Showing posts with label Reality. Show all posts
Showing posts with label Reality. Show all posts

Wednesday, March 6, 2013

Swadeshi Brand - Please encourage!


ಸ್ವದೇಶಿ ಬ್ರಾಂಡ್


              

ನಮ್ಮ ಹಣ ನಮ್ಮ ದೇಶದಲ್ಲೇ ಉಳಿಸಿ, ನಮ್ಮ ಸ್ವದೇಶಿ ಕಂಪನಿಗಳ ವಸ್ತುಗಳನ್ನು ಖರಿದಿಸಿ ಅವುಗಳನ್ನು ಉದ್ಧಾರ ಮಾಡಿ. ನಮ್ಮ ಹಣ ವಿದೇಶಕ್ಕೆ ಹೋಗದಂತೆ ನಾವುಗಳು ತಡಿಯಬೇಕು, ನಮ್ಮ ಸ್ವದೇಶಿ ಕಂಪೆನಿಗಳಲ್ಲಿ ಹಣ ಹೂಡಬೇಕು. ಆದರೆ ವಿದೇಶಿ ಕಂಪೆನಿಗಳ ಪ್ರಾಡಕ್ಟ್ಸ್ ವಳ್ಳೆ ಕ್ವಾಲಿಟಿ ಇರುತ್ತೆ ಅಂತ ನೀವು ವಾದ ಮಾಡಬಹುದು, ಸರಿ. ಇವಾಗ ನಮ್ಮ ಸ್ವದೇಶಿ ಬ್ರಾಂಡ್ಗಳೇ ಒಳ್ಳೆ ಕ್ವಾಲಿಟಿ(ಉತ್ತಮ ಗುಣಮಟ್ಟ) ವಸ್ತುಗಳನ್ನು, ವಾಹನಗಳನ್ನು ಮಾರುತ್ತಿದ್ದಾರೆ. ಅವಗಳು ವಿದೇಶಿ ಬ್ರಾಂಡ್ಗೆ ಸರಿ ಸಮಾನವಾಗಿ ಕ್ವಾಲಿಟಿ ಕೊಡ್ತಾ ಇದ್ದಾರೆ. ನಮ್ಮ ಸ್ವದೇಶಿ ಕಂಪನಿಗಳ ಹತ್ತರ ಒಳ್ಳೆ ವ್ಯಪಾರವಿದ್ದರೆ, ವಿದೇಶಗಳಿಂದ ಕ್ವಾಲಿಟಿ ವಸ್ತುಗಳನ್ನು ನಮಗೆ ಇಲ್ಲಿಗೆ ತರಿಸಿ ನಮಗೆ ಮಾರುತ್ತಾರೆ. ನಮ್ಮ ಕಂಪೆನಿಗಳನ್ನು ಬೀದಿಪಾಲು ಮಾಡಬೇಡಿ, ವಿದೇಶಿ ಕಂಪನಿಗಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಬಿಡಬೇಡಿ. ಸ್ವದೇಶಿ ಅಂದೋಲನಕ್ಕೆ ಮುಂದಾಗಿ.

ಸ್ವದೇಶಿ ಹೋಟೆಲ್ಗಳು :
 
 


ಪಿಜ್ಜಾ, ಬರ್ಗರ್, ಟ್ಯಾಕೋ ಇವಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು, ನಮ್ಮ ದೇಶೀ ಊಟ ಸವಿಯಿರಿ, ಅರೋಗ್ಯ ಚೆನ್ನಾಗಿ ಇರುತ್ತೆ ನಮ್ಮ ಸ್ವದೇಶಿ ಭೋಜನ ವ್ಯಾಪಾರಿಗಳು ಇದರಿಂದ ಉದ್ಧಾರವಾಗ್ತಾರೆ. ಅವರನ್ನು ಒಳ್ಳೆ ಎಣ್ಣೆ ಬಳಿಸಿ ತಯಾರಿ ಮಾಡೋದಕ್ಕೆ ಹೇಳಿ ಅವರುಗಳು ಮಾಡ್ತಾರೆ. ಹೇಳಿ ನಾವು ಪಿಜ್ಜಾ, ಬರ್ಗರ್ ಗೆ ಹೋಗದೆ ನಿನ್ನ ಹತ್ರ ಬಂದಿದ್ದೇವೆ, ಚೆನ್ನಾಗಿ ನೋಡಿಕೋ, ಅವನು ಚೆನ್ನಾಗಿ ರೊಟ್ಟಿ, ದೋಸೆ ಮಾಡಿ ಕೊಡುತ್ತಾನೆ. ಇದರಿಂದ ನಮ್ಮ ದೇಶದ ಪಾವರ್ಟಿ ಲೈನ್ ಗೆ ಕೆಳಗೆ ಇರುವವರು ಸ್ವಲ್ಪ ರಿಚ್ ಆಗ್ತಾರೆ.

ಸ್ವದೇಶಿ ಔಷಧಿ :

 



ನಮ್ಮ ಸ್ವದೇಶಿ ಔಷಧಿಗಳನ್ನು ಬಳಸಿ. ವಿದೇಶಿಗಳನ್ನು ಬಹಿಷ್ಕರಿಸಿ. ನಮ್ಮಲ್ಲಿ ಒಳ್ಳೆ ರಿಸರ್ಚ್ ನಡೆಯಲಿ, ನಮ್ಮ ಆಯುರ್ವೇದ ಬೆಳೆಯಲಿ.
ಇನ್ನು ಕೆಲವು ತಿನಿಸುಗಳು, ಇತರೆ ಮನೆಗೆ ಬಳಕೆ ಆಗುವ ವಸ್ತುಗಳನ್ನು ಇಲ್ಲಿ ಪಟ್ಟಿ ಮಾಡುತ್ತೇನೆ, ಅವಗಳನ್ನುಖರಿದಿಸಿ.
 
