ರಾಮ ಸೇತು
ಭರತಖಂಡ ರಾಮ, ಕೃಷ್ಣರು ಓಡಾಡಿದ ಪುಣ್ಯಭೂಮಿ. ಆ ಮಹಾಪುರುಷರು
ಕಾಲದಲ್ಲಿ ನಡೆದ ಘಟನೆಗಳು ಇಂದಿಗೂ ನಾವು ಕಥೆಗಳ ರೂಪದಲ್ಲಿ, ಪುರಾಣ, ವೇದಾದಿ ಗ್ರಂಥಗಳಲ್ಲಿ
ನಾವು ಒದ್ದಿದ್ದೇವೆ, ಕೇಳಿದ್ದೇವೆ. ಇವನೆಲ್ಲಾ ಕಾಲ್ಪನಿಕ ಕಥೆಗಳೆಂದು ಇಂದಿನ
ಸೆಕ್ಯುಲರ್ವಾದಿಗಳು ಮಾಧ್ಯಮದ ಮುಂದೆ ಬಾಯಿ-ಬಾಯಿ ಬಡ್ಕೊಂಡ್ತ್ಹಿದ್ದಾರೆ. ನಮ್ಮ ಪುರಾಣ ಪುರುಷರು
ಇದ್ದಿದ್ದು ಸುಳ್ಳೆಂದು, ಅವರುಗಳು ಬರಿ ಕಥೆಗಳಲ್ಲಿ ಮಾತ್ರ ಇದ್ದಾರೆ, ರಿಯಾಲಿಟಿಯಾಗಿ ಅವರು
ಇದ್ದಿಲ್ಲ ಎಂದು ಪ್ರತಿಪಾದಿಸುತ್ತಾರೆ.ಅದಕ್ಕೆ ನಮ್ಮ ಸಂಸ್ಕೃತಿ ಬರಿ ಮೂಡನಂಬಿಕೆ, ಹಾಗು ಅವುಗಳಿಗೆ
ವೈಜ್ಞಾನಿಕ ಸಾಕ್ಷಿಗಳಿಲ್ಲವೆಂದು, ಅವುಗಳನ್ನು ಹಿಯಾಳಿಸುತ್ತಾರೆ. ಸಾಲದೆ, “ಡಾರಿವಿನ್ಸ್
ಎವೊಲುಶನ್ ಥೆರಿ” ಯನ್ನು ಇಟ್ಟುಕೊಂಡು, ಮನುಕುಲ ಪ್ರಾರಂಭವಾಗಿದ್ದು ಮಂಗನಿಂದ,ಹಿಂದೆ ಭೂಮಿಮೇಲೆ
ಮನುಷ್ಯರೇ ಇದ್ದಿಲ್ಲ ಬರಿ ಪ್ರಾಣಿಗಳು, ದೈನಾಸೋರುಸ್ಗಳು ಇದ್ದವು, ಮನುಕುಲ ಬಂದಿದ್ದೆ ಆಮೇಲೆ
ಎಂದು ಪ್ರತಿಪಾದಿಸುತ್ತಾರೆ. ನಮ್ಮ ಪುರಾಣಗಳಲ್ಲಿ ಸತ್ಯಯುಗ, ತ್ರೇತಾಯುಗ,ದ್ವಾಪರಯುಗ ಹಾಗು ಸದ್ಯ
ನಡಿತ್ತಿರುವ ಕಲಿಯುಗ ವೆಲ್ಲ ಸುಳ್ಳೆಂದು ನಮ್ಮ ಪುರತತ್ವವನ್ನು, ಸಂಸ್ಕೃತಿಯನ್ನು
ಪ್ರಶ್ನಿಸುತ್ತಿದ್ದಾರೆ.
