Sunday, November 4, 2012

KUKUDMI, REVATI AND EINSTIEN - Circle of Time!

ಕುಕುಡ್ಮಿ , ರೇವತಿ ಮತ್ತು ಐನ್ಸ್ಟೈನ್ -  ಕಾಲಚಕ್ರ!



ಕುಶಸ್ಥಲಿ ಎಂಬ ರಾಜ್ಯ, ಆ ರಾಜ್ಯದ ಅಧಿಪತಿ ಕುಕುಡ್ಮಿ. ಅದು ಒಂದು ದ್ವೀಪ ನಗರಿಯಾಗಿತ್ತು, ಅದೇ ನಗರವು ಮುಂದೆ ದ್ವಾಪರ ಯುಗದಲ್ಲಿ ಕೃಷ್ಣನ ದ್ವಾರಕೆಯಾಗುತ್ತದೆ. “ಕುಕುಡ್ಮಿ” ಯನ್ನು ಪುರಾಣಗಳಲ್ಲಿ ರೈವತ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಅವನಿಗೆ ಒಬ್ಬಳೇ ಮಗಳು, ಅವಳ ಹೆಸರು “ರೇವತಿ”. ಅವಳು ಪ್ರತಿಭಾವಂತೆ ಹಾಗು ಸುಂದರವಾಗಿದ್ದಳು. ಮಗಳ ಮದುವೆ ಮಾಡಲು ರಾಜ ಕುಕುಡ್ಮಿ ಆಲೋಚಿಸುತ್ತಾನೆ, ಭೂಮಿಯ ಮೇಲೆ ಇರುವ ಎಲ್ಲಾ ರಾಜ್ಯಗಳ ರಾಜರು, ವೀರರು ಹಾಗು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ಮಾಡಿ, ಇದರಲ್ಲಿ ಯಾರು ಅರ್ಹರು ಎಂಬ ನಿರ್ಧಾರಕ್ಕೆ ಬರಲು ವಿಫಲನಾಗುತ್ತಾನೆ. ಏಕೆಂದರೆ ಯಾರು ಅವನ ಮಗಳನ್ನು ಮೀರಿ ನಿಲ್ಲಲಿಲ್ಲ. ಹೀಗಿರುವಾಗ ತಾನು ಗೊಂದಲಕ್ಕೊಳಗಾಗಿ, ಯಾರನ್ನು ತನ್ನ ಮಗಳ ಗಂಡನೆಂದು ಆರಿಸಲು ವಿಫಲನಾಗುತ್ತಾನೆ. ಸರಿ ಬೇರೆ ಲೋಕಕ್ಕೆಲ್ಲ ತೆರಳಿ ಅಲ್ಲಿ ಯಾರಾದರು ತನ್ನ ಮಗಳಿಗೆ ಯೋಗ್ಯರು ಸಿಗಬಹುದೆಂದು ವಿಮಾನದಲ್ಲಿ ಮಗಳೊಂದಿಗೆ ತೆರಳುತ್ತಾನೆ, ಆದರೆ ಯಾರೂ ಸರಿಹೋಗದಿದ್ದಲ್ಲಿ, ಈ ಮನುಕುಲದ ಸೃಷ್ಟಿಕರ್ತನಾದ ಬ್ರಹ್ಮನನ್ನೇ ಕೆಳಿದರಾಯೀತೆಂದು, ತಾನು ತನ್ನ ಮಗಳೊಡನೆ ಬ್ರಹ್ಮ ಲೋಕಕ್ಕೆ ಪಯಣಿಸುತ್ತಾನೆ. ಆ ಲೋಕ್ಕಕ್ಕೆ ಹೊದ್ಮೇಲೆ ನೋಡುತ್ತಾರೆ, ಬ್ರಹ್ಮನು ಗಂಧರ್ವರ ಸಂಗೀತವನ್ನು ಕೇಳುತ್ತಿರುತ್ತಾನೆ, ಸರಿ ಈ ಸಂಗೀತ ಕಾರ್ಯಕ್ರಮ ಮುಗಿದ ಮೇಲೆ, ಬ್ರಹ್ಮನನ್ನು ಕೇಳೋಣವೆಂದು ಅಲ್ಲೇ ಸ್ವಲ್ಪ ಸಮಯ ಕಾಯುತ್ತಾರೆ. ಸಂಗೀತ ಪ್ರದರ್ಶನ ಮುಗಿದ ಮೇಲೆ, ಬ್ರಹ್ಮನೇ ಇವರನ್ನು ಕಂಡು, ಬಂದ ವಿಷಯವೇನೆಂದು ಕೇಳಲಿಕ್ಕೆ, ಕುಕುಡ್ಮಿ ತಾ ಬಂದ ವಿಚಾರ ಹಾಗು ತಾನಿರುವ ಗೊಂದಲದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾನೆ. ಬ್ರಹ್ಮನು ಕುಕುಡ್ಮಿ ಆಯ್ದ ಹೆಸರುಗಳ ಪಟ್ಟಿಯನ್ನು ನೋಡುತ್ತಾ ನಕ್ಕು ಹೀಗೆ ಹೇಳುತ್ತಾನೆ,

