Saturday, February 2, 2013

Jersey Haalu - Namage idu beda!


ಜೆರ್ಸಿ ಹಾಲು – ಇದು ನಮಗೆ ಬೇಡ!

ಹಸು(ಆಕಳು) ಹಾಲು ವಾತ್ಸಲ್ಯ ಭರಿತ, ಪ್ರಾಣ ಶಕ್ತಿಯುಳ್ಳ ಹಾಲು. ಎಲ್ಲಾ ಹಾಲುಗಳಲ್ಲಿ ಶ್ರೇಷ್ಟವಾದ ಹಾಲು ಆಕಳು ಹಾಲು. ದೇವಲೋಕದಲ್ಲಿ ದೇವತೆಗಳು ಅಮೃತ ಕುಡಿದು ಹೇಗೆ ಮೃತ್ಯುವನ್ನು ಜೈಸಿದರೋ, ಹಾಗೆ ಭೂಲೋಕದಲ್ಲಿ ಮನುಷ್ಯರು ಅಮೃತ ರೂಪದಲ್ಲಿ ಇರುವ ಆಕಳು(ಹಸು) ಹಾಲನ್ನು ಕುಡಿದು ಸಕಲ ರೋಗಗಳನ್ನು ಜೈಸಬಹುದು, ಪೂರ್ಣಾಯು ಜೀವಿಸಬಹುದು. ಆಕಳು ಹಾಲಿನ ಉತ್ಪನ್ನಗಳಾದ ಬೆಣ್ಣೆ,ತುಪ್ಪ ಅಮೃತದ ಇನ್ನೊಂದು ರೂಪಗಳು, ಮನುಷ್ಯನ ದೇಹದ ವಾತ, ಪಿತ್ತ ದೋಷಗಳನ್ನು ಸರಿ ಮಾಡುವ ಶಕ್ತಿ, ಈ ತುಪ್ಪಕ್ಕೆ ಇದೆ. ತುಪ್ಪವನ್ನು ಬಿಸಿಯಾಗಿ ಕಾಯಿಸಿ ತಿಂದರೆ ಬಹಳ ಲಾಭಕಾರಿ. ಆಕಳು ತುಪ್ಪ ನೋಡುವುದಕ್ಕೆ ಬೆಳ್ಳಗೆ ಇರಬಾರದು, ಅದು ಬಂಗಾರದ ಬಣ್ಣ ಆಗಿರಬೇಕು. ಹಾಗೆ ಇದ್ದರೆ ಅದು ನಿಜವಾದ ಆಕಳು ತುಪ್ಪ, ಇಲ್ಲವಾದರೆ ಅದು ಎಮ್ಮೆ ತುಪ್ಪವೋ ಅಥವಾ ಕಲಬೇರೆಕೆಯ ವಸ್ತು ಆಗಿರುತ್ತದೆ. ಅದಕ್ಕೆ ತುಪ್ಪ ಕೊಳ್ಳುವಾಗ ಹುಷಾರ್! ಯಾವುದಾದರು ಗೋಶಾಲಕ್ಕೆ ಹೋಗಿ ಕೊಳ್ಳುವುದು ಒಳ್ಳೆಯದು. ಹಳೆಯ ಕಾಲದಲ್ಲಿ ಒಬ್ಬ ಮನುಷ್ಯ ತಿಂಗಳಿಗೆ ಕನಿಸ್ಟ್ ೫ ಲೀಟರ್ ತುಪ್ಪ ತಿನ್ನುತ್ತಿದ್ದ, ಇವತ್ತಿನ ಪೀಳಿಗೆ ೫ ಸ್ಪೂನ್ ತಿಂದರೆ ದೊಡ್ಡದು. ಎಲ್ಲಾ ಈ ಡಾಕ್ಟರ್ಸ್ ಗಳ ಮಹಿಮೆ, ಎಲ್ಲಾ ರೋಗಿಗಳನ್ನು ಹೆದರಿಸಿ ಬಿಡುತ್ತಾರೆ. ತುಪ್ಪತಿಂದರೆ ಕೊಲೆಸ್ಟ್ರೋಲ್(cholestrol) ಅಂತ. ತುಪ್ಪ ತಿಂದರೆ ಕೊಲೆಸ್ಟ್ರೋಲ್ ಬರುವುದಿಲ್ಲ ಬಟ್ ಕೆಟ್ಟ ಕೊಲೆಸ್ಟ್ರೋಲನ್ನು ನಾಶ ಮಾಡುತ್ತದೆ ಹಾಗು ಒಳ್ಳೆ ಕೊಲೆಸ್ಟ್ರೋಲನ್ನು ಬೆಳೆಸುತ್ತದೆ. ನೀವು LDL ಹಾಗು HDL ಬಗ್ಗೆ ಅಂತು ಕೇಳಿರಬಹುದು. ತುಪ್ಪದಿಂದ HDL(good cholestrol) ಜಾಸ್ತಿಯಾಗಿ ಕೆಟ್ಟ ಕೊಲೆಸ್ಟ್ರೋಲನ್ನು ಹೊರಗೆ ಹಾಕುತ್ತದೆ. ಸೊ ತುಪ್ಪವನ್ನು ಕಣ್ಣು ಮುಚ್ಚಿಕೊಂಡು ತಿನ್ನಿ, ಏನೂ ಭಯವಿಲ್ಲ. ರಾತ್ರಿ ಮಲಗುವಾಗ ಬಿಸಿ-ಬಿಸಿ ಆಕಳು ಹಾಲಿನಲ್ಲಿ, ಎರಡು-ಮೂರು ಡ್ರಾಪ್ ತುಪ್ಪ ಹಾಕಿಕೊಂಡು ೧೦-೧೫ ಬರಿ ಚೆನ್ನಾಗಿ ಕಲಿಸಿ ಕುಡಿಯಿರಿ, ಯಾವ ಮೈ-ಕೈ ನೋವು ಬರುವುದಿಲ್ಲ ಹಾಗು ಯಾವ ಸಂಧಿ, ಸೊಂಟ ನೋವು ಬರುವುದಿಲ್ಲ.


“ಎನ್ ಆಪಲ್ ಎ ಡೇ, ಕೀಪ್ಸ್ ಡಾಕ್ಟರ ಅವೇ” ಇವತ್ತು ಹೇಳ್ತಾರೆ ಬಟ್ ಅದು ಸುಳ್ಳು. ಆಪಲ್ ತಿಂದರೆ ಒಳ್ಳೆಯದೇ ಬಟ್ ನಮ್ಮಪುರಾಣದಲ್ಲಿ ಹೇಳಿದ್ದಾರೆ “ಯಾವ ಮನಯೇ ಮುಂದೆ ತುಳಸಿ ಹಾಗು ಮನೆಯ ಹಿತ್ಲಲ್ಲಿ ಆಕಳು(ಹಸು) ಇರತ್ತೂ, ಆ ಮನೆಗೆ ವೈದ್ಯನು ಬರುವ ಅವಶ್ಯಕತೆ ಇಲ್ಲ”( ja ghar tulsi aur gaya ta ghar vaidya kabhi na aye). ಇದು ನಮ್ಮ ವಿಜ್ಞಾನ ಸರ್! ಅದು ಬಿಟ್ಟು ಬ್ರೆಡ್(bread), ಬಟರ್(butter), ಜಾಮ್(jam) ಎಂದು ಆ ಪಾಸ್ಚ್ಯತರನ್ನು(westerners) ಫಾಲೋ ಮಾಡುತ್ತಿದ್ದೇವೆ. ಪಾಸ್ಚ್ಯತರ(westerners) ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ. ದಿನಕ್ಕೆ ೨-೩ ಬಾರಿ ಮಾಂಸ ತಿಂದು, ಆಲ್ಕೋಹಾಲ್ ಕುಡಿದೆ ಜೀವನ ಮಾಡುವವರನ್ನು ಯಾಕೆ ಫಾಲೋ ಮಾಡ್ತಾರೂ ಗೊತ್ತಿಲ್ಲ, ನಮ್ಮ ಈ ಮಾಡ್ರನ್ ಭಾರತೀಯರು.
ಭಾರತೀಯ ಆಕಳುಗಳ ಹಾಲು “A2 type”, ಜೆರ್ಸಿ(jersey) ಆಕಳು ಹಾಲು “A1 type”. A2 ಹಾಲು ಬಹಳ ಒಳ್ಳೆಯದು, ಅದಕ್ಕೆ ರೋಗ ನಿರೋದಕ ಗುಣಗಳಿವೆ, ಅದರಲ್ಲಿ ಪ್ರಾಣ ಶಕ್ತಿ ಹೆಚ್ಚು. ಜೆರ್ಸಿ ಆಕಳು ಹಾಲು ಪೂತನಿಯ ಹಾಲು, ಅದು ಹಾಲೆ ಅಲ್ಲ ಬಟ್ ಹಾಲಾಹಲ(ವಿಷ). ಇಂದಿನ ಪೀಳಿಗೆಗೆ ಡಯಾಬಿಟಿಸ್, ಹೃದಯ ರೋಗಗಳಿಗೆ ಕಾರಣವೇ ಈ ಕ್ರಾಸ್ ಬ್ರೀಡ್ ಜೆರ್ಸಿ ಹಾಲು. ಇದರಿಂದ ಮ್ಯಾಡ್-ಕೌ ಡಿಸಿಸ್(mad cow disease) ಬರುತ್ತೆ, ಮಕ್ಕಳ ಬುದ್ದಿ ಬೆಳವಣಿಗೆ ಕಡಿಮೆಯಾಗುತ್ತೆ ಗೊತ್ತಾ? ಇದು ನಿಮಗೆ ಗೊತ್ತಿಲ್ಲ. ಹಾಲು ಉತ್ಪಾದನ ಕಂಪನಿಗಳು ಇದನ್ನು ಮುಚ್ಚುತ್ತಿದ್ದಾರೆ. ಎಮ್ಮೆ ಹಾಲು ಕೂಡ ಒಳ್ಳೆಯದಲ್ಲ. ಆಕಳ ಹಾಲೇ ಸರ್ವ ಶ್ರೇಷ್ಠ. ಅದರಲ್ಲೂ ಭಾರತದ “ತಳಿ”ಯ ಆಕಳು ಜಗತ್ತಿನ ಎಲ್ಲಾ ಆಕಳಿಗಿಂತ ಶ್ರೇಷ್ಠ, ಹಾಗು ಅದರ ಹಾಲು ಅಮೃತ.


ನಮ್ಮ ಜಾತಿಯ ಹಸುಗಳನ್ನು ನಾವು ರಕ್ಷಿಸ ಬೇಕು. ಪಾಸ್ಚ್ಯತರು ಹಾಗು ನಮ್ಮ ಮೂರ್ಖ ತಜ್ಞರು ನಮ್ಮ ತಳಿಯ ಹಸುಗಳನ್ನು ನಾಶಮಡುತ್ತಿದ್ದಾರೆ. ಅಲ್ಲಿಯ ಉರುಸ್ ಎಂಬ  ಗೂಳಿಯ(bull) ವೀರ್ಯವನ್ನು ನಮ್ಮ ಆಕಳಿಗೆ ನೀಡಿ ಮಿಶ್ರ ತಳಿಯನ್ನು ಸೃಷ್ಟಿಸಿ ನಮ್ಮ ತಳಿಗಳನ್ನು ಹಾಳುಮಾಡುತ್ತಿದ್ದಾರೆ. ಈ ಜೆರ್ಸಿ ಹಸು ಅದೇ ಪ್ರಯೋಗದಿಂದ ಬಂದ ತಳಿ. ಇದು ಆಕಳು ಅಲ್ಲ, ಇದು ಪೂತನಿ. ಇದರ ಹಾಲಿನಿಂದ ಯಾವ ಪ್ರಯೋಜನವೂ ಇಲ್ಲಾ, ಬರಿ ಕ್ಯಾಲ್ಸಿಯಂ ಪ್ರಮಾಣ ಬಿಟ್ಟರೆ. ಆದರೆ ಇದರಿಂದ ಬಹಳ ಮಾಂಸ ದೊರೆಯುತ್ತದೆ, ಅದಕ್ಕೆ ಪಾಸ್ಚ್ಯತರು ಈ ಕುತಂತ್ರ ವೆಸಗಿದ್ದಾರೆ.

