ನಿಮಗೆ ಸಿಟ್ಟು ಬರಲ್ವಾ?
ಇತ್ತಿಚೆಗೆ ಎಲ್ರು ಕೇಳ್ತಿದ್ದಾರೆ, ಯಾಕೆ ಬರಿತ್ತಿದ್ದಿಯಾ ಅಂತ? ಫೇಸ್ಬುಕ್ ಮೇಲೆ ಬರಿ ಪಾಲಿಟಿಕ್ಸ್, ಸ್ವದೇಶಿ ಆಂದೋಲನ, ಗೋರಕ್ಷ....ಇತ್ಯಾದಿ ಬಗ್ಗೆ
ಬರಿತಿಯ ಯಾಕೆ? ನೀನು ಬರಿತಿರುವ ತಾಪಿಕ್ಸ್ ಡಿಫರೆಂಟ್ ಹಾಗು ಕುತೂಹಲವಾಗಿರುತ್ತದೆ.
ದೇಶ ಕೆಟ್ಟಹೋಗಿದೆ, ಇದು ಕಲಿಯುಗ ಯಾರು ಸರಿಮಾಡ್ಲಾರರು ಅಂತ ಹಿಂಗೆಲ್ಲ ಹೇಳ್ತಾರೆ. ಕೈ
ಕಟ್ಟಿ ಕುಳಿತುಕೊಳ್ಳೋ ಜನ ಇರೋವರೆಗೂ, ಈ ದೇಶ ಉದ್ದಾರ ಆಗೋಲ್ಲ. ಸಿಟ್ಟು ಬರೋಕೆ ಕಾರಣಗಳೇನು?
೧. ಚಿಕ್ಕೊರಿರುವಾಗ ಶಾಲೆಯಲ್ಲಿ ಜನ ಗಣ ಮನ , ಸುಜಲಾಂ ಸುಫಲಾಂ ಅಂತ ಹಾಡಿದ್ದೇಕೆ. ಟೈಮ್ ಪಾಸ್ಗಾ?
೨. ಇದು ನನ್ನ ದೇಶ. ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿಯವರೆಗೂ, ಗುಜರಾತದಿಂದ ಹಿಡಿದು ಅಸ್ಸಾಂ, ಅರುಣಾಚಲ್ ವರೆಗೂ, ಅದು ಭಾರತ ದೇಶ ಅಂತ ಓದ್ಸಿದ್ರಲ್ಲಾ ಶಾಲೆಯಲ್ಲಿ? ಇವಾಗ ಕಾಶ್ಮೀರ ಅರ್ಧ ತುಂಡು ಪಾಕಿಸ್ತಾನಕ್ಕೆ ನೀಡಿದ್ದೇವೆ, ಅರುಣಾಚಲವನ್ನು ಚೀನಾ ತನ್ನದೆಂದು ತಿಳಿದು ಅಲ್ಲಿ ರಾಜಾರೋಷವಾಗಿ ಓಡಾಡಿ ಬರುತ್ತಾರೆ. ಹೀಗೆ
ಅದಾಗ ನಮಗೆ ಯಾಕೆ ಸಿಟ್ಟು ಬರಬಾರದು, ನಾನು ಯಾಕೆ ಬರಿಬಾರ್ದು. ಸತ್ಯವನ್ನು ತಿಳಿಸಲ್ಲಿಕ್ಕೆ ನಾನು
ಬರಿತೀದ್ದೇನೆ.
೩. ಬ್ರಿಟಿಶರು ನಮ್ಮನ್ನು ಲೂಟಿ ಮಾಡಿದ್ರು, ನಮ್ಮಹುತಾತ್ಮರನ್ನು ನಾಯಿಗೆ ಹೊಡದಂಗೆ ಹೊಡ್ದು, ಗಲ್ಲಿಗೇರಿಸಿದ್ರಲ್ಲಾ, ನಾವು ಅದನ್ನು ಮರೆತು ಇನ್ನು ಅವರ ಪಾದ ಸೇವೆ ಮಾಡ್ತ್ಹಿದ್ದಿವಿ. ಯಾಕೆ? ನಮ್ಮ ದೇಶವನ್ನು ಕೊಳ್ಳೆಹೊಡದು, ನಮ್ಮ ದೇಶವನ್ನು ಇಬ್ಬಾಗ ಮಾಡಿ, ಬಡತನ ತಂದಿಟ್ಟು, ಜಾತಿ ದ್ವೇಷ ಚುಚ್ಚನ್ನು ಹೊತ್ತಿಸಿಹೊದ್ರಲ್ಲಾ. ಬ್ರಿಟನ್
ಮಹಾರಾಣಿಯನ್ನು ಕಾಮನ್ ವೆಲ್ತ್ ಗಮ್ಸೆಗೆ ಮುಖ್ಯ ಅಥಿತಿಯನ್ನಾಗಿ ಕರೆದ್ರಲ್ಲಾ ಯಾಕೆ. ಆವರಿಗೆ
ನಾವು ಇನ್ನು ಯಾಕೆ ಮಣೆ ಹಾಕ್ತೀವಿ?
