Thursday, June 6, 2013

Bombe Adsonu Lyrics - Drama

Bombe Adsonu Lyrics  Drama(Kannada Movie)



ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಶನ್ನು

ಲಗ್ಗಾಮು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡಾಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮಗೆ ಯಾಕೆ ಟೆನ್ಶನ್ನು

ಒಂದು ಎಡಗಾಲು, ಒಂದು ಬಲಗಾಲು
ಒಮ್ಮೆ ಅದು ಮುಂದೆ, ಒಮ್ಮೆ ಇದು ಹಿಂದೆ
ಹುಟ್ಟಿಂದ ಚಟ್ಟಕ್ಕೆ ಎಸ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೆ ಹೇಳಲೇ ಗೊಂಬೆ
ಪರಪಂಚದಲ್ಲಿ ಮನಶ ತುಂಬಾ ಸಣ್ಣ ಆಸಾಮಿ
ಅವನಿರದೆಹೊದ್ರುನು ತಿರುಗುತ್ತಪ್ಪ ಈ ಭೂಮಿ
ಕಾಲನೆ ನಮ್ ಕಯಿಲಿಲ್ಲ ನಾವೇನ್ ಮಾಡನ
ಗಡಿಯಾರ ಕಟ್ಟಿಟ್ಕೊಂಡು ಡ್ರಾಮಾ ಆಡನ
ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಶನ್ನು

ಒಂದೊಂದು ಮುಸುಡೀಲು ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು ಅಲ್ಲೊಬ್ಬ ಲೋಪರ್ರು
ಲೋಕದ ಮೆಟಾಡೋರು ಓಡಿಸುತಾ ದೇವ್ರು
ಸುಸ್ತಾಗಿ ಮಲಗೋವ್ನೆ ಯಾರಪ್ಪ ಎಬ್ಬಸೋರು

ಯಾವಾನ ಬಿಟ್ಟು ಹೋದ ಹಳೇ ಚಪ್ಲಿ ಈ ಬಾಳು
ಹಾಕ್ಕೋಂಡು ಹೋಗು ಮಗನೇ ನಿಲ್ಲಬೇಡ ನೀನೆಲ್ಲೂ
ಭಗವಂತಾ ರೋಡಲ್ಲಿ ಸಿಕ್ರೆ ನಾವೇನ್ ಮಾಡಾಣ
ಅವನೀಗೂ ಬಣ್ಣ ಹಚ್ಚಿ ಡ್ರಾಮಾ ಆಡೋಣಾ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮಗೆ ಯಾಕೆ ಟೆನ್ಶನ್ನು

ದೇಹಾನೆ ಟೆಂಪರ್ವರಿ ನಾವೇನ್ ಮಾಡೋಣ
ಮಣ್ಣಲ್ಲಿ ಹೋಗೋಗಂಟಾ ಡ್ರಾಮಾ ಆಡೋಣ