟ್ಟುಬಿಡುತ್ತೇನೆ.  ಅದರೆ ರೈತರಲ್ಲಿ ಒಂದು ಮನವಿ, ಸಾವಯವ ಕೃಷಿ ಮಾಡಿ, ನಮ್ಮ ಭೂಮಿ ತಾಯಿಯನ್ನು ಉಳಿಸಿ ಹಾಗೂ ಜನ್ಮ ಕೊಡೊ ತಾಯಂದಿರನ್ನು ಉಳಿಸಿ.

----- ಸುಧೀಂದ್ರ ದೇಸಾಯಿ


Email ID : talk2desai@gmail.com