Monday, January 7, 2013

Alert India - Razaakars are still here...!


ಹುಷಾರ್ : ರಜಾಕರ್ಸ್ ಇನ್ನೂ ಇದ್ದಾರೆ


ಭಾರತದ ಪ್ರಜೆಗಳೇ ಹುಷಾರ್, ರಜಾಕರ್ಸ್ ಇನ್ನೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಜೀವಂತವಾಗಿದ್ದರೆ. ರಜಾಕರ್ಸ್, ಯಾರು ಅಂತ ತೆಲಂಗಾಣ ಹಾಗೂ ಉತ್ತರ ಕರ್ನಾಟಕದ ಜನತೆಗೆ ಇವರು ಚೆನ್ನಾಗಿ ಪರಿಚಿತರು. ನೈಜಾಮ್ ದೊರೆಗಳ ಸೇವೆಯಲ್ಲಿ, ಇವರು ತಮ್ಮದೇ ಆದ ಸೈನ್ಯ ತುಕುಡಿಯನ್ನು ಇಟ್ಟುಕೊಂಡು ಸ್ವತಂತ್ರ ಭಾರತದ ವಿರುದ್ಧ ಯುದ್ಧ ಮಾಡಿದವರು. ನೈಜಾಮ್ ಆಡಳಿತವನ್ನು ಸಮರ್ಥಿಸಿ, ತಮಗೆ ಬೇರೆ ದೇಶ(ಹೈದರಾಬಾದ್ ಸ್ಟೇಟ್, ಡೊಮಿನಿಯನ್ ಸ್ಟೇಟಸ್       ) ಬೇಕೆಂದು ವಿಕೃತ ಸೃಷ್ಟಿಸಿದವರು. ೧೯೪೭ ಆಗಸ್ಟ್ ೧೫ ನಂತರ, ಇಡೀ ದೇಶ “ಭಾರತ ಮಾತಾ ಕಿ ಜೈ” ಎಂದು ಕೂಗಿದರೆ, ಈ ರಜಾಕರ್ಸ್ ಮಾತ್ರ “ಆಜಾದ್ ಹೈದರಾಬಾದ್ ಪೈನ್ದಾಬಾದ್” ಅಂತ ಜೈ ಕಾರ ಹಾಕಿದವರು. ತಮ್ಮನು ಪಾಕಿಸ್ತಾನ್ಕ್ಕೆ ಸೇರಿಸಬೇಕೆಂದು ಅಥವಾ ಪ್ರತ್ಯೇಕ ಇಸ್ಲಾಂ ದೇಶವನ್ನಾಗಿಸಬೇಕೆಂದು, ಹೈದರಾಬಾದ್ ಪ್ರಾಂತ್ಯದ ಎಲ್ಲಾ ಮುಸ್ಲಿಂರನ್ನು ಸೇರಿಸಿ ೩ ಲಕ್ಷಕ್ಕೂ ಹೆಚ್ಚು ಸೈನ್ಯವನ್ನು ಸಿದ್ದಪಡಿಸಿ, ಖಾಸಿಂ ರಜ್ವಿ ನೇತೃತ್ವದಲ್ಲಿ ಅಂದಿನ ಸ್ವತಂತ್ರ ಭಾರತ ವಿರುದ್ಧ ರಣ ಕಹಳೆ ಊದಿದರು. ತಮ್ಮ ಪ್ರತ್ಯೇಕ ಹೈದರಾಬಾದ್ ಅಥವಾ ನೈಜಾಮ್ ಸಾಮ್ರಾಜ್ಯವನ್ನು, ಭಾರತದ ಹೃದಯ ಭಾಗದಲ್ಲಿ ಸ್ಥಾಪಿಸಬೇಕೆಂಬ ಉದ್ದೇಶ ಅವರದಾಗಿತ್ತು. ಆದರೆ ದಕ್ಷಿಣ ಭಾರತದ ಹಿಂದೂಗಳು ಇದಕ್ಕೆ ವಿರುದ್ಧವಾಗಿ ನಿಂತರು. ರಜಾಕರ್ಸ ಹಾಗು ಜನತಾ ಫೌಜ್, ಆಂಧ್ರ ಹಿಂದು ಮಹಾಸಭಾ ನಡುವಣ ಹೊಡದಾಟ ಪ್ರಾರಂಭವಾಯಿತು.  ರಜಾಕರ್ಸ್ ಹಿಂದೂಗಳನ್ನು ಹೈದರಾಬಾದ್ ಪ್ರಾಂತ್ಯದಿಂದ ಹೊರಗೆ ಓಡಿಸಿದರು, ಹೋಗದೆ ಇರುವವರನ್ನು ಕೊಂದು ಹಾಕಿದರು. ರೈತರ ಜಮೀನನ್ನು ವಶಪಡಿಸಿಕೊಂಡರು ಹಾಗೂ ಹೆಣ್ಣು ಮಕ್ಕಳ ಒಡವೆ, ಆಭರಣ ಗಳನ್ನು ದೋಚಿ, ಮಾನ ಕಳೆದು, ಆ ಪ್ರಾಂತ್ಯದಲ್ಲಿ ಭಯ ಸೃಷ್ಟಿಸಿದರು, ಇದರಿಂದ ಹಿಂದೂಗಳು ಆಂಧ್ರ ಗಡಿ ಭಾಗಗಳಲ್ಲಿ ಬಂದು ನೆಲೆಸಿದರು. ಕೆಳಿಗಿನ ಚಿತ್ರದಲ್ಲಿ ರಜಾಕರ್ಸ ಹಾಗೂ ನೈಜಾಮ್ ಪೊಲೀಸರು ಹಿಂದೂ ಹೋರಾಟಗಾರರನ್ನು ಹಿಡಿದು, ಬಡಿಯುತ್ತಿರುವ ದೃಶ್ಯ. ಕೈಗೆ ಸಿಕ್ಕ ಹಿಂದೂ ರೈತರನ್ನು ಹಾಗು ಸ್ವಯಂಸೇವಕರನ್ನು(ಜನತಾ ಫೌಜ್, ಆಂಧ್ರ ಹಿಂದೂ ಮಹಾಸಭಾ ಸೇವಕರು) ಕೊಂದು ಹಾಕಿದರು. ಮಜ್ಲಿಸ್- ಈ – ಇತ್ತೆಹಾದುಲ್- ಮುಸ್ಲಿಮೀನ್(Majlis-e-Ittehadul Muslimeen) ಇವರ ಸಂಘಟನೆಯ ಹೆಸರಾಗಿತ್ತು.
ಸರ್ದಾರ್ ವಲ್ಲಭಾಯಿ ಪಟೇಲರ್ ಆಪರೇಷನ್ ಪೋಲೊ, ಭಾರತದ ಸೈನ್ಯ, ನೈಜಾಮ್ ಹಾಗೂ ರಜಾಕರ್ಸ ಸೈನ್ಯವನ್ನು ಸುತ್ತುವರಿದು ಬೋಗ್ಗುಬಡಿದರು. ಖಾಸಿಂ ರಜ್ವಿ ಜೈಲು ಪಾಲದ, ಆಮೇಲೆ ಅವನು ಪಾಕಿಸ್ತಾನಕ್ಕೆ ಓಡಿಹೋದ. ಹೈದರಾಬಾದ್ ನೈಜಾಮ್, ಭಾರತ ಸರ್ಕಾರದೊಂದಿಗೆ “Instrument of Accession” ಗೆ ರುಜುಹಾಕಿದ. ಹೈದರಾಬಾದ್ ಕರ್ನಾಟಕ ಶಾಂತವಾಯಿತು.
ಅವಾಗ ರಜಾಕರ್ಸ ಎಲ್ಲಿ ಹೋದ್ರು, ಗೊತ್ತಿಲ್ಲ. ಸರಿ ಓಡಿ ಹೋಗಿದ್ದಾರೆ ಅಂತ ಎಲ್ಲಾರು ಬ್ರಮಿತವಾಗಿದ್ವಿ. ನಮ್ಮ ಭಾರತದ ಸಂಸ್ಕೃತವೇ ಅಂತಹದ್ದು, ನಾವು ಯಾವತ್ತು ಸಮಸ್ಯೆಯ ಮೂಲವನ್ನು ಎಂದೂ ಕಿತ್ತಿ ಹಾಕಿದವರಲ್ಲ. ಇವಾಗ ಈ ಸಂಘಟನೆ ಮತ್ತೆ ರಾಜಕೀಯವಾಗಿ ಬೆಳೆದು ನಿಂತಿದೆ, ಅದೇ AIMIM(All INDIA majlis-e-ittehadul-muslimeen). ಮುಂದೆ ಆಲ್ ಇಂಡಿಯಾ ಅಂತ ಹೆಸರು ಇಟ್ಟುಕೊಂಡು, ಮತ್ತೆ ಈ ರಜಾಕರ್ಸ ರಾಜಕೀಯವಾಗಿ ಮತ್ತೆ ದೇಶ ಒಡೆಯಲು ಸಂಚು ಹೂಡುತ್ತಿದ್ದಾರೆ. ಭಾರತ ಹುಷಾರ್!
ಅದರ ನಾಯಕರೆ ಈ ಪುಡಿನ್ಗರು, ಅಕ್ಬರುದ್ದೀನ್ ಒವೈಸಿ, ಅಸುದುದ್ದೀನ್ ಒವೈಸಿ.