೪. ಬ್ರಿಟಿಶರು ಇಲ್ಲಿ ಬರಿ ನಮ್ಮ ಸಂಪತ್ತು ಲೂಟಿಮಾಡೋದಲ್ಲದೆ, ನಮ್ಮ ಸಂಸ್ಕೃತ ಜ್ಞಾನವನ್ನು ಲೂಟಿ ಮಾಡಿ ಹೋದ್ರು. ವೈಮಾನಿಕ ಶಾಸ್ತ್ರ, ಅರೋಗ್ಯ ವಿಜ್ಞಾನ, ಅಣುಶಕ್ತಿ ಗ್ರಂಥಗಳು ಮತ್ತೆನೆನ್ನೆಲ್ಲಾ ಕಳ್ತನ ಮಾಡದ್ರೋ
ಗೊತ್ತಿಲ್ಲಾ. ಇವಾಗ ತಮ್ಮ ಹೆಸರಿನಲ್ಲಿ ಪರಿಶೋದನೆಗಳನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತದಲ್ಲಿ
ಮೊದಲು ವಿಮಾನ ಹಾರಿಸಿದವರು “ ಶಿವಕರ್ ಬಾಪೂಜಿ ತಲ್ಪಡೆ “ ಇವರು ೧೮೯೫ರಲ್ಲಿ ಮೊದಲ ಚಾಲಕನಿಲ್ಲದ ವಿಮಾನವನ್ನು ಹಾರಿಸಿತೊರಿಸಿದರು. ಮುಂಬೈನಲ್ಲಿ ನಡೆದ
ಘಟನೆ ಇದು. ಆಮೇಲೆ ಇ ಸಾಶ್ತ್ರ ವ್ರೈಟ ಬ್ರದರ್ಸ್ ಗೆ ಸೇರಿತು. ನಮ್ಮ ಭಾರತಿಯನ ಹೆಸರನ್ನು ಮುಚ್ಚಿ
ಹಾಕಿದರೂ ಈ ಆಂಗ್ಲರು. ಹೀಗೆ ಅದು ಎಸ್ಟು ಮಾಡಿದ್ದಾರೋ. ಸಿಟ್ಟು ಬರಲ್ವಾ ನಿಮಗೆ?
೫. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯನ್ನು ಒಂದಿಸ್ಟು ವರ್ಷಗಳ ನಂತರ ನಿಲ್ಲಿಸ ಬೇಕು ಅಂತ
ಬರದಿದ್ದ್ರು, ಅದನ್ನು ಇನ್ನು ಮುಂದುವರಸಿಕೊಂಡು ಹೋಗ್ತಿದ್ದಾರಲ್ಲ ಯಾಕೆ? ಜಾತಿಯ ಮೇಲೆ ರಾಜಕಾರಣ ಮಾಡಿ ಜನರನ್ನು ವೊಡೆದು ಜಿವಿಸುತ್ತಿದ್ದಾರಲ್ಲಾ ಈ “ಪೊಲಿಟಿಕ್ಸ್ ಪೀಪಲ್” (ರಾಜಕಾರಣಿಗಳು) ಇವರು ಮನುಷ್ಯರಾ? ನಾವು ಯಾಕೆ ದೆವೆಲೋಪಮೆಂಟಲ್ ಪಾಲಿಟಿಕ್ಸ್ ಮಾಡಬಾರದು ? ಹಾಗ್ ಮಾಡಿದ್ರೆ “ ಸರ್ವೇ ಜನಾ ಸುಖಿನೋಭವಂತು” ಅಲ್ಲವೇ ? ನಿಮಗೆ ರಾಜಕಾರಣಿಗಳನ್ನು ಕಂಡರೆ ಸಿಟ್ಟು ಬರಲ್ವಾ?
೬. ನಮ್ಮ ದುಡ್ಡು ನಮಗೆ ಕೊಟ್ಟು ಬೆಶ್ ಅನ್ನಿಸಿಕೊಳ್ತಾರೆ ಈ ರಾಜಕಾರಣಿಗಳು, ನಿಮಗೆ ಇದು ಗೊತ್ತಾ? ನಾವು ಗೊವೆರ್ನ್ಮೆಂಟ್ಗೆ ಟ್ಯಾಕ್ಸ್ ಕಟ್ಥಿವಿ. ಸರ್ಕಾರ ಮತ್ತು
ರಾಜಕಾರಣಿಗಳು ಅದನ್ನು ದೇಶದ ಅಭಿವೃದ್ದಿಗೆ ಬಳಸಿಕೊಳ್ಳದೆ, ತಮ್ಮ ಖಜಾನೆ ತುಂಬಿ ಕೊಳ್ತಾರೆ. ಯಾವುದಾದರು ಮಠಗಳು, ಧರ್ಮ ಸಂಘಟನೆಗಳು ಸಾಮೊಹಿಕ ಪೂಜೆ, ಮದುವೆಗಳನ್ನು ಮಾಡಿಸ್ತಿವಿ ಅಂತ ಬಂದ್ರೆ, ದುಡ್ಡು ಕೊಟ್ಟು ತಾವು ಬೆಶ್ ಅನ್ಸಿಕೊಳ್ತಾರೆ? ಕೊಟ್ಟಿದ್ದು ತಮ್ ದುಡ್ಡಾ?
