Monday, October 29, 2012

Haaruva Tattegalu - Naa kandaddu


ಹಾರುವ ತಟ್ಟೆಗಳು – ನಾ ಕಂಡದ್ದು!






ಅದು 2000ರ ಏಪ್ರಿಲ್ ತಿಂಗಳು, ನಾನು ಧಾರವಾಡ ನ JSS ಕಾಲೇಜಿನಲ್ಲಿ ಪಿಯುಸಿ ಓದುತ್ತಿದೆ. ಸಮ್ಮರ್ ಹಾಲಿಡೇಸ ನಡೀತಿತ್ತು, ಹಂಚಿನಮನೆ ಕ್ಲಾಸೆಸ್ಗೆ ಹೊಗ್ತೀದ್ದೆ. ಬಹಳ ಆರಾಮಾಗಿ ಸ್ಟುಡೆಂಟ್ ಲೈಫ್ ನಡಿಸುತ್ತಾ, ಗೆಳೆಯರೊಂದಿಗೆ ಲೇಟ್ ನೈಟ್ ಮೂವೀಸ್, ಚಾಟಿಂಗ್, ಮಧ್ಯರಾತ್ರಿಯಲ್ಲಿ ಒಂದಿಬ್ಬರ ಫ್ರೆಂಡ್ಸ್ ಜೊತೆ ವಾಕಿಂಗ್ ಭರವಾಗಿ ಸಾಗುತಿದ್ದ ದಿನಗಳು. ಮಾಮೂಲಿಯಾಗಿ ಲೇಟಾಗಿ ಮಲಗಿ, ಬೇಗ ಏಳುವ ಅಭ್ಯಾಸವಾಗಿತ್ತು, ಏಕೆಂದರೆ ಬೆಳೆಗ್ಗೆ ಟಿಯುಶನ ಕ್ಲಾಸ್ಸೆಸ್ಗೆ ಹೋಗಬೇಕಿತ್ತು. ಬೆಳೆಗ್ಗೆ 5.30 ಗೆಲ್ಲಾ ಟಿಯುಶನಗೆ ಹಾಜಿರಾತಿ, ಆಮೇಲೆ ಒಂದಿಸ್ಟು ಹುಡಿಗೀರ್ನ ಲೈನ್ ಹೊಡಿಯೋದು,  ಪಾಠ ಕೇಳೋದು ಅಸ್ಟಕಸ್ಟೇ. ನನಗೆ ಓದುವದರ ಮೇಲೆ ಸ್ವಲ್ಪ ಆಸಕ್ತಿ ಕಡಿಮೆಯೀತ್ತು, ಆದರೆ ಜನರಲ್ ನಾಳೆಡ್ಜ ವಿಷಯಗಳಲ್ಲಿ ಬಹಳ ಇಂಟರೆಸ್ಟ ಇತ್ತು. ಅದರಲ್ಲೂ ಹಾರುವ ತಟ್ಟೆಗಳ(UFO) ಬಗ್ಗೆ ರಿಸರ್ಚ್ ಮಾಡುತಿದ್ದೇ, ಅವುಗಳ ನಿಜವಾಗಿಯೂ ಇವೆಯಾ ಅಥವಾ ಇವೆಲ್ಲಾ ಬರಿ ಕಟ್ಟು ಕಥೆಗಳಾ ಎಂದು ತಿಳಿಯಲು ಪ್ರಯತ್ನ ಮಾಡುತಿದ್ದೇ. ಅದೇನೂ ಹೇಳ್ತಾರಲ “ಬಯಸಿದ್ದು ಅದೇ, ಸಿಕ್ಕಿದ್ದು ಅದೇ” ಅಂತ, ಹಾಗೆ ಆಯಿತು ನನ್ನ ವಿಷಯದಲ್ಲಿ. ಒಂದು ರಾತ್ರಿ ನಾನು ಮತ್ತೆ ನನ್ನಿಬ್ಬರ ರೂಮಮೆಟ್ಸ್ ಜೊತೆ ಹೊರಗೆ ನನ್ನ ರೂಮಿನ ಎದುರಿಗಿರುವ ರೋಡಿನ ಮೇಲೆ ಕುಳಿತಿದ್ದೆ. ಏನೋ ಮಾತಗಳು ಆಡುತ್ತಾ ಕುಳಿತುಕೊಂಡಿದ್ವಿ, ಅಸ್ಟರಲ್ಲೇ ನಮ್ಮ ಓನರ್(Landlord or owner) ಮಗ ಹೊರಗೆ ಬಂದು, ಆಕಾಶ ನೋಡುತ್ತಾ “ ಅಣ್ಣಾ ಮೇಲೆ ನೋಡ್ರಿ ಅಂದ....!”, ನಾವು ಥಟ್ಟನೆ ಮೇಲೆ ನೋಡಿದೆವು. ಅವಾಗ ನಮಗೆ ದರ್ಶನವಾಗಿದ್ದು ಒಂದು “ತ್ರಿಯಾನ್ಗುಲರ್ ಯುಯಫೋ(Triangular UFO)”.