 



ಜೈ ಹಿಂದ್!

Monday, January 7, 2013

Alert India - Razaakars are still here...!


ಹುಷಾರ್ : ರಜಾಕರ್ಸ್ ಇನ್ನೂ ಇದ್ದಾರೆ


ಭಾರತದ ಪ್ರಜೆಗಳೇ ಹುಷಾರ್, ರಜಾಕರ್ಸ್ ಇನ್ನೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಜೀವಂತವಾಗಿದ್ದರೆ. ರಜಾಕರ್ಸ್, ಯಾರು ಅಂತ ತೆಲಂಗಾಣ ಹಾಗೂ ಉತ್ತರ ಕರ್ನಾಟಕದ ಜನತೆಗೆ ಇವರು ಚೆನ್ನಾಗಿ ಪರಿಚಿತರು. ನೈಜಾಮ್ ದೊರೆಗಳ ಸೇವೆಯಲ್ಲಿ, ಇವರು ತಮ್ಮದೇ ಆದ ಸೈನ್ಯ ತುಕುಡಿಯನ್ನು ಇಟ್ಟುಕೊಂಡು ಸ್ವತಂತ್ರ ಭಾರತದ ವಿರುದ್ಧ ಯುದ್ಧ ಮಾಡಿದವರು. ನೈಜಾಮ್ ಆಡಳಿತವನ್ನು ಸಮರ್ಥಿಸಿ, ತಮಗೆ ಬೇರೆ ದೇಶ(ಹೈದರಾಬಾದ್ ಸ್ಟೇಟ್, ಡೊಮಿನಿಯನ್ ಸ್ಟೇಟಸ್       ) ಬೇಕೆಂದು ವಿಕೃತ ಸೃಷ್ಟಿಸಿದವರು. ೧೯೪೭ ಆಗಸ್ಟ್ ೧೫ ನಂತರ, ಇಡೀ ದೇಶ “ಭಾರತ ಮಾತಾ ಕಿ ಜೈ” ಎಂದು ಕೂಗಿದರೆ, ಈ ರಜಾಕರ್ಸ್ ಮಾತ್ರ “ಆಜಾದ್ ಹೈದರಾಬಾದ್ ಪೈನ್ದಾಬಾದ್” ಅಂತ ಜೈ ಕಾರ ಹಾಕಿದವರು. ತಮ್ಮನು ಪಾಕಿಸ್ತಾನ್ಕ್ಕೆ ಸೇರಿಸಬೇಕೆಂದು ಅಥವಾ ಪ್ರತ್ಯೇಕ ಇಸ್ಲಾಂ ದೇಶವನ್ನಾಗಿಸಬೇಕೆಂದು, ಹೈದರಾಬಾದ್ ಪ್ರಾಂತ್ಯದ ಎಲ್ಲಾ ಮುಸ್ಲಿಂರನ್ನು ಸೇರಿಸಿ ೩ ಲಕ್ಷಕ್ಕೂ ಹೆಚ್ಚು ಸೈನ್ಯವನ್ನು ಸಿದ್ದಪಡಿಸಿ, ಖಾಸಿಂ ರಜ್ವಿ ನೇತೃತ್ವದಲ್ಲಿ ಅಂದಿನ ಸ್ವತಂತ್ರ ಭಾರತ ವಿರುದ್ಧ ರಣ ಕಹಳೆ ಊದಿದರು. ತಮ್ಮ ಪ್ರತ್ಯೇಕ ಹೈದರಾಬಾದ್ ಅಥವಾ ನೈಜಾಮ್ ಸಾಮ್ರಾಜ್ಯವನ್ನು, ಭಾರತದ ಹೃದಯ ಭಾಗದಲ್ಲಿ ಸ್ಥಾಪಿಸಬೇಕೆಂಬ ಉದ್ದೇಶ ಅವರದಾಗಿತ್ತು. ಆದರೆ ದಕ್ಷಿಣ ಭಾರತದ ಹಿಂದೂಗಳು ಇದಕ್ಕೆ ವಿರುದ್ಧವಾಗಿ ನಿಂತರು. ರಜಾಕರ್ಸ ಹಾಗು ಜನತಾ ಫೌಜ್, ಆಂಧ್ರ ಹಿಂದು ಮಹಾಸಭಾ ನಡುವಣ ಹೊಡದಾಟ ಪ್ರಾರಂಭವಾಯಿತು.  ರಜಾಕರ್ಸ್ ಹಿಂದೂಗಳನ್ನು ಹೈದರಾಬಾದ್ ಪ್ರಾಂತ್ಯದಿಂದ ಹೊರಗೆ ಓಡಿಸಿದರು, ಹೋಗದೆ ಇರುವವರನ್ನು ಕೊಂದು ಹಾಕಿದರು. ರೈತರ ಜಮೀನನ್ನು ವಶಪಡಿಸಿಕೊಂಡರು ಹಾಗೂ ಹೆಣ್ಣು ಮಕ್ಕಳ ಒಡವೆ, ಆಭರಣ ಗಳನ್ನು ದೋಚಿ, ಮಾನ ಕಳೆದು, ಆ ಪ್ರಾಂತ್ಯದಲ್ಲಿ ಭಯ ಸೃಷ್ಟಿಸಿದರು, ಇದರಿಂದ ಹಿಂದೂಗಳು ಆಂಧ್ರ ಗಡಿ ಭಾಗಗಳಲ್ಲಿ ಬಂದು ನೆಲೆಸಿದರು. ಕೆಳಿಗಿನ ಚಿತ್ರದಲ್ಲಿ ರಜಾಕರ್ಸ ಹಾಗೂ ನೈಜಾಮ್ ಪೊಲೀಸರು ಹಿಂದೂ ಹೋರಾಟಗಾರರನ್ನು ಹಿಡಿದು, ಬಡಿಯುತ್ತಿರುವ ದೃಶ್ಯ. 