ಆಶ್ಚರ್ಯವೇನೆಂದರೆ, ನಮ್ಮವರೇ ನಮ್ಮ ಪೂರ್ವಿಕರು ಸುಳ್ಳರೆಂದು,
ಮೂಡರೆಂದು ಹೇಳೋರಿದ್ದಾರೆ. ಅದರಲ್ಲಿ ನಮ್ಮ ತಮಿಳ್ನಾಡು ಪೂರ್ವ ಮುಖ್ಯಮಂತ್ರಿ ಕರುಣಾನಿಧಿ,
ಇದನ್ನೇ ಹೇಳಿದ್ದು. ರಾಮಸೇತುವನ್ನು ಹಿಂದೂಗಳು, ರಾಮನು ಕಟ್ಟಿಸಿದ್ದು ಹಾಗು ಅದನ್ನು ನ್ಯಾಷನಲ್
ಮಾನುಮೆಂಟ(monument) ಎಂದು ಭಾರತ ಸರ್ಕಾರ
ಘೋಷಿಸಬೇಕು ಎಂದು ಕೇಳಿಕೊಂಡರೆ, ಕೇಂದ್ರ ಕಾಂಗ್ರೆಸ್ ಸರ್ಕಾರ ಹಾಗು ಅಂದಿನ ತಮಿಳ್ನಾಡು
ಮುಖ್ಯಮಂತ್ರಿ ಕರುಣಾನಿಧಿ, ರಾಮಾಯಣ ಬರಿ ಪೌರಾಣಿಕ ಕಥೆ, ಅದು ನಿಜವಲ್ಲ ಹಾಗು ಈ ರಾಮಸೇತುವನ್ನು
ರಾಮನು ಕಟ್ಸಿಲ್ಲ ಎಂದು ಹೇಳಿ ಹಿಂದು ದೇವತೆಗಳನ್ನು, ಪುರಾಣ ಪುರುಷರನ್ನು ಲೇವಡಿ
ಮಾಡುತ್ತಿದ್ದಾರೆ.
ತಮಿಳ್ನಾಡು Ex-ಮುಖ್ಯಮಂತ್ರಿಯಂತು
“ ರಾಮನು ಯಾವ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಓದಿದ್ದ?” ಎಂದು ಬಹಿರಂಗವಾಗಿ ಹೇಳಿಕೆ
ನೀಡಿದ್ದಾನೆ, ಹಿಂದೂಗಳ ನಂಬಿಕೆಯನ್ನು ಪ್ರಶ್ನಿಸಿದ್ದಾನೆ. ಈ ಎಕ್ಷ-ಮುಖ್ಯಮಂತ್ರಿಯಂತು ರಾಮಾಯಣ
ಸರಿಯಾಗಿ ಓದಿರರಿಕ್ಕಿಲ್ಲ ಬಟ್ ಅವನ ವಾನರ ಸೇನೆಯಲ್ಲಿದ್ದ “ನಳ ಮತ್ತು ನೀಲ” ಎಂಬು ನಿರ್ಮಾಣ(construction) ತಜ್ಞರು ರಾಮನ ನೇತೃತ್ವದಲ್ಲಿ ಈ ರಾಮಸೇತು ಕಟ್ಟಿದರು. ರಾಮಾಯಣ
ಓದಿದವರೆಲ್ಲರಿಗೂ ಇದು ಗೊತ್ತು. ರಾಮಸೇತು
ನಿರ್ಮಾಣಕ್ಕೆ ಅಂತ ಬಳಿಸಿದ್ದ, ತಂತ್ರಜ್ಞಾನ ಇಂದಿಗೂ ವಿಜ್ಞಾನವನ್ನು ಅಚ್ಚರಿಗೊಳಿಸುತ್ತದೆ.