ಅದಕ್ಕೆ ಕೃಷ್ಣನು ಭೂಮಿಯ ಮೇಲೆ, ಯಾದವನಾಗಿ ಈ ಪಶುವನ್ನೇ ಕಾಯೆದ. ಗೋಕುಲದಲ್ಲಿ ಇದ್ದವರೆಲ್ಲಾ ಇದರ ಹಾಲು, ಬೆಣ್ಣೆ ತಿಂದು ಸಾತ್ವಿಕ ಬುದ್ದಿ ಹೊಂದಿದವರಾಗಿದ್ದರು, ಎಂದು ಕೃಷ್ಣನ್ ಕೈ ಬಿಡಲಿಲ್ಲ. ನಾವೆಲ್ಲಾ ಇದರ ರಕ್ಷಣೆಗೆ ಮುಂದಾಗಬೇಕು, ಮತ್ತೆ ನಮ್ಮ ಭಾರತವನ್ನು ಸಂಪತ್ಭರಿತವಾದ ದೇಶವನ್ನಾಗಿ ಮಾಡಬೇಕು. ಜೆರ್ಸಿ, ಎಮ್ಮೆ ಹಾಲನ್ನು ಮಕ್ಕಳಿಗೆ ಕುಡಿಸಬೇಡಿ, ಆಕಳು ಹಾಲನ್ನೇ ಕುಡಿಸಿ.ಮನೆಯಲ್ಲಿ ನಾಯಿ ಸಾಕುವ ಬದಲು, ಆಕಳನ್ನು ಸಾಕಿ. ನಾಯಿ ಬೇಕಾದರೆ ಹೊರಗಡೆ, ಮನೆಯ ಮುಂದೆ ಸಾಕಿಕೊಳ್ಳಿ. ಹಿಂದೆ ನಮ್ಮ ಭರತಖಂಡ ಸಮೃಧವಾಗಿರಲು ಕಾರಣ ಈ ಆಕಳು. ಟ್ರ್ಯಾಕ್ಟರ್ ನಿಂದ ಹೊಲ-ಗದ್ದೆ ಹೂಳುವಬದಲು, ಬಸವನನ್ನು, ಆಕಳನ್ನು ಉಪಯೋಗಿಸಿ. ಇವೆ ನಮ್ಮ ರೈತರ ಬೆನ್ನೆಲಬ್ಬಾಗಿತ್ತು, ಮುಂದೆನೂ ಇವುಗಳನೆ ಕೃಷಿಗೆ ಬಳಸಬೇಕು.ಹುಳುವ ಯೋಗಿಯ ಜೊತೆ ಈ ದೈವಿ ಪ್ರಾಣಿ ಕೂಡಿದರೆ ಮತ್ತೆ ನಮ್ಮ ಭೂಮಿಯಲ್ಲಿ ಅಮೃತವನ್ನು ತೆಗೆಯಬಹುದು, ಮತ್ತೆ ನಮ್ಮ ಖಂಡವನ್ನು ಸಕಲ ರೋಗ ಮುಕ್ತ, ಅನ್ನ ಭರಿತ, ಸಾತ್ವಿಕರನ್ನು ಹೊಂದಬಹುದು.