ತತ್ ಪುತ್ರ-ಪೌತ್ರ-ನಪತ್ರನಮ್
ಗೊತ್ರಣಿ ಚ್ ನ್ ಶ್ರನ್ಮಹೇ
ಕಲೋ ಭಿಯತಸ್ ತ್ರಿ-ನವ-
ಚತುರ-ಯುಗ-ವಿಕಲ್ಪಿತಃ

ಮೇಲಿನ ಸಂಸ್ಕೃತ್ ಸ್ಲೋಕದಲ್ಲಿ ಬ್ರಹ್ಮ ಹೇಳುವುದೇನೆಂದರೆ “ನೀವು ಎಲ್ಲಾ ಲೋಕವನ್ನು ಸುತ್ತಿ, ಬ್ರಹ್ಮಲೋಕ್ಕಕೆ ಬಂದು ಹಾಗು ಕಾದಿರುವ ತುಸು ಸಮಯದಲ್ಲಿ, ಭೂಮಿಯಮೇಲೆ ಇಪ್ಪತ್ತೆಳು ಚತುರ್ಯುಗಗಳು (~ 42690240000 ದಿನಗಳು) ಕಳೆದು ಹೋಗಿವೆ, ನೀನು ಪಟ್ಟಿ ಮಾಡಿರುವ ಹೆಸರುಗಾಳಗಲಿ, ಅವರ ಮಕ್ಕಳಾಗಲಿ, ಮೊಮ್ಮಕ್ಕಾಳಗಲಿ , ಅವರ ವಂಶಿಕರಾಗಲಿ ಯಾರು ಬದುಕಿಲ್ಲ, ಕಾಲಚಕ್ರದಲ್ಲಿ ಅವರು ಹಾಗು ಅವರ ಹೆಸರು ಅಳಿದು ಹೋಗಿದೆ” ಎಂದೆನ್ನಲು ಕುಕುಡ್ಮಿ ಆಶ್ಚರ್ಯಚಕಿತನಾಗಿ ಕುಸಿದುಹೋಗುತ್ತಾನೆ. ಆದ್ರೆ ಬ್ರಹ್ಮನು ಅವನನ್ನು ಸಾಂತ್ವಾನ ಹೇಳಿ, ನೀನೇನು ಚಿಂತಿಸ ಬೇಡ ಭೂಮಿಯ ಮೇಲೆ ಇನ್ನೇನು ನಿ ಹಿಂತಿರುಗಿದಾಗ ಶ್ರೀ ಮಹಾವಿಷ್ಣು ಕೃಷ್ಣನಾಗಿ ಅವತರವಾಗುತ್ತೆ, ಅವನ ತಮ್ಮ ಬಲರಾಮ ರೇವತಿಗೆ ಯೋಗ್ಯ ವರ, ಹೋಗು ನಿನ್ನ ಮಗಳನ್ನು ಬಲರಾಮನಿಗೆ ಕೊಟ್ಟು ಮದುವೆ ಮಾಡೆಂದು ಹೇಳಿ ಕಳಿಸುತ್ತಾನೆ. ಕುಕುಡ್ಮಿ ಭೂಮಿಗೆ ಹಿಂತಿರುಗಲು, ಇಡಿ ಪೃಥ್ವಿಯ ನಕ್ಷೆ ಬದಲಾಗಿರುತ್ತದೆ. ಮನುಕುಲ ಎಲ್ಲದರಲ್ಲೂ ಕ್ಷಿಣಿಸಿ ಹೋಗಿರುತ್ತದೆ. ಮನುಜ ತನ್ನ ಬುದ್ದಿವಂತಿಕೆಯ ವಿಕಾಸದಲ್ಲಿ ಕೆಳಮಟ್ಟದಲ್ಲಿ ಇರುತ್ತಾನೆ, ಅನ್ಯಾಯ, ರಾಕ್ಷಸತ್ವ ಭೂಮಿಯ ಮೇಲೆ ಜಾಸ್ತಿಯಾಗಿರುತ್ತದೆ. ಸರಿ ಬಲರಾಮನನ್ನು ಕಾಣಲು ಇಬ್ಬರು ನಗರವನ್ನು ಪ್ರವೇಶಿಸಿದಾಗ, ಪ್ರಜೆಗಳು ಇವರನ್ನು ದಿಗಿಲುಗೊಂಡು ನೋಡುತ್ತಿರುತ್ತಾರೆ. ಏಕೆಂದರೆ ಅವರಿರುವ ಗಾತ್ರ, ಉದ್ದ ಅಸಾಧಾರಣವಾಗಿತ್ತು. ಅವರು ಆಗಿನ ಯುಗದ ಮನುಷ್ಯರಿಗಿಂತ ಬಹಳ ಎತ್ತರವಾಗಿದ್ದರು. ಸರಿ ಇನ್ನುಮುಂದೆ ಕೃಷ್ಣನ ಆದೇಶದಂತೆ ಬಲರಾಮ ರೇವತಿಯನ್ನು ಮದುವೆಯಾಗಲು ಒಪ್ಪುತ್ತಾನೆ, ಆದರೆ ಅವಳ ಎತ್ತರ ದೊಡ್ದದಾದರಿಂದ, ತನ್ನ ಆಯುಧ “ಉಳುಮೆ” (plough) ಯೀಂದ, ಅವಳ ತಲೆಗೆ ಕುಕ್ಕುತ್ತಾನೆ, ಅವಾಗ ಅವಳು ಬಲರಾಮನಿಗಿಂತ ಕಡಿಮೆ ಎತ್ತರದಲ್ಲಿ ಕುಗ್ಗುತ್ತಾಳೆ. ಬಲರಾಮ, ರೇವತಿ ಇಬ್ಬರು ಮದುವೆಯಾಗುತ್ತಾರೆ. ನಾವು ಈ ಕಥೆಯನ್ನು ಭಾಗವತದಲ್ಲಿ ಕೇಳಿರುತ್ತೇವೆ. ಈ ಕಥೆಯಿಂದ ನಮಗೆ ತಿಳಿದ ಒಂದು ವಿಷಯವೆಂದರೆ “ಕಾಲ ಆಚಲವಾದ್ದದಲ್ಲ(time is not constant), ಅದು ಬೇರೆ ಬೇರೆ ಆಯಾಮದಲ್ಲಿ ಅದು ಬೇರೆ ಆಗಿರುತ್ತದೆ(it is different in other dimensions)”. ಹಾಗೆ ಅದು ಬೇರೆ ಲೋಕಗಳಲ್ಲಿ, ಬೇರೆ ಬೇರೆ ಗತಿಯಲ್ಲಿ ಚಲಿಸುತ್ತದೆ.