ಕೈಗೆ ಸಿಕ್ಕ ಹಿಂದೂ ರೈತರನ್ನು ಹಾಗು ಸ್ವಯಂಸೇವಕರನ್ನು(ಜನತಾ ಫೌಜ್, ಆಂಧ್ರ ಹಿಂದೂ ಮಹಾಸಭಾ ಸೇವಕರು) ಕೊಂದು ಹಾಕಿದರು. ಮಜ್ಲಿಸ್- ಈ – ಇತ್ತೆಹಾದುಲ್- ಮುಸ್ಲಿಮೀನ್(Majlis-e-Ittehadul Muslimeen) ಇವರ ಸಂಘಟನೆಯ ಹೆಸರಾಗಿತ್ತು.
ಸರ್ದಾರ್ ವಲ್ಲಭಾಯಿ ಪಟೇಲರ್ ಆಪರೇಷನ್ ಪೋಲೊ, ಭಾರತದ ಸೈನ್ಯ, ನೈಜಾಮ್ ಹಾಗೂ ರಜಾಕರ್ಸ ಸೈನ್ಯವನ್ನು ಸುತ್ತುವರಿದು ಬೋಗ್ಗುಬಡಿದರು. ಖಾಸಿಂ ರಜ್ವಿ ಜೈಲು ಪಾಲದ, ಆಮೇಲೆ ಅವನು ಪಾಕಿಸ್ತಾನಕ್ಕೆ ಓಡಿಹೋದ. ಹೈದರಾಬಾದ್ ನೈಜಾಮ್, ಭಾರತ ಸರ್ಕಾರದೊಂದಿಗೆ “Instrument of Accession” ಗೆ ರುಜುಹಾಕಿದ. ಹೈದರಾಬಾದ್ ಕರ್ನಾಟಕ ಶಾಂತವಾಯಿತು.
ಅವಾಗ ರಜಾಕರ್ಸ ಎಲ್ಲಿ ಹೋದ್ರು, ಗೊತ್ತಿಲ್ಲ. ಸರಿ ಓಡಿ ಹೋಗಿದ್ದಾರೆ ಅಂತ ಎಲ್ಲಾರು ಬ್ರಮಿತವಾಗಿದ್ವಿ. ನಮ್ಮ ಭಾರತದ ಸಂಸ್ಕೃತವೇ ಅಂತಹದ್ದು, ನಾವು ಯಾವತ್ತು ಸಮಸ್ಯೆಯ ಮೂಲವನ್ನು ಎಂದೂ ಕಿತ್ತಿ ಹಾಕಿದವರಲ್ಲ. ಇವಾಗ ಈ ಸಂಘಟನೆ ಮತ್ತೆ ರಾಜಕೀಯವಾಗಿ ಬೆಳೆದು ನಿಂತಿದೆ, ಅದೇ AIMIM(All INDIA majlis-e-ittehadul-muslimeen). ಮುಂದೆ ಆಲ್ ಇಂಡಿಯಾ ಅಂತ ಹೆಸರು ಇಟ್ಟುಕೊಂಡು, ಮತ್ತೆ ಈ ರಜಾಕರ್ಸ ರಾಜಕೀಯವಾಗಿ ಮತ್ತೆ ದೇಶ ಒಡೆಯಲು ಸಂಚು ಹೂಡುತ್ತಿದ್ದಾರೆ. ಭಾರತ ಹುಷಾರ್!
ಅದರ ನಾಯಕರೆ ಈ ಪುಡಿನ್ಗರು, ಅಕ್ಬರುದ್ದೀನ್ ಒವೈಸಿ, ಅಸುದುದ್ದೀನ್ ಒವೈಸಿ.

 



ಈ ಪಾರ್ಟಿಯವರು, ಅಸೆಂಬ್ಲಿಗೆ ಪ್ರತಿಸಲ ಚುನಾವಣೆಯಲ್ಲಿ 6-8 MLA ಗಳ್ಳನ್ನು ಕಳಿಸುತ್ತಿದ್ದಾರೆ. ತಮ್ಮ ಪ್ರಾಬಲ್ಯವನ್ನು ಮೆರೆಯಲು, ಹಾಗು 
ತಮ್ಮ ಕನಸನ್ನು ನನಸು ಮಾಡಲು ರಾಜಕೀಯವಾಗಿ ಹೊಂಚು ಹಾಕುತ್ತಿದ್ದಾರೆ. ಇವರು ಭಾರತದ ಮುಸ್ಲಿಮರು ಅಲ್ಲ, ಹೊರಗಿನವರು. ಇಲ್ಲಿಯವರಾಗಿದ್ದರೆ, ನಮ್ಮ ಮಣ್ಣಿನ ಅನ್ನ, ನೀರು, ಗಾಳಿ ತಿಂದವರು ಎಂದು ಈ ರೀತಿ ಸಂಚು ಮಾಡಲ್ಲ. ಹಿಂದೂ ಹಾಗೂ ಮುಸಲ್ಮಾನರು ಈ ದೇಶದಲ್ಲಿ ಬದುಕಬೇಕೆಂದರೆ,  ಈ ಇಸ್ಲಾಮಿ ನುಸುಳುಕೊರರನ್ನ ನಾವುಗಳು ಸಂಕಲ್ಪಿಸಿ ದೇಶದಿಂದ ಹೊರಗೆ ಹಾಕಬೇಕು.