                                                ಅದು ಸದ್ದಿಲ್ಲದೆ ನಮ್ಮ ತಲೆಯ ಮೇಲೆ ಹಾದು ಹೋಗುತಿತ್ತು, ಬಹುಶ ಆ ನಮ್ಮ ಓನರ್ ನ ಮಗ ನಮಗೆ ಮೇಲೆ ನೋಡು ಅಂತ ಹೇಳದಿದ್ದರೆ, ನಾವು ಅದನ್ನು ನೋಡಿರತ್ತಿರಲ್ಲಿಲ. ಅದನ್ನು ನಾವು ಹಿಂಬಾಲಿಸುತ್ತಾ ಓಡಿದೆವು, ಸ್ವಲ್ಪ ದೂರದಲ್ಲೇ ಅದು ಒಂದು ಗುಡ್ಡದ(Mountain) ಮೇಲೆ ಹೊರಟು ಹೋಯಿತು. ನಾವು ಅದನ್ನ ಹಿಂಬಾಲಿಸಿ ಹೋಗೋಣವೆಂದು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ. ಕಣ್ಣೆದುರಿಗಿದ್ದ ಅಚ್ಚರಿ, ನಿಮಿಷದಲ್ಲಿ ಮಾಯವಾಯಿತು. ಇದು ಕನಸೋ ? ಎಂಬ ಪ್ರಶ್ನೆ ಮೂಡಿತು. ನೋಡಿದ್ದು ಸಹಜವಾದದ್ದಲ್ಲ, ಎಂದೂ ಕಂಡಿದ್ದಿಲ್ಲದ್ದು. ಅವಗಾಗಿದ್ದ ಸಮಯ ರಾತ್ರಿ 12.30 AM, ರೂಮಿಗೆ ವಾಪಸ್ ಬಂದು ಮಲಗಿದೆ, ಎಸ್ಟೋ ಹೊತ್ತು ನಿದ್ದೆ ಬರಲಿಲ್ಲ. ಮತ್ತೆ ಬೆಳೆಗ್ಗೆ ಬೇಗ ಎದ್ದು ಟಿಯುಶನಗೆ ಹೋದೆ, ಎಲ್ಲರಲ್ಲೂ ರಾತ್ರಿ ನಡೆದ ಘಟನೆ ಬಗ್ಗೆ ತಿಳಿಸಿದೆ. ಆದರೆ ಯಾರು ನಂಬಲಿಲ್ಲ, ಕೆಲವರು ನಕ್ಕರು, ಇನ್ನೂ ಕೆಲವರು “ನೀನ್ ತಲೆ ಕೆಟ್ಟಿದೆಯ” ಎಂದು ಕೇಳಿದರು. ನನ್ನ ರೂಮಮೆಟ್ಸ್ ಕೂಡ ನನ್ನಜೊತೆ ಧ್ವನಿಗೂಡಿಸಿದರು, ಆದರು ಯಾರು ನಂಬಲಿಲ್ಲ. ನನಗು ಒಂದು ನಿಮಿಷ ನಾನು ಕಂಡಿದ್ದ “ಹಾರುವ ತಟ್ಟೆಗಳ” ಬಗ್ಗೆ ಶಂಖೆಯಯೀತು. ಆಮೇಲೆ 10 ಘಂಟೆಗೆ ಟುಯುಶನ್ ಬಿಡ್ತು, ಹೊರಗಡೆ ದಿನ ಪತ್ರಿಕೆಗಳನ್ನು ಓದುವಾಗ ಫ್ರಂಟ್ ಪೇಜಿನಲ್ಲಿ ಈ ಸುದ್ಧಿ ಪ್ರಕಟವಾಗಿತ್ತು, ಆ ಸುದ್ಧಿ ಹೀಗಿತ್ತು “ ಧಾರವಾಡ ನ ಕೆಲ ಭಾಗಗಳಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ, ನಮ್ಮ ವರದಿ ವಿಭಾಗಕ್ಕೆ ಹಲವಾರು ಜನಗಳು ಫೋನು ಮಾಡಿ ತಿಳಿಸಿದ್ದಾರೆ” ಇದನ್ನು ಓದಿ ನನ್ನ ಸಂತೋಷಕ್ಕೆ ಪಾರವೆ ಇರಲಿಲ್ಲ. ಇದನ್ನು ಎಲ್ಲರಿಗೂ ತೋರಿಸಿದೆ, ಎಲ್ಲರೂ ನಂಬಿದರು, ಇನ್ನು ಕೆಲವರಂತೂ ನಾ ಕಂಡ ಅಚ್ಚರಿಯ ಬಗ್ಗೆ ಚಿಕ್ಕ ಮಕ್ಕಳಂತೆ ಕುಳಿತು ಕಥೆ ಕೇಳಿದರು. ನನಗಂತೂ ಎಲ್ಲಿಲ್ಲದ ಸಂತೃಪ್ತಿ ಹಾಗು ಯುಯಫೋ(UFO) ಗಳ ಬಗ್ಗೆ ಇನ್ನಸ್ಟು ಉತ್ಸಾಹ ಹುಟ್ಟಿಸಿತು. ಅಲ್ಲಿಗೆ ನನ್ನ ರೀಸರ್ಚ್ ಮುಗಿಯಲಿಲ್ಲ, ಸಮಯ ಸಿಕ್ಕಾಗಲೆಲ್ಲ ಈ ವಿಸ್ಮಯ ತಟ್ಟೆಗಳು, ಹಾರುವ ಈ ನಿರ್ಜೀವ ಹಕ್ಕಿಗಳ ಬಗ್ಗೆ ವಿಷಯಗಳನ್ನು ಹೆಕ್ಕಿ ಹಾಕುತ್ತಿದ್ದೆ. ನನ್ನ ಈ ಅನುಭವವನ್ನು ಆನ್ಲೈನ್ ವೆಬ್ಸೈಟ್ನಲ್ಲಿ ರೆಗಿಸ್ಟರ ಮಾಡಿದ್ದೇನೆ, ಲಿಂಕ್  ಇಲ್ಲಿದೆ
ಅಲ್ಲಿಗೆ ಯುಯಫೋಗಳ ಬಗ್ಗೆ ನನ್ನ ಪರಿಶೋದನೆ ನಿಲ್ಲಲಿಲ್ಲ, ಅವುಗಳ ಬಗ್ಗೆ ಎಸ್ಟೋ ಗೂಗಲ್(google) ಮಾಡಿದ್ದೇನೆ. ಯುಯಫೋ ಎಂದರೆ unidentified flying objects ಕೆಲವರಂತೂ ಅವುಗಳನ್ನು ಫ್ಲಯಿಂಗ್ ಸಾಸೆರ್ಸ್(flying saucers) ಎಂದು ಕರೆಯುತ್ತಾರೆ , ನಾನು ಕನ್ನಡದಲ್ಲಿ ಅವುಗಳನ್ನು ಚೊಕ್ಕವಾಗಿ ಹಾರುವ ತಟ್ಟೆಗಳೆಂದು ಹೆಸರಿಟ್ಟುಕೊಂಡಿದ್ದೇನೆ. ನಿಮಗೆ ನನ್ನ ನೈಜ ಕಥೆ   ಇಷ್ಟವಾಯೀತಾ?

Email ID : talk2desai@gmail.com

Monday, October 22, 2012

Naavu Putana Makkala ?




ನಾವು ಪುತನಾ(ಪೂತನಿ) ಮಕ್ಕಳಾ?





ನಾವು ನಮ್ಮ ನಾಗರಿಕತೆಯನ್ನು ಆಳವಾಗಿ ಅಧ್ಯಯನ ಮಾಡಿದರೆ, ನಮಗೆ ತಿಳಿಯುವ ಸತ್ಯವೇನೆಂದರೆ, ನಾವು ನಮ್ಮ ಅನುಭವದಿಂದ ಜೀವನೋಪಾಯಗಳನ್ನು ಕಲಿತುಕೊಂಡು, ಅವುಗಳನ್ನು ಅನುಸರಿಸುತ್ತಾ ಬಂದೆವು.  ನಾವು ಪಟ್ಟಿರುವ ಅನುಭವಗಳಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ಇತ್ತು. ನಾವು ಇದು ಒಳ್ಳೆಯ ಅನುಭವ”  ಎಂಬ ನಿರ್ಧಾರಕ್ಕೆ ಬರಲು ಬಹಳ ವರ್ಷಗಳ ಸಂಶೋಧನೆ, ಎಲ್ಲರ ಅಭಿಪ್ರಾಯಗಳು, ತರ್ಕವಾದಿಗಳ ಜೊತೆ ಚರ್ಚಿಸಿ, ಈ ಒಳ್ಳೆಯ ಅನುಭವಗಳನ್ನು ಸಿದ್ಧಾಂತ, ಶಾಸ್ತ್ರ, ಗಣಿತ, ವೇದಗಳೆಂದು ಹೆಸರಿಟ್ಟು, ಅವುಗಳನ್ನು ನಮ್ಮ ನಾಗರಿಕತೆಗೆ ಅಥವಾ ಪೀಳಿಗೆಗೆ ಹಸ್ತಾಂತರ ಮಾಡುತ್ತಾ ಬಂದೆವು. ನಾವು ಕಲೆಹಾಕಿರುವ ವೇದಗಳು, ಶಾಸ್ತ್ರಗಳು ನಮ್ಮ ಹವಮಾನಕ್ಕೆ ಅನುಗುಣವಾಗಿ, ನಮ್ಮ ಮಣ್ಣು, ನೀರು, ಸೂರ್ಯ, ಗಾಳಿ, ಇವುಗಳಿಗೆ ತಕ್ಕಂತೆ ಅವುಗಳನ್ನು ರೂಪಿಸಲಾಗಿದೆ.  