ಕಲ್ಲುಗಳನ್ನು ಜೋಡಿಸಲು ಸಿಮೆಂಟ್ ಬಳಿಸಿಲ್ಲ, ಸುಣ್ಣದ ಜೊತೆಗೆ ಗಿಡ-ಮೂಲಿಕೆಗಳನ್ನು ಬಳಿಸಿ
ಸೇತುವೆ ನಿರ್ಮಾಣ ಮಾಡಿದ್ದಾರೆ. ಕಲ್ಲುಗಳು ನೀರಿನಲ್ಲಿ ತೆಲುವ ಹಾಗೆ ಹೈಡ್ರಾಲಿಕ್ಸ್(hydraulics) ಬಳಕೆಮಾಡಿದ್ದಾರೆ. ಆಗಿನ ಕಾಲದಲ್ಲಿ ವಿಜ್ಞಾನ ಎಷ್ಟು ಬೆಳೆದಿತ್ತು
ಎಂಬುದಕ್ಕೆ ಇದೆ ಸಾಕ್ಷಿ. ಅದನ್ನು ರಿಸರ್ಚ್ ಮಾಡುವ ಬದಲು, ನಮ್ಮ ನಾಗರಿಕತೆಯ ಹೆಮ್ಮೆಯನ್ನು
ಮೆರೆಯುವ ಬದಲು, ಅದನ್ನು ಒಡೆದು ನಮ್ಮ ನಾಗರಿಕತೆಯನ್ನು ಅವಮಾನಿಸುತ್ತಿದ್ದಾರೆ,
ಅದನ್ನು ಕೆಳಮಟ್ಟಕ್ಕೆ ತೊಗಂಡು ಹೋಗುತ್ತಿದ್ದಾರೆ. ಪಾಶ್ಚಿಮಾತ್ಯದ ಸಂಸ್ಕೃತಿಯನ್ನು
ಯೆತ್ತಿಹಿಡಿಯುತ್ತಿದ್ದಾರೆ, ಅದನ್ನೇ ನಮ್ಮ ಭಾರತದ ನಾಗರಿಕತೆಯ ಮುಂದೆ ದೊಡ್ಡದೆಂದು
ಭಿಂಭಿಸುತ್ತಿದ್ದಾರೆ. ನಮ್ಮ ರಾಮಸೇತುವನ್ನು ಮುಚ್ಚಿಹಾಕಲು ಹೊಂಚುಹಾಕುತ್ತಿದ್ದಾರೆ, ಈ
ನಾಸ್ತಿಕರು. ಈ ರಾಮಸೇತುವನ್ನು ನಾಶಮಾಡಲು ಇನ್ನೊಂದು ಕಾರಣವೇನೆಂದರೆ, ಅಲ್ಲಿ ಸಿಗುತ್ತಿರುವ
ಥೋರಿಯಂ(ಬೈಜಿಕ ಇಂಧನ(nuclear fuel)). ಅದರೆ ಅಮೇರಿಕ ಹಾಗು ಪಾಶ್ಚಿಮಾತ್ಯ ದೇಶಗಳು ಇದನ್ನು ದೋಚಲು
ನಿಂತ್ತಿದ್ದಾರೆ. ಅದಕ್ಕೆ ನಮ್ಮ
ಇಲ್ಲಿನ ಸರ್ಕಾರಗಳು ಜೊತೆಯಾಗಿವೆ.
ತಮಿಳ್ನಾಡು ಹಾಗು ಕೇರಳ ಕರಾವಳಿ ಪ್ರದೇಶಗಳಲ್ಲಿ ಥೋರಿಯಂ ದಟ್ಟವಾಗಿ
ಸಿಗುತ್ತೆ. ಅದು ರಾಮಸೇತು ಉದ್ದಗಲಕ್ಕೂ ಬಹಳ ಪ್ರಮಾಣದಲ್ಲಿ ದೊರೆಯುತ್ತದೆ. ಇದನ್ನು ವಿದೇಶಗಳಿಗೆ
ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ. ನಮ್ಮ ಪಾಲಿಗೆ ಪರ್ಯಾಯ ಇಂಧನವಾಗಿ ದೊರಕಿರುವ ಈ ಥೋರಿಯಂವನ್ನು
ನಾವು ಬಳಸುವಬದಲು, ವಿದೇಶಗಳಿಗೆ ಗಿಫ್ಟಾಗಿ ಕೊಡುತ್ತಾ ಇದ್ದೇವೆ. ಇದರಿಂದ ವಿಧ್ಯುತ್