೭. ಯಾವುದಾದ್ರು ಗವರ್ನಮೆಂಟ್ ಆಫಿಸ್ಗೆ ಹೋದ್ರೆ ಸುಲಭವಾಗಿ ಕೆಲಸಗಳು
ಆಗ್ತವಾ? ಚಪ್ಪಲಿ ಹರ್ದುಹೋಗ್ತವೆ ಹೊರತು ಕೆಲಸ ಆಗಲ್ಲ. ಬರ್ತ್
ಸೆರ್ಟಿಫಿಕೆಟ್ಯಿಂದ ಹಿಡಿದು, ಡೆಥ್ ಸೆರ್ಟಿಫಿಕೆಟ್ ವರೆಗು ಬರೀ ಲಂಚ. ಜೀವನ ಹ್ಯಾಗಮಾಡೋದು ಸ್ವಾಮಿ.
ಸಿಟ್ಟು ಬರಲ್ವಾ, ಈ ಸರ್ಕಾರಿ ಕೆಲಸಗಳ ಬಗ್ಗೆ?
೮. ಸರಿ ಈ ನ್ಯೂಸ್ ಚಾನಲ್ಲು ಗಳನ್ನು ನಂಬೋಣವೆಂದರೆ, ಪ್ರಜಾತಂತ್ರದ ಇನ್ನೊಂದು ಸ್ತಂಭವೆಂದು ಕರೆಯಲುಪಡುವ ಈ ನ್ಯೂಸ್ ಚಾನಲ್ಗಳು, ಇತ್ತೀಚಿಗೆ ಬಿಸಿನೆಸ್ ಹೌಸ್ಗಳಾಗಿ ಹೋಗಿವೆ. ನೀ ದುಡ್ಡು ಕೊಟ್ಟರೆ ನಿನ್ನ ಪರವಾಗಿ ನ್ಯೂಸ್
ಮಾಡ್ತಿವಿ ಅಂತ, ಸುಳ್ಳು ವಾರ್ತೆಯನ್ನು ಪ್ರಸಾರ ಮಾಡ್ತಾರೆ. ಯಾರನ್ನ ನಂಬೋದು ಸ್ವಾಮಿ ?
೯. ಈ ದೇಶದಲ್ಲಿ ೧೦ ರೂಪಾಯಿಗೆ ಕೋಕಾ-ಕೋಲಾ ಮಾರ್ತಾರೆ, ೧೫ ರೂಪಾಯಿಗೆ ನೀರು ಮಾರ್ತಾರೆ. ಸರಕಾರಗಳ ನೀತಿ ನೋಡಿ. ಸರಿ ಸರ್ಕಾರವನ್ನು ಬಿಟ್ಟು ಬಿಡಿ, ಜನರು ಕೂಡ ೫ ರೂಪಾಯಿ ಕೊಟ್ಟು ರೊಟ್ಟಿ ತಿನ್ನಲ್ಲ, ಆದ್ರೆ ೫೦ ರೂಪಾಯಿ ಕೊಟ್ಟು ಪಿಜ್ಜಾ, ಬರ್ಗರ್ ತಿಂತಾರೆ. “ಜನ ಮರುಳೋ, ಜಾತ್ರೆ ಮರಳೋ” ?
ಇಡಿ ದೇಶ ಸುಳ್ಳಿನ ಕಂತೆಗಳ ಮೇಲೆ ಕಟ್ಟಲಾಗಿದೆ, ಇನ್ನು ಹಾಗೆ ಸುಳ್ಳು ಹೇಳ್ಕೊಂಡು, ಸುಳ್ಳಿನ ಬುನಾದಿಯ ಮೇಲೆ ಕಟ್ಟುತ್ತಾ ಹೋಗ್ತಿದ್ದಾರೆ. ಮುಂದಿನ ಪೀಳಿಗೆ ಇದನ್ನು ಪ್ರಶ್ನೆ
ಮಾಡದೇ ಇರಲಾರರು. ನಮ್ಮ ದೇಶ ಹೀಗೇಕೆ, ಈ ಸ್ತಿಥಿ ಯಾಕ್ ಬಂತು? ನಾವು ನಮ್ಮಲ್ಲಿ ಅವಲೋಕಿಸಿಕೊಳ್ಳಬೇಕು. ನಮಗೆ ಬರೋ ಸಿಟ್ಟನ್ನು, ಒಳ್ಳೆ ರೀತಿಯಲ್ಲಿ ಉಪಯೋಗಿಸಿ ಎಲ್ಲರನ್ನು ಇದರ ವಿರುಧ ಹೋರಾಡಲು ಪ್ರೆರೆಪಿಸಬೇಕು. “ De-Conditioning of Indian brains is
required” . ಅದಕ್ಕೆ ನಾನು ಬರಿತ್ತಿದ್ದೇನೆ.
---- ಸುಧೀಂದ್ರ ದೇಸಾಯಿ