ಇವುಗಳನ್ನು ಅನುಸರಿಸುತ್ತಾ ನಮ್ಮ ಪೂರ್ವಜರು ಒಳ್ಳೆಯ ಜೀವನ ನಡೆಸಿದರು.  ಗೆಳೆಯರೇ, ಇಲ್ಲಿ ಒಳ್ಳೆಯ ಜೀವನವೆಂದರೆ ಅಧ್ಯಾತ್ಮಿಕವಾಗಿ, ಸಂಪ್ರದಾಯಕವಾಗಿ, ಆರೋಗ್ಯವಾಗಿ ಎಂಬರ್ಥ. ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ವಿಜ್ಞಾನಕ್ಕೆ ಏನೂ ಕೊರತೆ ಇರಲ್ಲಿಲ್ಲ, ಅದರಲ್ಲೂ ಚಿಕಿತ್ಸೆ, ಔಷಧಿಗಳಲ್ಲಂತೂ ಬಹಳ ಮೇಲುಗೈಯಿತ್ತು.  ಅದನ್ನೇ ನಾವು ಇವಾಗ ಅರ್ಯುವೇದ, ಹೋಮಿಯೋಪತಿ, ಯುನಾನಿ ಎಂದು ಕರೆಯುತ್ತೇವೆ.
ಸಾವಿರಾರು ವರ್ಷಗಳಿಂದಲೂ, ನಮ್ಮ ಕೃಷಿಗಾಗಿ ಬಳಸುತ್ತಿದ್ದ, ವಿಜ್ಞಾನ ಹಾಗೂ ತಂತ್ರಜ್ಞಾನ ಬಹಳ ಉಪಯೋಗಕಾರಿ ಹಾಗೂ ಫಲಪ್ರದವಾಗಿತ್ತು.  ಕೃಷಿ ಪರಶರಎಂಬ ಪುರಾತನ ಸಂಸ್ಕøತ ಸಂಗ್ರಹದಲ್ಲಿ ಕೃಷಿಯ ಬಗ್ಗೆ ಅಗಿನಿಂದಲೂ ಅನುಸರಿಸುತ್ತಿದ್ದ ವಿಧಾನಗಳನ್ನು ವಿವರಿಸಲಾಗಿದೆ.  ರೈತರು ನಮ್ಮ ಸನಾತನ ವಿಜ್ಞಾನವನ್ನು ಬಳಸಿಕೊಂಡು, ಒಳ್ಳೆಯ ಬೆಳೆಯನ್ನು ತೆಗೆಯುತ್ತೀದ್ದರು.  ಅದಕ್ಕೆ ದೊಡ್ಡ ಸಾಕ್ಷಿ ಏನೆಂದು ಕೇಳಿದರೆ, ನಮ್ಮ ಇತಿಹಾಸವೇ ಅದಕ್ಕೆ ದೊಡ್ಡ ಪ್ರಮಾಣ.  ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶ.  ಯಾವಾಗಲೂ ಸಸ್ಯ ಶಾಮಲವಾದ, ದವಸ-ಧಾನ್ಯಗಳಲ್ಲಿ ಸಮೃದ್ದವಾಗಿದ್ದಂತಾ ದೇಶ. ಒಳ್ಳೆಯ ಫಸಲು ಬೆಳೆದು ನಮ್ಮ ಮಾರುಕಟ್ಟೆಗಳಲ್ಲಿ ಮಾರುವುದಲ್ಲದೇ, ಯೋರೋಪ್, ಆಫ್ರಿಕಾ ಖಂಡಗಳಲ್ಲಿ ನಾವು ಪದಾರ್ಥಗಳ ವಿನಿಮಯ ಮಾಡುತ್ತೀದ್ದೆವು.  ನಾವು ಇಷ್ಟು ಸಂಪತ್ತಭರಿತವಾಗಿರಲು ನಾವು ಅನುಸರಿಸುತ್ತಿದ್ದ ಸನಾತನ ಕೃಷಿ ವಿಧಾನಗಳೇ ಕಾರಣ.  ಆ ಕೃಷಿ ಪದ್ಧತಿಗಳನ್ನು ನಾವಿಂದು ಸಾವಯವ ಕೃಷಿ (organic farming) ಎಂದು ಕರೆಯುತ್ತೇವೆ. ಈ ಸಾವಯವ ಕೃಷಿಯನ್ನು ನಾವು ಪಾಚೀನ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ, ಹೆಸರು ಮಾತ್ರ ಬೇರೆ ಇಟ್ಟುಕೊಂಡಿದ್ದೇವೆ ಅಷ್ಟೆ. 