ಉತ್ಪಾದಿಸಬಹುದು, ದೇಶಕ್ಕೆ ಮುಂದಿನ ೪೦೦-೫೦೦ ವರ್ಷಗಳಿಗೆ ವಿಧ್ಯುತನ್ನು ಪೂರೈಸಬಹುದು ಹಾಗು
ನಮ್ಮ ರೈತರಿಗೆ ಉಚಿತವಾಗಿ ವಿಧ್ಯುತ್ ಶಕ್ತಿಯನ್ನು ಕೊಡಬಹುದು. ನಮ್ಮ ದೇಶದ ಎಲ್ಲ ಶಕ್ತಿ ಕೊರತೆಯನ್ನು ನೀಗಿಸಬಹುದು,
ಆದರೆ ಶಿಪ್ಪಿಂಗ್ ಕೆನಾಲ್ ಕಟ್ಟುತ್ತೇವೆ ಎಂದು ಅಲ್ಲಿ ಇರುವ ಥೋರಿಯಂ ತೆಗೆಯುವ ಸಂಚು
ಮಾಡುತ್ತಿದ್ದಾರೆ. ಈಗಿರುವ ಶೀಪ್ಪಿಂಗ್ ರೂಟ್ ಶ್ರೀಲಂಕಾವನ್ನು ಸುತ್ತುವರೆದು ಹೋಗಬೇಕು, ಇದರಿಂದ
ಹೆಚ್ಚು ಪ್ರಯಾಣದ ಸಮಯ ಹಾಗು ಇಂಧನ ಕರ್ಚಾಗುತ್ತದೆಂದು ಹೇಳಿ ಅದನ್ನು ಒಡೆಯಲು ನಿಂತ್ತಿದ್ದಾರೆ.
ಸರಿ ಇಷ್ಟು ದಿನ ಅದೇ ಹಾದಿಯಲ್ಲಿ ಹಡುಗುಗಳು ಓಡಾಡಿ ಕೊಂಡಿದ್ದವು, ನಿಮಗೆ ಮೊದಲೇ ಈ ಆಲೋಚನೆ ಏಕೆ
ಬರಲಿಲ್ಲ, ಭಾರತಕ್ಕೆ ಸ್ವಾತಂತ್ರ ಸಿಕ್ಕು ೬೫ ವರ್ಷಗಳೇ ಆದ್ವಲ್ಲಾ. ಥೋರಿಯಂ ಇದೆ ಅಂತ ಗೊತ್ತಾದ ಮೇಲೆ
ಶಿಪ್ಪಿಂಗ್ ರೂಟ್ ನೆಪದಲ್ಲಿ , ಹಿಂದೂಗಳ ಧರ್ಮ ನಂಬಿಕೆಯಾದ ರಾಮಸೇತುವನ್ನು ಇವಾಗ ಯಾಕೆ ಒಡೆಯಲು
ನೋಡುತ್ತಿದ್ದಿರಿ?
ಪಶ್ಚ್ಯಾತದವರು ನಮ್ಮ ಸಂಕೃತಿಯನ್ನು ಹಾಳುಮಾಡಲು ಯಾವಾಗಿನಿಂದಲೂ ಹೊಂಚು
ಹಾಕುತ್ತಿದ್ದಾರೆ, ಇದು ನಿಮಗೆಲ್ಲ ಗೊತ್ತಿರುವ ವಿಷಯ. ನಮ್ಮ ಪುರಾತತ್ವವನ್ನು ಹಾಗು ನಮ್ಮ
ಸಂಸ್ಕೃತಿಯನ್ನು ಉಳಿಸಬೇಕು, ಇದಕ್ಕೆ ಎಲ್ಲಾ ಹಿಂದೂಗಳು ಒಂದಾಗಿ ಹೋರಾಡಬೇಕು.
ನಮ್ಮ ನಾಗರಿಕತೆಯ ಹಾಗು ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ
ರಾಮಸೇತುವನ್ನು ಉಳಿಸಬೇಕು. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶ್ರುಧ್ರ ಯೆನ್ದೆಲ್ಲದೆ
ಎಲ್ಲರೂ, ಇದನ್ನು ಉಳಿಸಲು ಹೋರಾಡಬೇಕು.
ಜೈ ಶ್ರೀರಾಮ