                                                                                                                  ----- ಜೈ ಹಿಂದ

Saturday, December 29, 2012

Love Jihad - Terrorism in the name of Love


ಲವ್ ಜಿಹಾದ್

ಜಿಹಾದ್ ಎಂದರೆ ನಮಗೆ ತಟ್ ಅಂತ ಹೊಳಿಯೋದೆ, ಅಲ್ಕೈದ ಮತ್ತು ತಾಲಿಬಾನ್ ಗಳ ಧರ್ಮಯುದ್ಧ. ಇದರ ಹೆಸರಿನ್ನಲ್ಲಿ ಅದು ಎಷ್ಟು ಜನರು ಬಲಿಹೊದರೋ ಲೆಕ್ಕವಿಲ್ಲ. ಜಿಹಾದ್ ಎಂದರೆ ಅವರ ಭಾಷೆಯಲ್ಲಿ ಧರ್ಮಯುದ್ಧ ಎಂಧರ್ಥ. ಅಂದರೆ ತಮ್ಮ ಧರ್ಮವನ್ನು ಬೆಳೆಸಿಕೊಳ್ಳಲು  ಯುದ್ಧ ಮಾಡ್ತ್ಹಿದ್ದಾರೆ ಇವರು. ಆದರೆ ಆವರು ಮಾಡಿದ್ದು ಅಸ್ತ್ರಗಳಿಂದ, ಮಾನವ ಬಾಂಬುಗಳಿಂದ. ದಯವೇ ಧರ್ಮದ ಮೂಲವೈಯ್ಯ ಎಂದು ನಾವು ಭಾರತಿಯರು ಪ್ರತಿಪಾದಿಸಿದರೆ, ಅವರು ಕೃರತ್ವ, ಹಿಂಸೆ, ಬಲವಂತ , ಯುದ್ಧ ಗಳಿಂದನೆ ತಮ್ಮ ಧರ್ಮವನ್ನು ಪ್ರತಿಪಾದಿಸಿದರು ಈ ಇಸ್ಲಾಮಿಯರು. ಅವರ ಉದ್ದೇಶವೇ, ಇಡಿ ಜಗತ್ತನ್ನು ಇಸ್ಲಾಮೀಕರಣ ಗೊಳಿಸಬೇಕಂತ. ಅದು ಯಾವ ದಾರಿಯಾದರು ಸರಿ, ರಕ್ತ ಹರಿಸಿಯಾದ್ರು ಸರಿ. ಇದು ಘೋರಿ, ಘಜ್ನಿ ಗಳಿಂದ ಪ್ರಾರಂಭವಾಗಿ ಇಂದು ಒಸಾಮಾ ಬಿನ್ ಲಾಡೆನ್,  ಐಸ್ಐ ವರೆಗೂ ಇನ್ನೂ ನಡಿತಾಯಿದೆ. ಆದರೆ ಇತ್ತೀಚೆಗೆ ಜಿಹಾದ್ ಪ್ರೀತಿಯಲ್ಲೂ ಹುಟ್ಕೊಂಡಿದೆ, ಇದು ನಿಮಗೆ ಗೊತ್ತಾ? ತಮ್ಮ ಧರ್ಮ ಪ್ರಚಾರಕ್ಕೆ, ತಮ್ಮ ಗುರಿ ತಲುಪುವುದಕ್ಕೆ, ಇಡಿ ಭಾರತವನ್ನು ಇಸ್ಲಾಮೀಕರಣ ಮಾಡುವದಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.