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 5-10 ವರ್ಷಗಳ ನಂತರ, ಕೆಲವು ರಾಜ್ಯಗಳಲ್ಲಿ ಬರ ಹಾಗೂ ನದಿ ಪ್ರವಾಹಗಳಿಂದ ಕೃಷಿ ಬೆಳೆ ನಾಶವಾಗಿ, ಹೊರ ದೇಶದಿಂದ ಆಹಾರ, ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಯಿತು.  ಹಾಗೂ ಮುಂದಿನ ದಶಕಗಳಲ್ಲಿ ಆಹಾರ ಕೊರತೆಗಳನ್ನು ನಿಗಿಸಲು, ಅಗಿನ ಸರ್ಕಾರಗಳು ಅಜೈವಿಕ ಕೃಷಿಯನ್ನು ನಮ್ಮ ಭಾರತಕ್ಕೆ ಪರಿಚಯಿಸಿದರು.  ಇದರಿಂದ ಭಾರತ ದೇಶ ಐದಾರು ವರ್ಷಗಳಲ್ಲಿ, ತನ್ನ ಆಹಾರ ಕೊರತೆಯನ್ನು  ನಿಗಿಸಿದಲ್ಲದೇ, ಹೆಚ್ಚಿನದನ್ನು ಹೊರದೇಶಗಳಿಗೆ ಮಾರಿದರು.  ಇಲ್ಲಿಗೆ ಅಜೈವಿಕ ಕೃಷಿಯನ್ನು ನಾವು ನಿಲ್ಲಿಸಿ, ಮತ್ತೆ ಸಾವಯವ ಕೃಷಿಗೆ ಮರಳಬೇಕಾಗಿತ್ತು, ಅದರೆ ಅದು ಅಗಲಿಲ್ಲ.  ಅಜೈವಿಕ (inorganic) ಪದ್ಧತಿಗಳಿಂದ ಹೆಚ್ಚು ಬೆಳೆ ಬಂದಿದ್ದರಿಂದ ರೈತರು ಹಾಗೂ ಸರ್ಕಾರಗಳ ಆಸೆ ಹೆಚ್ಚಾಯಿತು.  ಅತಿ ಹೆಚ್ಚಾಗಿ ಉತ್ಪಾದಿಸಿ, ಹಣ ಗಳಿಸಲಿಕ್ಕೆ ನಿಂತರು.  ಇದಲ್ಲದೇ ಆಂಗ್ಲರು, ಇನ್ನು ಶಕ್ತಿಶಾಲಿ ರಾಸಾಯನಿಕ ಗೊಬ್ಬರಗಳನ್ನು, ಕ್ರಿಮಿನಾಶಕಗಳನ್ನು ತಯಾರಿಸಿ, ಅದರ ದುಷ್ಪರಿಣಾಮಗಳನ್ನು ಮರೆಮಾಚಿ, ನಮ್ಮ ದೇಶದಲ್ಲಿ ಮಾರತೊಡಗಿದರು, ಇಲ್ಲೇ ಕಾರ್ಖಾನೆಗಳನ್ನು ಸ್ಥಾಪಿಸಿದರು.  ನಾವು ಸಾವಯವ ಕೃಷಿಯಲ್ಲಿ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಬೆರಣಿ (cow dung), ಗೋಮುತ್ರ (cow urine) ಹಾಗೂ ಸಸ್ಯ ತ್ಯಾಜಗಳಿಂದ(plant waste) ತಯಾರಿಸಿ ಬಳಸುತ್ತೇವೆ.  ಮೊದಲು ನಮ್ಮ ಪೂರ್ವಜರು ಇದೇ ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಇದರಿಂದ ನಮಗೆ ಉತ್ತಮ ಹಾಗೂ ಆರೋಗ್ಯಕರ ಬೆಳೆಗಳು ಬರುತ್ತಿದ್ದವು.  ಅದರೆ ಇವತ್ತು ಅಜೈವಿಕ ಕೃಷಿಯಿಂದ ನಮ್ಮ ಭೂಮಿ, ತನ್ನ ಫಲವತ್ತತೆಯನ್ನು ಕಳೆದುಕೊಂಡು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುವಂತಾಗಿದೆ.  ಇದರಿಂದ ಮಣ್ಣಿನಲ್ಲಿ  ಹೆಚ್ಚು ರಾಸಾಯನಿಕ ಸೇರಿಕೊಂಡು ಮಣ್ಣನ್ನು ವಿಷವನ್ನಾಗಿ ಮಾಡುತ್ತಿದೆ.  ಹೆಚ್ಚು ರಾಸಾಯನÀದಿಂದ, ಮಣ್ಣು ಸುಟ್ಟು ಹೋಗುತ್ತಿರುವ ಲಕ್ಷಣಗಳು ಕಾಣಿಸಿಕೊಂಡಾಗರೈತರು ಇನ್ನೂ ಹೆಚ್ಚು ನೀರನ್ನು ತಮ್ಮ ಕೃಷಿ ಭೂಮಿಗೆ ಉಣಿಸಬೇಕಾಯಿತು. ಮಣ್ಣಿನಲ್ಲಿ ಹೆಚ್ಚಾಗಿರುವ ರಾಸಾಯನಿಕ ಪದಾರ್ಥಗಳು ತರಕಾರಿಗಳಲ್ಲಿ, ಹಣ್ಣುಗಳಲ್ಲಿ, ಧಾನ್ಯಗಳಲ್ಲಿ ಸೇರಿಕೊಂಡವು, ಅಮೇಲೆ ಅವು ನಮ್ಮ ಶರೀರವನ್ನು ಸೇರಿದವು.  ಮಣ್ಣಿಗೆ ಹಾಗೂ ಫಸಲುನಲ್ಲಿ ಸಿಂಪಡಿಸಲಾದ ರಾಸಾಯನಿಕ ಕ್ರಿಮಿನಾಶಕಗಳು, ನಾವು ತಿನ್ನುವ ಪದಾರ್ಥಗಳಲ್ಲಿ ಸೇರಿಕೊಂಡವು.  ಹಾಗಾಗಿ ನಾವು ತಿನ್ನುವ ಪ್ರತಿಯೊಂದು ಪದಾರ್ಥ ವಿಷಮಯವೇ.  ಅಮೃತವನ್ನು ಉಣ್ಣಿಸುವ ನಮ್ಮ ಭೂಮಿ ತಾಯಿ, ಇವಾಗ ವಿಷವನ್ನು ಉಣಿಸುತ್ತಿದ್ದಾಳೆ.  ಅದಕ್ಕೆ ಕಾರಣ ನಾವು ಅವಳಿಗೆ ಬಡಿಸುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ಅನುಸರಿಸುತ್ತಿರುವ ಅಜೈವಿಕ ಪದ್ಧತಿಗಳೇ ಕಾರಣ.
ಅಜೈವಿಕ ಕೃಷಿಯಿಂದಾಗುವ ದುಷ್ಪರಿಣಾಮಗಳನ್ನು ನಾನ್ನಿಲ್ಲಿ ಪಟ್ಟಿ ಮಾಡಲು ಇಚ್ಚಿಸುತ್ತೇನೆ.  ಮೊದಲನೆಯದಾಗಿ ಹೇಳಬೇಕೆಂದರೆ ನಮ್ಮ ಕೃಷಿ ಭೂಮಿಯಲ್ಲಿ ದೊಡ್ಡ ಪ್ರಮಾಣದಲ್ಲಿರುವ ಏರೆಹುಳು (ಮಳೆ ಹುಳು), ಅವುಗಳನ್ನು ನಾವು ಕೊಲ್ಲುತ್ತಿದ್ದೇವೆ.  ಅಜೈವಿಕ ಕೃಷಿಯಲ್ಲಿ  ಬಳಸಲಾಗುವ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳೇಅವುಗಳನ್ನು ಸಾಯಿಸುತ್ತಿವೆ.  ಅದ್ದರಿಂದ ರೈತರ ಸ್ನೇಹ ಜೀವಿಗಳೆಂದು ಕರೆಯಲಾಗುವ ಏರೆಹುಳುಗಳು ಇವತ್ತಿನ ಪರಿಸ್ಥಿತಿಯಲ್ಲಿ ಭೂಮಿಯಲ್ಲಿ ಸಿಗುವುದಿಲ್ಲ, ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತವೆ.  ಏರೆಹುಳುಗಳ ಲಾಭ ಏನೆಂದರೆ ಎಲ್ಲಾ ರೈತರಿಗೆ ಹಾಗೂ ಸಾಮಾನ್ಯ ಜನರಿಗೂ ಗೊತ್ತು.  