ಈ ಕಥೆ ಏನೂ ನೀವು ಪುರಾಣಗಳಲ್ಲಿ ಕೇಳಿದ್ದಿರಿ, ಆದ್ರೆ ಈ ಟೈಮ್ ಮತ್ತು ಸ್ಪೇಸ್ ಬಗ್ಗೆ ನೀವು ಎಲ್ಲೊ ಓದಿರಬೇಕಲ್ಲಾ? ನೀವು ವಿಜ್ಞಾನದ ವಿಧ್ಯಾರ್ಥಿಯಾಗಿದ್ದಾರೆ ಐನ್ಸ್ಟೈನ್ ತಾತನ ಬಗ್ಗೆಯೆಂತು ಓದಿರುತ್ತೀರ, ಕನಿಸ್ಟ ಪಕ್ಷ ರಿಲೇಟಿವಿಟಿ ಥೆರಿ(theory of relativity) ಆರ್ E=MC2 ಬಗ್ಗೆ ಕೇಳಿರುತ್ತಿರಿ. ಐನ್ಸ್ಟೈನ್ ತಾತನು ಹೇಳಿದ್ದು ಅದೇ, ಆದರೆ ಅದು ವಿಜ್ಞಾನದ ಮೂಲಕ. ಐನ್ಸ್ಟೈನ್ ಏನಾದರು ಈ ಕುಕುಡ್ಮಿ ಮತ್ತು ರೇವತಿ ಕಥೆ ಕೇಳಿದ್ನಾ? ಅವನಿಗೆ ಸಮಯದ ರಹಸ್ಯದ ಬಗ್ಗೆ ತಿಳಿದದ್ದು ಈ ಕಥೆ ಕೇಳಿದ ಮೇಲಾ? ನನ್ನ ಅನುಮಾನವೇನೆಂದರೆ ಪಾಶ್ಚಿಮಾತ್ಯ ವಿಜ್ಞಾನಿಗಳು ಎಲ್ಲೊ ನಮ್ಮ ಪುರಾಣ ಕಥೆಗಳನ್ನು ಕೇಳಿಯೇ ತಮ್ಮ ವಿಜ್ಞಾನ ಸಂಶೋದನೆಯನ್ನು ಮಾಡಿದ್ದಾರಂತ. ಸ್ಟೀಫನ್ ಹಾಕಿಂಗ್(Stephen Hawking) ಕೂಡ ತನ್ನ “ಟ್ವಿನ್ಸ ಪ್ಯಾರಡಾಕ್ಸ್”( ಅವಳಿ ವಿರೋಧಾಭಾಸ ) ವಾದದಲ್ಲಿ ಇದನ್ನೇ ಮಂಡಿಸುತ್ತಾನೆ. ಇಬ್ಬರು ಅವಳಿ ಮಕ್ಕಳು ಒಂದೇ ದಿನ ಹುಟ್ಟಿರುತ್ತವೆ, ಆದರೆ ಒಬ್ಬನು ಭೂಮಿಯ ಮೇಲೆ ವಾಸಮಾಡುತ್ತಿದ್ದಾನೆ ಅಂತ ಇಟ್ಕೊಳ್ಳಿ, ಇನ್ನೊಬ ಒಂದು ಎತ್ತರದ ಪರ್ವತದ ಮೇಲೆ ವಾಸಮಾಡುತ್ತಿದರೆ, ಭೂಮಿಯ ಮೇಲೆ ಇರುವವನ ಆಯುಷ್ಯ, ಪರ್ವತದ ಮೇಲೆ ಇರುವವನಿಗಿಂತ ಹೆಚ್ಚಾಗಿರುತ್ತದೆ. ಇದೆ ಉದಾಹರಣೆ ಕೊಟ್ಟು ಸ್ಟೀಫನ್ ಹಾಕಿಂಗ್ ತನ್ನ ಪುಸ್ತಕ “ಬ್ರಿಫ್ ಹಿಸ್ಟರಿ ಆಫ್ ಟೈಮ್” ನಲ್ಲಿ ವಿವರಿಸುತ್ತಾನೆ. ನಿಮಗೂ ಸಮಯ ಕುಗ್ಗುವುದಾಗಲಿ, ಜಗ್ಗುವುದಾಗಲಿ ಆಗಿದೆಯಾ? ಏನೆ ಅದ್ರು ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು, ಓಡಬೇಕು. ಕಾಲಚಕ್ರದ ಮಹಿಮೆ ನಿಮಗೆ ತಿಳಿತಾ? ನೀವು ಏನ್ ಹೇಳ್ತಿರಿ?


------ ಸುಧೀಂದ್ರ ದೇಸಾಯಿ

1 comment:

  1. Very nice sir ,

    even at the time of 2nd manu the lord shiva come to visit him he stays for 20 days and return back that time Goddess parvati ask him where you went for 2 minutes like this the time and space twisted around different lokas

    Tankas for nice info :)

    ReplyDelete