ತಮ್ಮ ಜಾತಿಯಲ್ಲಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಕ್ಕೋ, ಬೇರೆ ಜಾತಿಯ ಹೆಂಗಸರನ್ನು ತಮ್ಮ ತೆಕ್ಕೆಗೆ ಬೀಳಿಸಿಕೊಂಡು ಮದುವೆಯಾಗಿ ಅವರ ಧರ್ಮ ಪರಿವರ್ತನೆಮಾಡಿ, ಮಕ್ಕಳನ್ನೂ ಮುಸ್ಲಿಮರನ್ನಾಗಿ ಮಾಡುತ್ತಾರೆ. ಇದರಿಂದ ಲಾಭವೇನೆಂದರೆ ಬೇಗನೆ ಇವರ(ಮುಸ್ಲಿಂ) ಸಂಖ್ಯ ಭಾರತದಲ್ಲಿ ಹೆಚ್ಚಾಗುತ್ತದೆ. ಪೊಲಿಟಿಕಲ್ ವೋಟು ಬ್ಯಾಂಕ್  ಮಾಡಿಕೊಂಡು ಮತ್ತೆ ಈ ಭಾರತವನ್ನು ಆಳಲು ಹೊಂಚು ಹಾಕುತ್ತಿದ್ದಾರೆ. ಈಗಾಗಲೇ ವೋಟ ಬ್ಯಾಂಕ್ ಪಾಲಿಟಿಕ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಇವರು ಸದ್ಯಕ್ಕೆ ಕಡಿಮೆ ಸಂಖ್ಯೆಯಲ್ಲಿರಬಹುದು, ಆದ್ರೆ ಇನ್ನು ಮುಂದಿನಿ ೧೦೦-೧೫೦ ವರ್ಷಗಳಲ್ಲಿ ಇವರು ಅದು ಎಲ್ಲಿ ನಿಲ್ತಾರೂ, ಎಷ್ಟು ಸಂಖ್ಯ ತಲುಪುತ್ತಾರೋ ಉಹಿಸಲಾರೆವು. ಇದು ಅಲ್ಲದೆ ಬಾಂಗ್ಲಾದೇಶಿ ಮುಸ್ಲಿಂಮರ ವಲಸೆ ಬೇರೆ.
ಲವ್ ಜಿಹಾದ್ ಸ್ಕೀಮ್ ಬಗ್ಗೆ ಮಾಹಿತಿ ಹೀಗಿದೆ,
೧. ಒಂದು ಹಿಂದು(ಬ್ರಾಹ್ಮಣ) ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೫ ಲಕ್ಷ ರೂಪಾಯಿ.
೨. ಜೈನ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೩ ಲಕ್ಷ ರೂಪಾಯಿ.
೩. ಕೆಳ ಹಿಂದು ಜಾತಿಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾದರೆ, ೨ ಲಕ್ಷ ರೂಪಾಯಿ.
ಇನ್ನು ಕೆಲವರಿಗಂತು ಮನೆ, ಸೈಟು, ಸರ್ಕಾರಿ ಕೆಲಸ, ಪ್ರೈವೇಟ್ ಕೆಲಸಗಳ ಕೊಡಿಸಲಾಗುತ್ತದೆ. ಹುಡುಗಿಯರನ್ನು ಬೈಕ್ ಮೇಲೆ ಸುತ್ತಾಡಿಸೋಕೆ ದುಡ್ಡು, ಪೆಟ್ರೋಲ್ ಕರ್ಚು ಕೊಡಲಾಗುತ್ತದೆ. ಇದನೆಲ್ಲಾ ನಡೆಸುತ್ತಿರುವುದು ಅರಬ್ ಹಾಗು ಸೌದಿ ದೇಶಗಳಲ್ಲಿ ಇರುವ ಇಸ್ಲಾಮಿ ಸಂಸ್ಥೆಗಳು. ಭಾರತದಲ್ಲಿ ಇರುವ ತಮ್ಮ ನೆಟ್ವರ್ಕ್ ಬಳಸಿ, ಈ ಕೃತ್ಯಗಳನ್ನು ನಡೆಸುತ್ತಾರೆ. ಇತ್ತೀಚಿಗೆ ಇದು ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿಯೂ ಇದನ್ನು ತೋರಿಸಿದ್ದರು. ಆದರೆ ಬಹಳಷ್ಟು ಜನಕ್ಕೆ ಇದು ತಿಳಿದಿಲ್ಲ.



ಲವ ಜಿಹಾದ್ ಗೆ ದೊಡ್ಡ ಪ್ರಮಾಣದಲ್ಲಿ ತುತ್ತಾಗಿರೋ ರಾಜ್ಯ ಕೇರಳ. ಅಲ್ಲಿ ಇಂದು ಇದು ನಡಿತಾಯಿದೆ. ಲವ ಜಿಹಾದ್ ಗೆ ಒಳಗಾಗಿರುವ ಹುಡುಗಿಯರನ್ನು ಮದುವೆ ಮಾಡಿಕೊಂಡು, ಆಮೇಲೆ ಅವರನ್ನು ವೆಷ್ಯರನ್ನಾಗಿ, ಪರಿವರ್ತಿಸುತ್ತಾರೆ. ಕೆಲವರು ಮದುವೆಯಾಗಿ ಬಿಟ್ಟು ಬಿಡುತ್ತಾರೆ. ಇದರಿಂದ ಬೇಸತ್ತ ಹುಡುಗಿ ಮತ್ತೆ ತನ್ನ ಧರ್ಮಕ್ಕೆ ಮರಳದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ನಾನು ಈ ಲೇಖನದ ಮೂಲಕ ಎಲ್ಲ ಹಿಂದು, ಜೈನ, ಸಿಖ್ ಹುಡುಗಿಯರನ್ನು ಎಚ್ಚರಿಸುತ್ತಿದ್ದೇನೆ. ತಂದೆ ತಾಯಿಯಂದಿರು ಕೊಡ ಇದರ ಬಗ್ಗೆ ಗಮನ ವಿರಲಿ. ಎಲ್ಲ ಹೆಣ್ಣು ಮಕ್ಕಳಿಗೆ, ಇದರಬಗ್ಗೆ ಮಾಹಿತಿ ನಿಡಬೇಕಾಗಿದೆ, ಅವರ ಹೂವಿನಂತಾ ಜೀವನವನ್ನು ನರಕವಾಗುವುದರಿಂದ ತಪ್ಪಿಸಬೇಕು ನಾವೆಲ್ಲ.
ಹೆಣ್ಣನ್ನು  ಪೂಜಿಸುವ ಸಂಕೃತಿ ನಮ್ಮದು. “ಯತ್ರ ನಾರ್ಯಸ್ತು ಪುಜ್ಯಂತೆ, ತತ್ರ ರಮಂತೆ ದೇವತಃ”. ಎಲ್ಲಿ ನಾರರಿಯರನ್ನು ಸೋಶಿಸ್ತಿವೋ ಅಲ್ಲಿ ಕಂಡಿತ ಒಳ್ಳೇದು ಆಗುವುದಿಲ್ಲ. ಅದಕ್ಕೆ ಸ್ತ್ರೀಯರನ್ನು ಉಳಿಸಿ, ಸ್ತ್ರೀ ಶಕ್ತಿಯನ್ನು ಬೆಳಸಿ, ನಾಡು-ದೇಶ ಉಳಿಸಿ.