 ಈ ಪಾರ್ಟಿಯವರು, ಅಸೆಂಬ್ಲಿಗೆ ಪ್ರತಿಸಲ ಚುನಾವಣೆಯಲ್ಲಿ 6-8 MLA ಗಳ್ಳನ್ನು ಕಳಿಸುತ್ತಿದ್ದಾರೆ. ತಮ್ಮ ಪ್ರಾಬಲ್ಯವನ್ನು ಮೆರೆಯಲು, ಹಾಗು 
ತಮ್ಮ ಕನಸನ್ನು ನನಸು ಮಾಡಲು ರಾಜಕೀಯವಾಗಿ ಹೊಂಚು ಹಾಕುತ್ತಿದ್ದಾರೆ. ಇವರು ಭಾರತದ ಮುಸ್ಲಿಮರು ಅಲ್ಲ, ಹೊರಗಿನವರು. ಇಲ್ಲಿಯವರಾಗಿದ್ದರೆ, ನಮ್ಮ ಮಣ್ಣಿನ ಅನ್ನ, ನೀರು, ಗಾಳಿ ತಿಂದವರು ಎಂದು ಈ ರೀತಿ ಸಂಚು ಮಾಡಲ್ಲ. ಹಿಂದೂ ಹಾಗೂ ಮುಸಲ್ಮಾನರು ಈ ದೇಶದಲ್ಲಿ ಬದುಕಬೇಕೆಂದರೆ,  ಈ ಇಸ್ಲಾಮಿ ನುಸುಳುಕೊರರನ್ನ ನಾವುಗಳು ಸಂಕಲ್ಪಿಸಿ ದೇಶದಿಂದ ಹೊರಗೆ ಹಾಕಬೇಕು.

                                                                                                                  ----- ಜೈ ಹಿಂದ

No comments:

Post a Comment