ಅತೀ ಹೆಚ್ಚು ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮಣ್ಣು ಸುಟ್ಟು ಹೋಗುತ್ತಿದೆ, ಅದರಿಂದಾಗಿ ಭೂಮಿಯು ತನ್ನ ಫಲವಂತಿಕೆ (fertility) ಕಳೆದುಕೊಳ್ಳುತ್ತಿದೆ.  ಭೂಮಿಯ ಫಲವಂತಿಕೆಯನ್ನು ಮತ್ತೆ ನೈಜ ರೂಪಕ್ಕೆ ತರಲು, ಬಹಳ ಸಮಯ ಹಾಗೂ ಪರಿಶ್ರಮ ಬೇಕಾಗುತ್ತದೆ.  ಮಣ್ಣಿನ ತೇವಾಂಶ ಕಡಿಮೆಯಾಗಿ ಭೂಮಿಗೆ ಹೆಚ್ಚು ನೀರುಣಿಸಬೇಕಾಗುತ್ತಿದೆ.  ಇದರಿಂದ ರೈರಿಗೆ ಹೆಚ್ಚಿನ ಖರ್ಚು ಹಾಗೂ ಅಂತರ್ಜಲವನ್ನು  ಹೆಚ್ಚಿನ ಪ್ರಮಾಣದಲ್ಲಿ ಹೊರಗೆಡಬೇಕಾಗುತ್ತಿದೆ.  ನಿಮಗೆಲ್ಲಾ ಗೊತ್ತು ಭಾರತದ ಬಹುತೇಕ ನಗರಗಳಲ್ಲಿ ಅಂತರ್ಜಲದ ಸಮಸ್ಯೆ ಉಲ್ಬಣವಾಗುತ್ತಿದೆ.  ಅದಲ್ಲದೇ ಇನ್ನೊಂದು ಗಮನಿಸುವ ವಿಷಯವೆಂದರೆ, ನಾವು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ, ನಮ್ಮ ಅಂತರ್ಜಲವನ್ನು ಸೇರುತ್ತಿದೆ.  ಅದನ್ನೆ ನಾವು ಕುಡಿಯುವ ನೀರು ಹಾಗೂ ದಿನನಿತ್ಯ ಕಾರ್ಯಗಳಿಗೆ ಬಳಸುತ್ತಿದ್ದೇವೆ.  ನೀರಿನ ರುಚಿಯಂತು ಕೇಳಬೇಡಿ. ಇನ್ನೂ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು, ನಮ್ಮ ಶರೀರ ಸೇರಿ, ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತಿವೆ.  ಹೀಗಿರುವಾಗ ತಾಯಿಯ ಹಾಲಿನಲ್ಲೂ ಇದು ಸೇರಿ, ತಾಯಿಯ ಹಾಲು ಕುಡಿಯುವ ಕಂದಮ್ಮಗಳಿಗೆ, ಸೋಡಿಯಂ ಅಧಿಕ ಪ್ರಮಾಣದಲ್ಲಿ ಸೇರಿ ಸೋಡಿಯಂಅಧಿಕ್ಯತೆ(hypernatremia) ಗೆ ತುತ್ತಾಗುತ್ತಿದ್ದಾರೆ.  ಇದರಿಂದ ಕಂದಮ್ಮಗಳು (ಹಸುಗೂಸು) ಅತಿಯಾಗಿ ಡೀಹೈಡ್ರೇಷನ್ (dehydration) ಗೆ ಒಳಗಾಗುತ್ತಿದ್ದಾರೆ.  ಇದಲ್ಲದೆ ಇವತ್ತಿನ ಸಣ್ಣ ಮಕ್ಕಳು ಎಷ್ಟೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.  ಇವತ್ತಿನ ವೈದ್ಯರು ಹೇಳುವುದನ್ನು ನೀವು ಕೇಳಿರಬಹುದು, ಅದೆನೇಂದರೆ ಇವತ್ತಿನ ಮಕ್ಕಳು ಬಹಳ ನಾಜೂಕು, ಸೂಕ್ಷ್ಮ.  ಬೇಗೆನೆ ಅವಕ್ಕೆ ಕಾಯಿಲೆಗಳು ಅಂಟಿಕೊಳ್ಳುತ್ತೆ, ಅವುಗಳು ಹವಮಾ£ದ ಏರುಪೇರುಗಳಿಗೆ ಬಹಳ ಬೇಗ ತುತ್ತಾಗುತ್ತಾರೆ, ಹೀಗೆಲ್ಲಾ ಹೇಳುತ್ತಾರೆ.”  