Thursday, December 27, 2012

Indina Rajakaarana(Todays Politics)


ಇಂದಿನ ರಾಜಕಾರಣ





ಹೋಗುವರು ಮನೆ ಮನೆಗೆ, ಬೇಡುತ್ತಾ
ವೋಟು ನಮಗೆ ಹಾಕಿಯಂತ, ಕೇಳುತ್ತಾ
ಅದು ಮಾಡ್ತಿನಿ ಇದು ಮಾಡ್ತಿನಿಯಂತ, ಹೇಳುತ್ತಾ

ಗೆಲ್ಲುವರು ಸ್ಪರ್ಧೆಯನ್ನು ವಿಜ್ರುಂಭಣೆಯಾಗಿ
ಬೀಗುವರು ರಾಜಧಾನಿಯಲ್ಲಿ ಮಂತ್ರಿಯಾಗಿ
ತಿನ್ನುವರು ಲಂಛ ಕಟ್ಟಕಟ್ಟವಾಗಿ

ಮರೆಯುವರು ಕೊಟ್ಟಿರುವ ಭರವಸೆಯನ್ನು
ತುಂಬುವರು ತಮ್ಮ ಖಜಾನೆಯನ್ನು
 ಸುರಿಸುವರು ಜನರ ಕಣ್ಣಿರನ್ನು

                                                    --- ಸುಧೀಂದ್ರ ದೇಸಾಯಿ

Wednesday, November 28, 2012

Nimage Sittu Baralva?



ನಿಮಗೆ ಸಿಟ್ಟು ಬರಲ್ವಾ?

ಇತ್ತಿಚೆಗೆ ಎಲ್ರು ಕೇಳ್ತಿದ್ದಾರೆ, ಯಾಕೆ ಬರಿತ್ತಿದ್ದಿಯಾ ಅಂತ? ಫೇಸ್ಬುಕ್ ಮೇಲೆ ಬರಿ ಪಾಲಿಟಿಕ್ಸ್, ಸ್ವದೇಶಿ ಆಂದೋಲನ, ಗೋರಕ್ಷ....ಇತ್ಯಾದಿ ಬಗ್ಗೆ ಬರಿತಿಯ ಯಾಕೆ? ನೀನು ಬರಿತಿರುವ ತಾಪಿಕ್ಸ್ ಡಿಫರೆಂಟ್ ಹಾಗು ಕುತೂಹಲವಾಗಿರುತ್ತದೆ. ದೇಶ ಕೆಟ್ಟಹೋಗಿದೆ, ಇದು ಕಲಿಯುಗ ಯಾರು ಸರಿಮಾಡ್ಲಾರರು ಅಂತ ಹಿಂಗೆಲ್ಲ ಹೇಳ್ತಾರೆ. ಕೈ ಕಟ್ಟಿ ಕುಳಿತುಕೊಳ್ಳೋ ಜನ ಇರೋವರೆಗೂ, ಈ ದೇಶ ಉದ್ದಾರ ಆಗೋಲ್ಲ. ಸಿಟ್ಟು ಬರೋಕೆ ಕಾರಣಗಳೇನು?


೧. ಚಿಕ್ಕೊರಿರುವಾಗ ಶಾಲೆಯಲ್ಲಿ ಜನ ಗಣ ಮನ , ಸುಜಲಾಂ ಸುಫಲಾಂ ಅಂತ ಹಾಡಿದ್ದೇಕೆ. ಟೈಮ್ ಪಾಸ್ಗಾ?


೨. ಇದು ನನ್ನ ದೇಶ. ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿಯವರೆಗೂ, ಗುಜರಾತದಿಂದ ಹಿಡಿದು ಅಸ್ಸಾಂ, ಅರುಣಾಚಲ್ ವರೆಗೂ, ಅದು ಭಾರತ ದೇಶ ಅಂತ ಓದ್ಸಿದ್ರಲ್ಲಾ ಶಾಲೆಯಲ್ಲಿ? ಇವಾಗ ಕಾಶ್ಮೀರ ಅರ್ಧ ತುಂಡು ಪಾಕಿಸ್ತಾನಕ್ಕೆ ನೀಡಿದ್ದೇವೆ, ಅರುಣಾಚಲವನ್ನು ಚೀನಾ ತನ್ನದೆಂದು ತಿಳಿದು ಅಲ್ಲಿ ರಾಜಾರೋಷವಾಗಿ ಓಡಾಡಿ ಬರುತ್ತಾರೆ. ಹೀಗೆ ಅದಾಗ ನಮಗೆ ಯಾಕೆ ಸಿಟ್ಟು ಬರಬಾರದು, ನಾನು ಯಾಕೆ ಬರಿಬಾರ್ದು. ಸತ್ಯವನ್ನು ತಿಳಿಸಲ್ಲಿಕ್ಕೆ ನಾನು ಬರಿತೀದ್ದೇನೆ.