ಇದಕ್ಕೆಲ್ಲಾ ಏನು ಸ್ವಾಮಿ ಕಾರಣಗಳುನಮ್ಮ ತಾಯಿ ನಮಗೆ ಉಣಿಸುತ್ತಿರುವ ಹಾಲು ಹಾಗೂ ಪದಾರ್ಥಗಳೇ ಇದಕ್ಕೆ ಕಾರಣ. ಈಗಿನ ಎಷ್ಟೂ ತಾಯಂದಿರು ತಮ್ಮ ಎದೆ ಹಾಲನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆಅದರಲ್ಲಿ ಇರೋ ಸೋಡಿಯಂ, ಯುರಿಯಾಗಳ ಪ್ರಮಾಣವನ್ನು ತಿಳಿದುಕೊಂಡು, ತಮ್ಮ ಮಕ್ಕಳಿಗೆ ಎದೆಹಾಲು ಕೊಡುವುದೊ ಅಥವಾ ಬೇಡವೂ ಎಂದು ನಿರ್ಧರಿಸುತ್ತಿದ್ದಾರೆ.  ನಮ್ಮನ್ನು ಜನ್ಮ ಕೊಟ್ಟ  ತಾಯಂದಿರೆ ಪುತನಾಗಳಾದರೆ ಹೇಗೆನಮಗೆ ಅಕ್ಕಿ, ಜೋಳ, ಗೋದಿ, ರಾಗಿ ಹಾಗೂ ಹಣ್ಣುಗಳು, ತರಕಾರಿಗಳನ್ನು ನೀಡುವ ನಮ್ಮ ಭೂಮಿತಾಯಿ ಪುತನಾವಾದಳೇ?


ನೀವು ಪುತನಾ ಕಥೆ ಕೇಳಿರಬಹುದು, ದ್ವಾಪರ ಯುಗದಲ್ಲಿ ಕೃಷ್ಣನು ಇನ್ನೂ ಕಂದಮ್ಮವಾಗಿದ್ದಾಗ, ಕೃಷ್ಣನನ್ನು ತನ್ನ ಸ್ತನದ ಹಾಲನ್ನು (ಎದೆಹಾಲು) ವಿಷವಾಗಿ ನೀಡಿ, ಕೊಲ್ಲಲು ಯತ್ನಿಸಿದಳು.  ಆದರೆ ಕೃಷ್ಣನು, ಅದನ್ನು ಮೊದಲೆ ಅರಿತು ಅವಳ ಪ್ರಾಣವನ್ನು ತೆಗೆಯುತ್ತಾನೆ.  ಅದರೆ ನಾವು ಕೃಷ್ಣನಂತೆ ದೈವಿ ಮಗು ಅಲ್ಲ, ಕೃಷ್ಣನಂತೆ ಸಶಕ್ತರೂ ಅಲ್ಲ. ನಮ್ಮ ತಾಯಂದಿರು ವಿಷಪೂರಿತ ಧಾನ್ಯಗಳು, ತರಕಾರಿಗಳು, ಹಣ್ಣು, ನೀರು, ಗಾಳಿಯನ್ನು ಸೇವಿಸಿ ಪುತನಾ ಗಳಾಗಿದ್ದಾರೆ. ಇದನ್ನೆಲ್ಲಾ ಪೂರೈಸುವ ಭೂಮಿತಾಯಿಯೂ ಕೂಡ ಪುತನಾ ವಾಗಿದ್ದಾಳೆ.  ಇದಕ್ಕೆಲ್ಲ ಕಾರಣ ನಾವು ಅನುಸರಿಸಿದ, ಅತೀಯಾದ ಅಜೈವಿಕ ಕೃಷಿ ಹಾಗೂ ಅಸ್ವಾಭಾವಿಕ ಪದ್ಧತಿಗಳೇ ಕಾರಣ.  ನಾನು ಅಂತಿಮವಾಗಿ ಏನು ಹೇಳಬಯಸುತ್ತೇನೆಂದರೆ ಮುಂದೆ ನೀವು ಏನು ಮಾಡಬೇಕೆಂಬುದು ನಿಮ್ಮ ಬುದ್ದಿಗೆ ಹಾಗೂ ಮನಸ್ಸಿಗೆ ಬಿಟ್ಟುಬಿಡುತ್ತೇನೆ.  ಅದರೆ ರೈತರಲ್ಲಿ ಒಂದು ಮನವಿ, ಸಾವಯವ ಕೃಷಿ ಮಾಡಿ, ನಮ್ಮ ಭೂಮಿ ತಾಯಿಯನ್ನು ಉಳಿಸಿ ಹಾಗೂ ಜನ್ಮ ಕೊಡೊ ತಾಯಂದಿರನ್ನು ಉಳಿಸಿ.

----- ಸುಧೀಂದ್ರ ದೇಸಾಯಿ


Email ID : talk2desai@gmail.com