೩. ಬ್ರಿಟಿಶರು ನಮ್ಮನ್ನು ಲೂಟಿ ಮಾಡಿದ್ರು, ನಮ್ಮಹುತಾತ್ಮರನ್ನು ನಾಯಿಗೆ ಹೊಡದಂಗೆ ಹೊಡ್ದು, ಗಲ್ಲಿಗೇರಿಸಿದ್ರಲ್ಲಾ, ನಾವು ಅದನ್ನು ಮರೆತು ಇನ್ನು ಅವರ ಪಾದ ಸೇವೆ ಮಾಡ್ತ್ಹಿದ್ದಿವಿ. ಯಾಕೆ? ನಮ್ಮ ದೇಶವನ್ನು ಕೊಳ್ಳೆಹೊಡದು, ನಮ್ಮ ದೇಶವನ್ನು ಇಬ್ಬಾಗ ಮಾಡಿ, ಬಡತನ ತಂದಿಟ್ಟು, ಜಾತಿ ದ್ವೇಷ ಚುಚ್ಚನ್ನು ಹೊತ್ತಿಸಿಹೊದ್ರಲ್ಲಾ. ಬ್ರಿಟನ್ ಮಹಾರಾಣಿಯನ್ನು ಕಾಮನ್ ವೆಲ್ತ್ ಗಮ್ಸೆಗೆ ಮುಖ್ಯ ಅಥಿತಿಯನ್ನಾಗಿ ಕರೆದ್ರಲ್ಲಾ ಯಾಕೆ. ಆವರಿಗೆ ನಾವು ಇನ್ನು ಯಾಕೆ ಮಣೆ ಹಾಕ್ತೀವಿ?


೪. ಬ್ರಿಟಿಶರು ಇಲ್ಲಿ ಬರಿ ನಮ್ಮ ಸಂಪತ್ತು ಲೂಟಿಮಾಡೋದಲ್ಲದೆ, ನಮ್ಮ ಸಂಸ್ಕೃತ ಜ್ಞಾನವನ್ನು ಲೂಟಿ ಮಾಡಿ ಹೋದ್ರು. ವೈಮಾನಿಕ ಶಾಸ್ತ್ರ, ಅರೋಗ್ಯ ವಿಜ್ಞಾನ, ಅಣುಶಕ್ತಿ ಗ್ರಂಥಗಳು ಮತ್ತೆನೆನ್ನೆಲ್ಲಾ ಕಳ್ತನ ಮಾಡದ್ರೋ ಗೊತ್ತಿಲ್ಲಾ. ಇವಾಗ ತಮ್ಮ ಹೆಸರಿನಲ್ಲಿ ಪರಿಶೋದನೆಗಳನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತದಲ್ಲಿ ಮೊದಲು ವಿಮಾನ ಹಾರಿಸಿದವರು ಶಿವಕರ್ ಬಾಪೂಜಿ ತಲ್ಪಡೆ ಇವರು ೧೮೯೫ರಲ್ಲಿ ಮೊದಲ ಚಾಲಕನಿಲ್ಲದ ವಿಮಾನವನ್ನು ಹಾರಿಸಿತೊರಿಸಿದರು. ಮುಂಬೈನಲ್ಲಿ ನಡೆದ ಘಟನೆ ಇದು. ಆಮೇಲೆ ಇ ಸಾಶ್ತ್ರ ವ್ರೈಟ ಬ್ರದರ್ಸ್ ಗೆ ಸೇರಿತು. ನಮ್ಮ ಭಾರತಿಯನ ಹೆಸರನ್ನು ಮುಚ್ಚಿ ಹಾಕಿದರೂ ಈ ಆಂಗ್ಲರು. ಹೀಗೆ ಅದು ಎಸ್ಟು ಮಾಡಿದ್ದಾರೋ. ಸಿಟ್ಟು ಬರಲ್ವಾ ನಿಮಗೆ?


೫. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯನ್ನು ಒಂದಿಸ್ಟು ವರ್ಷಗಳ ನಂತರ ನಿಲ್ಲಿಸ ಬೇಕು ಅಂತ ಬರದಿದ್ದ್ರು, ಅದನ್ನು ಇನ್ನು ಮುಂದುವರಸಿಕೊಂಡು ಹೋಗ್ತಿದ್ದಾರಲ್ಲ ಯಾಕೆ? ಜಾತಿಯ ಮೇಲೆ ರಾಜಕಾರಣ ಮಾಡಿ ಜನರನ್ನು ವೊಡೆದು ಜಿವಿಸುತ್ತಿದ್ದಾರಲ್ಲಾ ಈ ಪೊಲಿಟಿಕ್ಸ್ ಪೀಪಲ್” (ರಾಜಕಾರಣಿಗಳು) ಇವರು ಮನುಷ್ಯರಾ? ನಾವು ಯಾಕೆ ದೆವೆಲೋಪಮೆಂಟಲ್ ಪಾಲಿಟಿಕ್ಸ್ ಮಾಡಬಾರದು ? ಹಾಗ್ ಮಾಡಿದ್ರೆ ಸರ್ವೇ ಜನಾ ಸುಖಿನೋಭವಂತುಅಲ್ಲವೇ ? ನಿಮಗೆ ರಾಜಕಾರಣಿಗಳನ್ನು ಕಂಡರೆ ಸಿಟ್ಟು ಬರಲ್ವಾ?


೬. ನಮ್ಮ ದುಡ್ಡು ನಮಗೆ ಕೊಟ್ಟು ಬೆಶ್ ಅನ್ನಿಸಿಕೊಳ್ತಾರೆ ಈ ರಾಜಕಾರಣಿಗಳು, ನಿಮಗೆ ಇದು ಗೊತ್ತಾ? ನಾವು ಗೊವೆರ್ನ್ಮೆಂಟ್ಗೆ ಟ್ಯಾಕ್ಸ್ ಕಟ್ಥಿವಿ. ಸರ್ಕಾರ ಮತ್ತು ರಾಜಕಾರಣಿಗಳು ಅದನ್ನು ದೇಶದ ಅಭಿವೃದ್ದಿಗೆ ಬಳಸಿಕೊಳ್ಳದೆ, ತಮ್ಮ ಖಜಾನೆ ತುಂಬಿ ಕೊಳ್ತಾರೆ. ಯಾವುದಾದರು ಮಠಗಳು, ಧರ್ಮ ಸಂಘಟನೆಗಳು ಸಾಮೊಹಿಕ ಪೂಜೆ, ಮದುವೆಗಳನ್ನು ಮಾಡಿಸ್ತಿವಿ ಅಂತ ಬಂದ್ರೆ, ದುಡ್ಡು ಕೊಟ್ಟು ತಾವು ಬೆಶ್ ಅನ್ಸಿಕೊಳ್ತಾರೆ? ಕೊಟ್ಟಿದ್ದು ತಮ್ ದುಡ್ಡಾ?


೭. ಯಾವುದಾದ್ರು ಗವರ್ನಮೆಂಟ್ ಆಫಿಸ್ಗೆ ಹೋದ್ರೆ ಸುಲಭವಾಗಿ ಕೆಲಸಗಳು ಆಗ್ತವಾ? ಚಪ್ಪಲಿ ಹರ್ದುಹೋಗ್ತವೆ ಹೊರತು ಕೆಲಸ ಆಗಲ್ಲ. ಬರ್ತ್ ಸೆರ್ಟಿಫಿಕೆಟ್ಯಿಂದ ಹಿಡಿದು, ಡೆಥ್ ಸೆರ್ಟಿಫಿಕೆಟ್ ವರೆಗು ಬರೀ ಲಂಚ. ಜೀವನ ಹ್ಯಾಗಮಾಡೋದು ಸ್ವಾಮಿ. ಸಿಟ್ಟು ಬರಲ್ವಾ, ಈ ಸರ್ಕಾರಿ ಕೆಲಸಗಳ ಬಗ್ಗೆ?


೮. ಸರಿ ಈ ನ್ಯೂಸ್ ಚಾನಲ್ಲು ಗಳನ್ನು ನಂಬೋಣವೆಂದರೆ,  ಪ್ರಜಾತಂತ್ರದ ಇನ್ನೊಂದು ಸ್ತಂಭವೆಂದು ಕರೆಯಲುಪಡುವ ಈ ನ್ಯೂಸ್ ಚಾನಲ್ಗಳು, ಇತ್ತೀಚಿಗೆ ಬಿಸಿನೆಸ್ ಹೌಸ್ಗಳಾಗಿ ಹೋಗಿವೆ. ನೀ ದುಡ್ಡು ಕೊಟ್ಟರೆ ನಿನ್ನ ಪರವಾಗಿ ನ್ಯೂಸ್ ಮಾಡ್ತಿವಿ ಅಂತ, ಸುಳ್ಳು ವಾರ್ತೆಯನ್ನು ಪ್ರಸಾರ ಮಾಡ್ತಾರೆ. ಯಾರನ್ನ ನಂಬೋದು ಸ್ವಾಮಿ ?


೯. ಈ ದೇಶದಲ್ಲಿ ೧೦ ರೂಪಾಯಿಗೆ ಕೋಕಾ-ಕೋಲಾ ಮಾರ್ತಾರೆ, ೧೫ ರೂಪಾಯಿಗೆ ನೀರು ಮಾರ್ತಾರೆ. ಸರಕಾರಗಳ ನೀತಿ ನೋಡಿ. ಸರಿ ಸರ್ಕಾರವನ್ನು ಬಿಟ್ಟು ಬಿಡಿ, ಜನರು ಕೂಡ ೫ ರೂಪಾಯಿ ಕೊಟ್ಟು ರೊಟ್ಟಿ ತಿನ್ನಲ್ಲ, ಆದ್ರೆ ೫೦ ರೂಪಾಯಿ ಕೊಟ್ಟು ಪಿಜ್ಜಾ, ಬರ್ಗರ್ ತಿಂತಾರೆ. ಜನ ಮರುಳೋ, ಜಾತ್ರೆ ಮರಳೋ” ?


ಇಡಿ ದೇಶ ಸುಳ್ಳಿನ ಕಂತೆಗಳ ಮೇಲೆ ಕಟ್ಟಲಾಗಿದೆ, ಇನ್ನು ಹಾಗೆ ಸುಳ್ಳು ಹೇಳ್ಕೊಂಡು, ಸುಳ್ಳಿನ ಬುನಾದಿಯ ಮೇಲೆ ಕಟ್ಟುತ್ತಾ ಹೋಗ್ತಿದ್ದಾರೆ. ಮುಂದಿನ ಪೀಳಿಗೆ ಇದನ್ನು ಪ್ರಶ್ನೆ ಮಾಡದೇ ಇರಲಾರರು. ನಮ್ಮ ದೇಶ ಹೀಗೇಕೆ, ಈ ಸ್ತಿಥಿ ಯಾಕ್ ಬಂತು? ನಾವು ನಮ್ಮಲ್ಲಿ ಅವಲೋಕಿಸಿಕೊಳ್ಳಬೇಕು. ನಮಗೆ ಬರೋ ಸಿಟ್ಟನ್ನು, ಒಳ್ಳೆ ರೀತಿಯಲ್ಲಿ ಉಪಯೋಗಿಸಿ ಎಲ್ಲರನ್ನು ಇದರ ವಿರುಧ ಹೋರಾಡಲು ಪ್ರೆರೆಪಿಸಬೇಕು.  De-Conditioning of Indian brains is required” . ಅದಕ್ಕೆ ನಾನು ಬರಿತ್ತಿದ್ದೇನೆ.


---- ಸುಧೀಂದ್ರ ದೇಸಾಯಿ